ಜನವರಿ 5 ಮತ್ತು 6 ರಂದು ಕಾಯಕ ಜನೋತ್ಸವ ಕಾರ್ಯಕ್ರಮ

 

 

 

 

ವರದಿ: ಸುರೇಶ್ ಪಟ್ಟಣ್

ಚಿತ್ರದುರ್ಗ ಜ. ೦೪

ಮಡಿವಾಳ ಗುರುಪೀಠದ ೧೩ ನೇ ಶಂಕುಸ್ಥಾಪನೆ, ಮಹಾಸ್ವಾಮಿಗಳವರ ೨೩ ನೇ ಜಂಗಮದೀಕ್ಷೆ ಹಾಗೂ ೩೮ ನೇ ಜನ್ಮದಿನ ಮತ್ತು ಮಹಾಸ್ವಾಮಿಗಳವರ ೪ ನೇ ಪಟ್ಟಾಧಿಕಾರ ಮಹೋತ್ಸವದ ಅಂಗವಾಗಿ ಜನವರಿ ೫ ಮತ್ತು ೬ ರಂದು ಕಾಯಕ ಜನೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮಡಿವಾಳ ಗುರುಪೀಠವಾದ ಜಗದ್ಗುರು ಶ್ರೀ ಮಾಚಿದೇವ ಮಹಾಸಂಸ್ಥಾನ ಮಠದ ಡಾ. ಶ್ರೀ ಬಸವ ಮಾಚಿದೇವ ಮಹಾಸ್ವಾಮಿಗಳವರ ತಿಳಿಸಿದರು.

 

 

ತಮ್ಮ ಮಠದ ಆವರಣದಲ್ಲಿ ಇಂದು ಪ್ರತಿಕಾಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ೫ನೇ ತಾರೀಖಿನ ಬುಧವಾರದಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪನವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಈ ಕಾರ್ಯಕ್ರಮಗಳಲ್ಲಿ ಡಾ. ಬಸವ ಮಾಚಿದೇವ ಮಹಾಸ್ವಾಮಿಗಳವರ ಪೀಠಾರೋಹಣ, ವಧುವರರ ಸಮಾವೇಶ, ಸರಳ ಸಾಮೂಹಿಕ ವಿವಾಹ, ಮಹಿಳಾ ಸಮಾವೇಶ, ಸುಪ್ರಸಿದ್ಧ ಕಲಾಕಾರರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಇದೇ ೬ನೇ ತಾರೀಖಿನ ಗುರುವಾರದಂದು ಮಾಜಿ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯನವರಿಗೆ ೨೫ ಸಾವಿರ ರೂ ನಗದೊಂದಿಗೆ ಪ್ರಪ್ರಥಮ ಮಾಚಿದೇವ ಶ್ರೀ ಪ್ರಶಸ್ತಿ ಮತ್ತು .ಮಡಿವಾಳ ಜನಾಂಗೀಯ ಅಧ್ಯಯನ ಮಾಡಿ ಮಡಿವಾಳರನ್ನು ಪರಿಶಿಷ್ಟ ಜಾತಿಯಲ್ಲಿ ಸೇರ್ಪಡೆ ಮಾಡಬೇಕೆಂದು ಸರ್ಕಾರಕ್ಕೆ ಶಿಫಾರಸ್ಸು ಮಾಡಿ ವರದಿ ಸಲ್ಲಿಸಿರುವ ಮೈಸೂರು ವಿಶ್ವ ವಿದ್ಯಾಲಯದ ಪ್ರೊ. ಡಾ. ಅನ್ನಪೂರ್ಣಮ್ಮನವರಿಗೆ ಪ್ರಪ್ರಥಮ ಮಲ್ಲಿಗೆಮ್ಮ ಮಾತೋಶ್ರೀ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಜಿ ಹೆಚ್ ತಿಪ್ಪಾರೆಡ್ಡಿಯವರು ವಹಿಸಲಿದ್ದಾರೆ.

ಮಡಿವಾಳ ಸಮುದಾಯದ ಪ್ರಗತಿಗೆ ದೋಭಿ ಘಾಟಗಳ ನಿರ್ಮಾಣ, ಸಮುದಾಯ ಭವನಗಳ ನಿರ್ಮಾಣ, ವಸತಿ ಮನೆಗಳ ಹಂಚಿಕೆಯಲ್ಲಿ ಗಣನೀಯವಾಗಿ ಸಹಾಯ ಮಾಡಿರುವ ತೋಟಗಾರಿಕೆ ಇಲಾಖೆ ಸಚಿವ ಆರ್ ಮುನಿರತ್ನ, ಕೊಪ್ಪಳ ಲೋಕಸಭಾ ಸದಸ್ಯ ಕರಡಿ ಸಂಗಣ್ಣನವರಿಗೆ, ಹಗರಿಬೊಮ್ಮಹಳ್ಳಿ ಶಾಸಕ ಭೀಮಾ ನಾಯಯಕ, ಚಿಕ್ಕಪೇಟೆ ಶಾಸಕರಾದ ಉದಯ ಗರುಡಾಚಾರ್, ಮಾಜಿ ಸಚಿವÀ ಹೆಚ್ ಆಂಜನೇಯರಿಗೆ “ಮಾಚಿದೇವ ರತ್ನ” ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು.

ಮಡಿವಾಳ ಸಮಾಜವನ್ನು ಕಟ್ಟುವಲ್ಲಿ ಅನುಪಮ ಸೇವೆ ಮಾಡಿರುವ ಶರಣ ಸಾಹಿತಿ ಸಂಶೋಧಕ ರೋಣ ತಾಲೂಕಿನ ಬಸವಂತಪ್ಪ ಮಡಿವಾಳರ, ಗುಲಬರ್ಗಾ ವಿಶ್ವವಿದ್ಯಲಯ ಕುಲಪತಿಗಳಾದ ಡಾ ದಯಾನಂದ ಅಗಸರ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಇಲಾಖೆ ಆಯುಕ್ತರಾದ ಶಿವಾನಂದ ಕಲಕೇರಿ, ನಗರಾಭಿವೃದ್ಧಿ ಪ್ರಾಧಿಕಾರ ಆಯುಕ್ತ ಶರಣಪ್ಪ ರಾಯಚೂರು, ಸಮಾಜದ ಮುಖಂಡರಾದ ಹರಪನಹಳ್ಳಿ ಅಶೋಕ, ಉಮೇಶ ಎಲ್, ಮಹದೇವಪ್ಪ ಯಾದಗಿರಿ, ಕೆ ವಿ ಅಮರನಾಥ, ಶಂಕ್ರಣ್ಣ ತಿಪಟೂರು, ಬಿ ಆರ್ ಪ್ರಕಾಶ, ಡಾ ವಿ ಬಸವರಾಜ, ಮಂಜುನಾಥ ಸ್ವರೂಪ ಇವರುಗಳಿಗೆ “ಮಾಚಿದೇವ ಸೇವಾ ರತ್ನ” ಪ್ರಶಸ್ತಿ ಮತ್ತು ಮಡಿವಾಳ ಸ

[t4b-ticker]

You May Also Like

More From Author

+ There are no comments

Add yours