ದಕ್ಕಲಿಗರ ಭೂ ಒಡೆತನದ ಕಡತ ವಿಲೇವಾರಿ ತುರ್ತಾಗಿ ಮಾಡಲಿ; ಎಚ್.ಆಂಜನೇಯ.

 

 

 

 

ಬೆಂಗಳೂರು; ಫೆ -4.
ನಾನು ಸಮಾಜ ಕಲ್ಯಾಣ ಸಚಿವನಾಗಿದ್ದಾಗ 2018
ರಲ್ಲಿ ರಾಜ್ಯದ ದಕ್ಕಲಿಗ ಸಮುದಾಯದ
ಬಹುತೇಕರಿಗೆ ವೈಯುಕ್ತಿಕ ಸೌಲಭ್ಯಗಳನ್ನ ಕೊಡಿಸಲಾಗಿತ್ತು ಹಾಗೂ ಭೂ-ಒಡೆತನ ಯೋಜನೆ ಜಾರಿಗೆ ತರುವ ಪ್ರಯತ್ನ ಶೇ.80ರಷ್ಟು ಕೆಲಸ ಮುಗಿಸಲಾಗಿತ್ತು. ಈಗ ಆ ಕಾರ್ಯ
ನೆನೆಗುದಿಗೆ ಬಿದ್ದಿದ್ದು, ಹಾಲಿ ಸರ್ಕಾರ ಉಳಿದಿರುವ ಕಡತ ವಿಲೇವಾರಿ ಕೆಲಸವನ್ನು ತುರ್ತಾಗಿ ಮಾಡಬೇಕಿದೆ ಎಂದು ಮಾಜಿ ಸಚಿವ ಎಚ್.ಆಂಜನೇಯ ಅಭಿಪ್ರಾಯಪಟ್ಟರು.
ಬೆಂಗಳೂರು ನಗರದ ಕುಮಾರ ಕೃಪಾದಲ್ಲಿನ ಗಾಂಧಿಭವನದಲ್ಲಿ ಆಯೋಜಿಸಲಾಗಿದ್ದ ‘ದಕ್ಕಲಿಗರೊಡನೆಒಂದು ಸಂವಾದ’ ಕಾರ್ಯಕ್ರಮದಲ್ಲಿಪ್ರಾಸ್ತಾವಿಕ ಮಾತುಗಳನ್ನಾಡಿದ ಅವರು,
2018 ರಲ್ಲಿ ಮೊದಲ ಬಾರಿಗೆ ಸಿದ್ಧರಾಮಯ್ಯ
ನೇತೃತ್ವದ ಸರ್ಕಾರವು ದಕ್ಕಲಿಗರ
ಬಾಳಿನಲ್ಲಿ ಪ್ರವೇಶ ಮಾಡಿ ಅವರನ್ನು
ಮುಖ್ಯವಾಹಿನಿಗೆ ತರುವ ಪ್ರಯತ್ನ
ನಡೆಸಿತು.  ಆಗಿನ ಸಂದರ್ಭದಲ್ಲಿ 290 ದಕ್ಕಲಿಗ
ಕುಟುಂಬಗಳನ್ನು ಗುರುತಿಸಿ 268 ಕ್ಕೂ
ಹೆಚ್ಚು ಕುಟುಂಬಗಳಿಗೆ ವೈಯುಕ್ತಿಕ
ಸಾಲ-ಸಹಾಯಧನ, ವಾಹನ, ಗೂಡ್ಸ್
ಗಾಡಿಗಳನ್ನು ವಿತರಿಸಲಾಗಿತ್ತು ಎಂದರು.
ಸದರಿ ಕಾರ್ಯಕ್ರಮವನ್ನು ವಿಧಾನಸೌಧದ ಆವರಣದಲ್ಲಿ ಆಯೋಜಿಸಿ ಸ್ವತಃ ಮುಖ್ಯಮಂತ್ರಿ ಸಿದ್ಧರಾಮಯ್ಯ
ಫಲಾನುಭವಿಗಳಿಗೆ ಸೌಲಭ್ಯಗಳನ್ನು ವಿತರಣೆ ಮಾಡಿದ್ದರೆ.ಈ ನಡುವೆ ದಕ್ಕಲಿಗರಿಗೆ ಭೂ-ಒಡೆತನ ಯೋಜನೆಯಡಿ 235 ಎಕರೆ ಜಮೀನು ಗುರುತಿಸಲಾಗಿತ್ತು. ಭೂ ಖರೀದಿ ಹಸ್ತಾಂತರದ ಹಂತದಲ್ಲಿ ಪ್ರಕ್ರಿಯೆ
ನಮ್ಮ ಸರ್ಕಾರದ ಅವಧಿ ಮುಗಿದ ಬಳಿಕ
ನೆನೆಗುದಿಗೆ ಬಿದ್ದಿದ್ದು, ಹಾಲಿ ಸರ್ಕಾರ
ಕೈಗೆತ್ತಿಕೊಳ್ಳಬೇಕಿದೆ ಎಂದು
ಹೇಳಿದರು.ರಾಜ್ಯದಲ್ಲಿ ದಕ್ಕಲಿಗರ ಸಂಖ್ಯೆ ಎರಡು
ಸಾವಿರದ ಆಸುಪಾಸಿನಲ್ಲಿದ್ದು,
ಅವರೆಲ್ಲರನ್ನೂ ಒಂದೆಡೆ ನೆಲೆಸುವಂತೆ
ಕ್ರಮ ಕೈಗೊಂಡು, ನಿವೇಶನ, ವಸತಿ,
ಭೂಮಿ, ನೀರು ಮೊದಲಾದ ಮೂಲಭೂತ
ಸೌಲಭ್ಯಗಳನ್ನು ಒದಗಿಸಬೇಕಾಗಿದೆ
ಎಂದರು.
ಆರ್‍ಎಸ್‍ಎಸ್ ನ ಸಾಮರಸ್ಯ ವೇದಿಕೆಯ
ಸಂಚಾಲಕ ವಾದಿರಾಜ್ ಮಾತನಾಡಿ, ದಕ್ಕಲಿಗರ
ಸಮಗ್ರ ಅಭಿವೃದ್ಧಿಗೆ ಎಲ್ಲರೂ ಒಗ್ಗೂಡಿ
ಕಾರ್ಯನಿರ್ವಹಿಸಬೇಕಿದೆ. ಸಾಮರಸ್ಯ
ವೇದಿಕೆ ವತಿಯಿಂದ ಇತ್ತೀಚೆಗೆ ನಡೆಸಿದ
ದಕ್ಕಲಿಗ ಸಮುದಾಯದ ಸ್ಥಿತಿಗತಿಗಳ
ಅಧ್ಯಯನದಲ್ಲಿ ಸಾಕಷ್ಟು ಮಹತ್ವದ
ಅಂಶಗಳು ಪತ್ತೆಯಾಗಿವೆ.ಈ ಪೈಕಿ ಒಟ್ಟು
ದಕ್ಕಲಿಗರ ಪೈಕಿ ಮೂರು ಜನ ಮಾತ್ರ
ಸರ್ಕಾರಿ ನೌಕರಿಗಿಟ್ಟಿಸಿಕೊಂಡಿದ್ದಾರೆ. ಎಸ್.ಎಸ್.ಎಲ್.ಸಿ.
12 ಜನ ಪೂರೈಸಿದ್ದು, ಪಿಯುಸಿ
ಮುಗಿಸಿರುವವರ ಸಂಖ್ಯೆ 9 ಹಾಗಾಗಿ
ದಕ್ಕಲಿಗರ ಸ್ಥಿತಿಗತಿಗಳನ್ನ ಸರ್ಕಾರಕ್ಕೆ
ಮನನ ಮಾಡಿ ಅವರನ್ನು ಮುಖ್ಯವಾಹಿನಿಗೆ ತರಲು ಪ್ರಾಮಾಣಿಕವಾಗಿ
ಶ್ರಮಿಸಲಾಗುವುದು ಎಂದರು.
ಆದಿಜಾಂಬವ ಕೋಡಿಹಳ್ಳಿ ಬೃಹನ್ಮಠದ
ಷಡಕ್ಷರಮುನಿ ಶ್ರೀ ಮಾತನಾಡಿ,
ದಕ್ಕಲಿಗರು
ಮಾದಿಗರೊಳಗೊಂದಾಗಬೇಕು.
ಮಾದಿಗರು ದಕ್ಕಲಿಗರೊಂದಿಗೆ ವೈವಾಹಿಕ
ಸಂಬಂಧಗಳನ್ನ ಏರ್ಪಡಿಸಿಕೊಂಡು
ಸಾಮಾಜಿಕ ಸಮಾನತೆ ತರುವ ನಿಟ್ಟಿನಲ್ಲಿ
ದಾಂಗುಡಿಯಿಡಬೇಕು.ಈ ನಿಟ್ಟಿನಲ್ಲಿ ಮುಂದಿನ
ದಿನಗಳಲ್ಲಿ ದಕ್ಕಲಿಗರ ಹಟ್ಟಿಗಳಿಗೆ ಭೇಟಿ
ನೀಡಿ ಪರಿವರ್ತನೆ ತರುವ ಪ್ರಯತ್ನಕ್ಕೆ
ಮುಂದಾಗಲಾಗುವುದೆಂದು ಹೇಳಿದರು.
ಕಾರ್ಯಕ್ರಮದಲ್ಲಿ ಹಂಪಿ ಮಾತಂಗ
ಮಠದ ಮಾತಂಗಮುನಿ ಶ್ರೀ,
ಆದಿಜಾಂಬವ ಕೋಡಿಹಳ್ಳಿ ಬೃಹನ್ಮಠದ
ಗುರುಪ್ರಕಾಶ್ ಮುನಿ ಶ್ರೀ, ಮಾಗಡಿಯ
ಪಾಲನಹಳ್ಳಿ ಮಠದ ಸಿದ್ಧರಾಜು ಶ್ರೀ
ಮೊದಲಾದವರು ಸಾನಿಧ್ಯ ವಹಿಸಿದ್ದರು.

 

 

[t4b-ticker]

You May Also Like

More From Author

+ There are no comments

Add yours