ತಾಯಿನುಡಿಯಾದ ನಮ್ಮ ತನ ಕಳೆದುಕೊಳ್ಳಬೇಡಿ: ಪ್ರಾಧ್ಯಾಪಕಿ ತಾರಿಣಿ ಶುಭದಾಯಿನಿ

 

 

 

 

ಗೀತಗಾಯನ ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕಿ ತಾರಿಣಿ ಶುಭದಾಯಿನಿ
ತಾಯಿನುಡಿಯಾದ ನಮ್ಮ ತನ ಕಳೆದುಕೊಳ್ಳಬೇಡಿ
****
ಚಿತ್ರದುರ್ಗ,ಅಕ್ಟೋಬರ್24:
ಜಾಗತೀಕರಣದ ಬಂದು 20 ವರ್ಷಗಳು ಕಳೆದು ಹೋಗಿದ್ದು, ಅನೇಕ ಪಲ್ಲಟಗಳು ಸಂಭವಿಸಿವೆ. ಈ ಸಂದರ್ಭದಲ್ಲಿ ತಾಯಿ ನುಡಿಯಾದ ನಮ್ಮ ತನವನ್ನು ಕಳೆದುಕೊಳ್ಳಬಾರದು ಎಂದು ವಿಮರ್ಶಕಿ ಹಾಗೂ ಸಹಾಯಕ ಪ್ರಾಧ್ಯಾಪಕಿ ತಾರಿಣಿ ಶುಭದಾಯಿನಿ ಹೇಳಿದರು.
ನಗರದ ತರಾಸು ರಂಗಮಂದಿರದಲ್ಲಿ ಭಾನುವಾರ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಮದಕರಿ ಯುವಕ ಸಂಘ ಹಾಗೂ ಮದಕರಿ ನಾಯಕ ಸಾಂಸ್ಕøತಿಕ ಕೇಂದ್ರದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕನ್ನಡಕ್ಕಾಗಿ ನಾವು ಅಭಿಯಾನ-ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಗೀತ ಗಾಯನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕನ್ನಡಕ್ಕಾಗಿ ಕನ್ನಡದ ದಾಸಯ್ಯ ಎಂಬ ಕಾವ್ಯನಾಮದೊಂದಿಗೆ ಬರೆದ ಕನ್ನಡದ ಶಾಂತಕವಿ ಅವರು ಕನ್ನಡದ ಏಕೀಕರಣದ ಸಲುವಾಗಿ ಹಾಗೂ ಕನ್ನಡ ನಾಡನ್ನು ಒಂದು ಗೂಡಿಸಲಿಕ್ಕಾಗಿ, ಕನ್ನಡ ನುಡಿಯನ್ನು ಜನರ ಮಧ್ಯೆ ಹರಡಲಿಕ್ಕಾಗಿ ಜೋಳಿಗೆ ಹಾಕಿಕೊಂಡು ಊರೂರು ಸುತ್ತಿದ್ದಾರೆ. ಇಂತಹ ಬಹುದೊಡ್ಡ ಪರಂಪರೆಯನ್ನು ಕನ್ನಡ ಹೊಂದಿದೆ ಎಂದು ಹೇಳಿದರು.
ಬಿ.ಎಂ.ಶ್ರೀಕಂಠಯ್ಯ, ಜೋಳಿಗೆ ಕವಿ ಶಾಂತಕವಿ ಸೇರಿದಂತೆ ಅನೇಕ ಹಿರಿಯ ಕವಿಗಳ ಒಂದೊಂದು ಕನ್ನಡ ಮಾತನ್ನು ಮಾತನಾಡೋಣ, ಕನ್ನಡ ನಮ್ಮ ತನವಾಗಲಿ ಎಂಬ ಮಹನೀಯರು ದೀಕ್ಷೆಯನ್ನು ಕೊಟ್ಟಿದ್ದಾರೆ ಎಂದರು.
ಆಫ್ರಿಕಾದವರನ್ನು ಆಳ್ವಿಕೆ ಮಾಡಲು ಬಿಳಿಯರು ಬಂದಾಗ ಅವರನ್ನು ಸಾಂಸ್ಕøತಿಕವಾಗಿ ದಬ್ಬಾಳಿಕೆ ಮಾಡಿ ಅವರ ಭಾಷೆಗಳನ್ನು ಮರೆಸಿದ್ದರಿಂದ ಇಂಗ್ಲಿಷ್, ಪ್ರೆಂಚ್ ತುಂಬಾ ಚೆನ್ನಾಗಿ ಬಂತು .ಆದರೆ ತಮ್ಮ ತಾಯಿ ನುಡಿ ಹಾಗೂ ಸಾಂಸ್ಕøತಿಕತೆ ಮರೆತು ಹೋಯಿತು. ಇದರಿಂದ ಬಹಳ ಕಷ್ಟದಿಂದ ಹೊಸ ಜಗತ್ತಿಗೆ ಬರಬೇಕಾಯಿತು. ಇವರನ್ನು ಎರಡನೇ ಹಾಗೂ ಮೂರನೇಯ ದರ್ಜೆಯ ಪ್ರಜೆಯನ್ನಾಗಿ ನೋಡಲಾಯಿತು. ಈ ತರಹದ ಸಂಕಟಗಳನ್ನು ಜನಾಂಗ ಅನುಭವಿಸಿತು. ಈ ತರದ ಸಂಕಟಗಳು ನಮ್ಮ ಭಾರತೀಯರ ಮಟ್ಟಿಗೆ ಇಲ್ಲ. ನಮ್ಮ ತಾಯಿ ನುಡಿಗಳು ನಮ್ಮೊಟ್ಟಿಗೆ ಇನ್ನೂ ಇವೆ. ಹಾಗಾಗಿ ಪ್ರಜ್ಞಾಪೂರ್ವಕವಾಗಿ ನಮ್ಮ ಭಾಷೆಯನ್ನು ಉಪಯೋಗಿಸಬೇಕು. ಭಾಷೆಯಿಂದ ನಮ್ಮ ಅಸ್ಮಿತೆ, ಸಂಸ್ಕøತಿ ಉಳಿಯಲಿದೆ ಎಂದು ಹೇಳಿದರು. ತಾಂತ್ರಿಕ ಶಿಕ್ಷಣವಾದ ಇಂಜಿನಿಯರಿಂಗ್ ಪದವಿಯನ್ನು ಕನ್ನಡದಲ್ಲಿ ನೀಡಬೇಕು ಎಂಬ ಸಿದ್ಧತೆಗಳು ನಡೆಯುತ್ತಿವೆ. ಇಂತಹ ಕಾರ್ಯಗಳಾದಾಗ ಕನ್ನಡದ ಬಳಕೆಗೆ ಮಹತ್ವ ಸಿಗಲಿದೆ. ಹೊಸ ಅಸ್ಮಿತೆಗಳನ್ನು ಭಾಷೆ ಮೂಲಕ ಉಳಿಸಿಕೊಳ್ಳಬೇಕು. ಎದೆಯಲ್ಲಿ ಒಂದು ಹಾಡು, ಪದ, ಅಕ್ಷರ ಗೂಡು ಕಟ್ಟಿದರೆ ಅದು ಬೆಳೆಯಲು ಸಾಧ್ಯವಾಗಲಿದೆ. ಆಗ ಕನ್ನಡ ನೆಚ್ಚಿನ ಕನ್ನಡವಾಗಿ ಬಳಕೆ ಆಗುತ್ತದೆ ಎಂದರು.
ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕರಾದ ಬಿ.ಧನಂಜಯ ಪ್ರಾಸ್ತಾವಿಕವಾಗಿ ಮಾತನಾಡಿ, ಕನ್ನಡ ರಾಜ್ಯೋತ್ಸವದ ಅಂಗವಾಗಿ ಕನ್ನಡಕ್ಕಾಗಿ ನಾವು ಅಭಿಯಾನವನ್ನು ಜಿಲ್ಲೆಯಾದ್ಯಂತ ಅ.24ರಿಂದ ಅ.31 ರವರೆಗೆ ನಡೆಸಲಾಗುತ್ತದೆ. ಕನ್ನಡದಲ್ಲಿ ಮಾತನಾಡುವುದು, ಶುದ್ಧ ಕನ್ನಡ ಬರವಣಿಗೆ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದೆ ಎಂದರು.
ರಂಗಕರ್ಮಿ ಕೆ.ಪಿ.ಎಂ.ಗಣೇಶಯ್ಯ, ಕಲಾವಿದರಾದ ಆಯಿತೋಳು ವೀರುಪಾಕ್ಷಪ್ಪ, ಚಂದ್ರಪ್ಪ, ಗಂಗಾಧರ್, ಹೇಮಂತ್, ನುಂಕೇಶ್, ಹರೀಶ್ ಕನ್ನಡ ಗೀತೆಗಳ ಗಾಯನ ಮಾಡಿದರು. ಶಿವಣ್ಣ ಮತ್ತು ತಂಡದವರು ಗೊರವರ ಕುಣಿತ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಮದಕರಿನಾಯಕ ಸಾಂಸ್ಕøತಿಕ ಕೇಂದ್ರದ ಅಧ್ಯಕ್ಷ ಡಿ.ಗೋಪಾಲಸ್ವಾಮಿ ನಾಯಕ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ರಾಜ್ಯ ನಿರ್ದೇಶಕಿ ಗಾಯತ್ರಿ ಶಿವರಾಂ ಇದ್ದರು.
=====

 

 

[t4b-ticker]

You May Also Like

More From Author

+ There are no comments

Add yours