ದಶಕಗಳ ವಿವಾದದ ದಾರಿಗೆ ಸುಖಾಂತ್ಯ ಹಾಡಿದ ತಹಶೀಲ್ದಾರ್ ಎನ್.ರಘುಮೂರ್ತಿ

 

 

 

 

ಚಳ್ಳಕೆರೆ:  ತಾಲೂಕು ಪರಶುರಾಂಪುರ ಹೋಬಳಿ ಮೋದೂರು ಗ್ರಾಮದ ಸರ್ವೆ ನಂಬರ್ 35 ರಲ್ಲಿನ ದಾರಿ ವಿವಾದ ದಶಕಗಳಿಂದ ಗ್ರಾಮಸ್ಥರಿಗೆ ತಲೆನೋವಾಗಿತ್ತು. ಇಂದು ತಹಶೀಲ್ದಾರ್ ಎನ್.ರಘುಮೂರ್ತಿ ನೇತೃತ್ವದಲ್ಲಿ   ಪೊಲೀಸ್ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಸಮಸ್ಯೆ ಅಂತ್ಯ ಹಾಡಿದ್ದಾರೆ.

 

 

ಮೇದೂರು  ಗ್ರಾಮದ ಸರ್ವೆ ನಂಬರ್ 35 ರಲ್ಲಿ ಹಲವು ದಶಕಗಳಿಂದ ಗ್ರಾಮಸ್ಥರು ಓಡಾಡುತ್ತಿದ್ದರು. ಈ ದಾರಿಯಲ್ಲಿ ಕಾಮಸಮುದ್ರ ಗ್ರಾಮದ ಈರಣ್ಣ ಮತ್ತು ಗ್ರಾಮಸ್ಥರಿಗೆ ತೀವ್ರ ವಿವಾದವಿತ್ತು. ತಹಶೀಲ್ದಾರ್  ಮತ್ತು ಜಿಲ್ಲಾಧಿಕಾರಿಗಳ ಕಚೇರಿಗೆ ಹಲವು ಬಾರಿ ಗ್ರಾಮಸ್ಥರು ಮತ್ತು ಈರಣ್ಣ ಭೇಟಿ ನೀಡಿ ದಾರಿ ವಿವಾದವನ್ನು ಬಗೆಹರಿಸುವ ಅಂತೆ ಮನವಿ ಮಾಡಲಾಗಿತ್ತು.  ಅದರಂತೆ ತಹಶೀಲ್ದಾರ್ ಎನ್.ರಘುಮೂರ್ತಿ ಮತ್ತು  ಪರಶುರಾಂಪುರ ಪೊಲೀಸ್ ಉಪನಿರೀಕ್ಷಕ ರಾದ ಸ್ವಾತಿ ಮತ್ತು ಪೊಲೀಸ್ ಸಿಬ್ಬಂದಿ ಹಾಗೂ ಕಂದಾಯ ಇಲಾಖೆಯ ಸಿಬ್ಬಂದಿಗಳು ಸರ್ವೆ ಇಲಾಖೆಯ ಸಿಬ್ಬಂದಿಗಳು ಹಾಜರಿದ್ದ ಗ್ರಾಮಸ್ಥರ ಸಮಕ್ಷಮದಲ್ಲಿ ದಾರಿಯನ್ನು ಅಳತೆ ಮಾಡಿ ಈಗಿರೋ ಅಂತ ದಾರಿಗೆ ಓಡಾಡಲು ಯಾವುದೇ ನಿರ್ಬಂಧ ಇಲ್ಲದಂತೆ ಗ್ರಾಮಸ್ಥರ ಮನವೊಲಿಸಲಾಗಿದೆ. ಗ್ರಾಮಸ್ಥರು ಮನವೊಲಿಕೆಗೆ ಕಸರತ್ತು ಮಾಡದ ತಹಶೀಲ್ದಾರ್  ಅವರು ಕೊನೆಗೆ ಎರಡು ಕಡೆಯವರು  ಸಲಹೆಯಂತೆ ಈ ದಾರಿಯಲ್ಲಿ ಓಡಾಡಲು ಯಾವುದೇ ಅಡಚಣೆ ಮಾಡುವುದಿಲ್ಲವೆಂದು ಪ್ರಮಾಣಿಕರಿಸಿದ್ದಾರೆ.  ಅದರಂತೆ  ವಿವಾದದ ದಾರಿಯನ್ನು ಸಾರ್ವಜನಿಕರಿಗೆ ಓಡಾಡಲು ಮುಕ್ತಗೊಳಿಸಲಾಯಿತು ಗ್ರಾಮದಲ್ಲಿ ಸಾಮರಸ್ಯವನ್ನು ಉಳಿಸಿಕೊಳ್ಳುವಂತೆ ಯಾವುದೇ ವಿವಾದಗಳು ಉಂಟಾಗದಂತೆ ಕ್ರಮವಹಿಸಲು ಗ್ರಾಮಸ್ಥರಿಗೆ ತಹಶೀಲ್ದಾರ್ ಎರಡು ಕಡೆಯವರಿಗೆ ಸೂಚಿಸಿದರು.

[t4b-ticker]

You May Also Like

More From Author

+ There are no comments

Add yours