ಜಿಲ್ಲಾ ಉಸ್ತುವಾರಿ ವಿಚಾರದಲ್ಲಿ ಯಾವುದೇ ಗೊಂದಲವಿಲ್ಲ: ಸಚಿವ ಮುನಿರತ್ನ

 

 

 

 

ಚಿತ್ರದುರ್ಗ ಜ ೨೯

ಸಚಿವ ಸಂಪುಟ ವಿಸ್ತರಣೆ ವಿಚಾರ ವರಿಷ್ಠರು, ಸಿಎಂ ಪರಮಾಧಿಕಾರಿ, ಜಿಲ್ಲಾ ಉಸ್ತುವಾರಿ ವಿಚಾರದಲ್ಲಿ ಯಾವುದೇ ಗೊಂದಲವಿಲ್ಲ ಎಂದು ತೋಟಗಾರಿಕಾ ಮತ್ತು ಯೋಜನೆ ಸಾಂಖಿಕ ಸಚಿವ ಮುನಿರತ್ನ ತಿಳಿಸಿದರು.

ಚಿತ್ರದುರ್ಗ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಬಿಜೆಪಿ ಶಾಸಕರು ಕಾಂಗ್ರೆಸ್ ಮುಖಂಡರ ಜತೆ ಸಂಪರ್ಕ ವಿಚಾರದ ಬಗ್ಗೆ ಸಿದ್ಧರಾಮಯ್ಯ, ಡಿಕೆಶಿ ಹೇಳಿಕೆಗೆ ಟಾಂಗ್. ನೀಡಿದ ಸಚಿವ ಮುನಿರತ್ನ ಉದ್ಯೋಗವಿಲ್ಲದೆ ಇಲ್ಲ ಸಲ್ಲದ ಮಾತಾಡುತ್ತಿದ್ದಾರೆ. ಸರ್ಕಾರಕ್ಕೆ ಜನಪರ ಸಲಹೆ ನೀಡುವುದು ಬಿಟ್ಟು ಬರೀ ರಾಜಕಾರಣ.ಅಧಿಕಾರ ದಾಹದಿಂದ ಕಾಂಗ್ರೆಸ್ ನಾಯಕರ ರಾಜಕಾರಣ.ನಮ್ಮ ಪಕ್ಷದಿಂದ ಯಾರೂ ಸಹ ಬೇರೆ ಪಕ್ಷ ಸೇರ್ಪಡೆ ಪ್ರಶ್ನೆಯಿಲ್ಲ.ನಾವೆಲ್ಲಾ ಒಟ್ಟಾಗಿ ಸಂತೋಷದಿAದ ಕೆಲಸ ಮಾಡುತ್ತಿದ್ದೇವೆ. ಪಕ್ಷ ನಮಗೆ ಗೌರವಿಸಿದೆ, ಗೌರವದಿಂದ ನಡೆದುಕೊಳ್ಳುತ್ತೇವೆ ಎಂದರು

 

 

ಶಾಸಕ ಯತ್ನಾಳ್ ಹೇಳಿಕೆ ಬಗ್ಗೆ ನನಗೆ ಮಾಹಿತಿ ಇಲ್ಲ, ಅವರನ್ನೇ ಕೇಳಿ.ರಮೇಶ ಜಾರಕಿಹೊಳಿ ‘ಕೈ’ ಶಾಸಕರು ಸಂಪರ್ಕದಲ್ಲಿದ್ದಾರೆ ಎಂದಿದ್ದಾರೆ. ಜಾರಕಿಹೊಳಿ ಹೇಳಿಕೆ ಬಗ್ಗೆ ಪಕ್ಷದಲ್ಲಿ ಯಾವುದೇ ಚರ್ಚೆ ಆಗಿಲ್ಲ ಸಚಿವ ಮುನಿರತ್ನ ತಿಳಿಸಿದರು.

ಜಿಲ್ಲೆಯ ಆರೂ ತಾಲೂಕಿನ ಸುಡುಗಾಡು ಸಿದ್ದ ಜನಾಂಗದವರನ್ನು ಗುರುತಿಸಿ ವಸತಿ ಮತ್ತು ಇತರೇ ಸೌಲಭ್ಯ ನೀಡಲು ಆದ್ಯತೆ ನೀಡಲಾಗುವುದು. ಬಯಲು ಸೀಮೆ ಅಭೀವೃಧ್ಧಿ ವ್ಯಾಪ್ತಿಯಲ್ಲಿ ೦೮ ಜಿಲ್ಲೆಯ ೫೮ ತಾಲೂಕುಗಳು ೭೦ವಿಧಾನಸಭಾ ವ್ಯಾಪ್ತಿಯಲ್ಲಿ ಬರಲಿದ್ದು ಸದ್ಯ ವಾರ್ಷಿಕವಾಗಿ ಒಂದು ಕೋಟಿ ಮಾತ್ರ ಅನುದಾನ ನೀಡಲಾಗುತ್ತಿದೆ.ಮುಂದಿನ ಬಜೆಟ್ ನಲ್ಲಿ ಹೆಚ್ಚಿನ ಅನುದಾನ ನೀಡಲು ಕೋರಲಾಗುವುದು ಬಯಲು ಸೀಮೆ ಪ್ರದೇಶವು ಮಳೆಯ ಕೊರತೆಯ ಪ್ರದೇಶವಾಗಿದ್ದು ಅಂತರ್ಜಲ ಅಭಿವೃಧ್ಧಿ ಕೆಲಸಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ ಎಂದರು.

 

[t4b-ticker]

You May Also Like

More From Author

+ There are no comments

Add yours