ದಲಿತ ಸಮುದಾಯದ ಮೇಲೆ ನಡೆಯುತ್ತಿದ್ದ ದೌರ್ಜನ್ಯಕ್ಕೆ ಸಿಕ್ಕ‌ ಜಯದ ಸಂಕೇತವಾಗಿ ಕೋರೆಗಾಂವ್ ವಿಜಯೋತ್ಸವ

 

 

 

 

ಚಳ್ಳಕೆರೆ-01 ಕ್ರಿ.ಶ. 1800ರ ಕಾಲಘಟದಲ್ಲಿ ದಲಿತ ಸಮುದಾಯದ ಮೇಲೆ ನಡೆಯುತ್ತಿದ್ದ ದೌರ್ಜನ್ಯಕ್ಕೆ ಸಿಕ್ಕ‌ ಜಯದ ಸಂಕೇತವಾಗಿ ಕೋರೆಗಾಂವ್ ವಿಜಯೋತ್ಸವ ಆಚರಣೆ ಮಾಡಲಾಗುತ್ತಿದೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.
ಅವರು ‌ನಗರದ ಚಿತ್ರದುರ್ಗ ರಸ್ತೆಯ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಆಯೋಜಿಸಿದ್ದ 204ನೇ ಭೀಮಾ ಕೋರೆಗಾಂವ್ ವಿಜಯೋತ್ಸವ ಕಾರ್ಯಕ್ರಮಕ್ಕೆ ಚಾಲನೆ‌ ನೀಡಿ ಮಾತ‌ನಾಡಿದರು.
ಪೇಶ್ವೆಗಳು ದಲಿತರಿಗೆ ಕಠೋರವಾದ ನಿಯಮಗಳನ್ನು ಪಾಲಿಸಬೇಕಿತ್ತು.
ಅಸ್ಪೃಶರ ನೆರಳು ಹಿಂದೂ ಸವರ್ಣಿಯ ಮೇಲೆ ಬಿದ್ದರೆ, ಹಿಂದೂ ಸವರ್ಣಿಯರಿಗೆ ಮೈಲಿಗೆಯಾಗುತ್ತದೆಂಬ ಕಾರಣಕ್ಕಾಗಿ ಸಾರ್ವಜನಿಕ ಸ್ಥಳಗಳಲ್ಲಿ ಅಸ್ಪೃಶ್ಯರಿಗೆ ಪ್ರವೇಶವನ್ನೇ ನಿಷೇಧಿಸಲಾಗಿತ್ತು. ಊರನಲ್ಲಿ ಮಧ್ಯಾಹ್ನ 12 ಗಂಟೆ ಸಮಯದಲ್ಲಿ ಮಾತ್ರ ನಡೆದುಕೊಂಡು ಹೋಗಬೇಕಿತ್ತು . ಈ ಎಲ್ಲಾ ಅನ್ಯಾಯ ಮತ್ತು ದೌರ್ಜನ್ಯಗಳನ್ನು ನಿಲ್ಲಿಸಬೇಕೆಂದು ಹೋರಾಟ ಪ್ರಾರಂಭಿಸಿದ 500 ಜನ ಅಸ್ಪೃಶ್ಯ ಯುವಕರು ಪೇಶ್ವೆಗಳ ವಿರುದ್ಧ ಯುದ್ಧ ಮಾಡಲು ಬ್ರಿಟೀಷರ ಕೋರಿಕೆಗೆ ಒಪ್ಪಿಕೊಂಡರು. ಕಡೆಗೂ ಆ ಐತಿಹಾಸಿಕ ಯುದ್ದ 1818 ರ ಜನವರಿ 1ರಂದು ನಡೆದು ದಲಿತರು ಸಮಾಜದಲ್ಲಿ ಸರ್ವಶಕ್ತರು ಎಂಬುವುದನ್ನು ಸಾರಿದರು.
ದಿನ ಅಂದರೆ 1818ರ ಜನವರಿ 1ರಂದು ಪೂನಾ ನಗರದಿಂದ 15 ಕಿ.ಮೀ . ದೂರದಲ್ಲಿರುವ ಭೀಮಾ ನದಿ ತೀರದಲ್ಲಿರುವ ಕೋರೆಗಾಂವ್ ಎಂಬ ಸ್ಥಳವನ್ನು ಪೇಶ್ವೆ ಸೈನಿಕರ ಮೇಲೆ‌ ಎರಗಿ ವಿಜಯ ಸಾಧಿಸಿತು.

 

 

ತಾಲ್ಲೂಕು ದಲಿತ ಸಂಘಟನೆಗಳ ಮಹಾ ಒಕ್ಕೂಟ ದ ಅಧ್ಯಕ್ಷರಾದ ಉಮೇಶ್ ಚಂದ್ರ ಬ್ಯಾನರ್ಜಿ ಮಾತನಾಡಿ, ರಣರಂಗದಲ್ಲಿ ಬೃಹತ್ ಸಂಖ್ಯೆಯಲ್ಲಿದ್ದ ಪೇಶ್ವೆ ಸೈನಿಕರ ಜತೆ ವೀರಾವೇಶದಿಂದ ಹೋರಾಡಿ ಜಯ ಸಾಧಿಸಿದ ಅಸ್ಪಶ್ಯಯೋಧರ ನೆನಪಿಗಾಗಿ ಬ್ರಿಟೀಷರು 1921 ರ ಮಾರ್ಚ್ 21 ರಂದು ಯುದ್ಧ ನಡೆದ ಸ್ಥಳದಲ್ಲಿ 65 ಅಡಿ ಎತ್ತರದ ಭವ್ಯ ವಿಜಯ ಸ್ತಂಭವನ್ನು ನಿರ್ಮಿಸಿ, ಆ ಸ್ಥಂಬದ ಮೇಲೆ 22 ಹುತಾತ್ಮ ಯೋಧರ ಹೆಸರುಗಳನ್ನು ಕೆತ್ತಿಸಿದರು ಅವರ ಶೌರ್ಯ ಸಾಹಸಕ್ಕೆ ಗೌರವ ಅರ್ಪಿಸಿದರು.
1927 ರ ಜನವರಿ 1ರಂದು ಡಾ. ಬಾಬಾ ಸಾಹೇಬ್ ಅಂಬೇಡ್ಕರ್‌ರವರು ತಮ್ಮ ಸಾವಿರಾರು ಅನುಯಾಯಿಗಳೊಂದಿಗೆ ಪ್ರಥಮ ಬಾರಿಗೆ ‘ವಿಜಯ ಸ್ಟಂಬ‘ಕ್ಕೆ ಶ್ರದ್ದಾಂಜಲಿ ಸಲ್ಲಿಸಿದರು. ಡಾ. ಬಾಬಾ ಸಾಹೇಬ್ ಅಂಬೇಡ್ಕರ್‌ರವರು ಪ್ರಥಮ ಬಾರಿಗೆ (1927ರ ಜನವರಿ 1) ಕೋರೆಗಾಂವ್‌ನಲ್ಲಿ ‘ವಿಜಯ ಸ್ಥಂಬ‘ ಕ್ಕೆ ಗೌರವ ವಂದನೆ ಸಲ್ಲಿಸುವ ಮೂಲಕ ಅವರ ಸಾಹಸವನ್ನು ಪ್ರತಿವರ್ಷ ನೆನಪಿಸುವಂತೆ ಮಾಡಿದರು ಎಂದರು.

[t4b-ticker]

You May Also Like

More From Author

+ There are no comments

Add yours