ಚಳ್ಳಕೆರೆ ನಗರಕ್ಕೆ ನಾಳೆ ಜಲಧಾರೆ ಕಾರ್ಯಕ್ರಮ ಸಾವಿರಕ್ಕೂ ಹೆಚ್ಚು ಜನರಿಂದ ಸ್ವಾಗತ:ಎಮ್.ರವೀಶ್

 

 

 

 

ಚಳ್ಳಕೆರೆ-27:  ನಗರಕ್ಕೆ 28ರಂದು ಆಗಮಿಸುವ ಜೆಡಿಎಸ್ ಜಲಧಾರೆ ಕಾರ್ಯಕ್ರಮಕ್ಕೆ ಸುಮಾರು ಸಾವಿರಕ್ಕೂ ಹೆಚ್ಚು ಜನ ಸೇರಿ ಜಲಧಾರೆ ರಥವನ್ನು ಸ್ವಾಗತಿಸಲಿದ್ದಾರೆ ಎಂದು ಜೆಡಿಎಸ್ ಮುಖಂಡ ಎಮ್. ರವೀಶ್ ತಿಳಿಸಿದರು.

 

 

ಅವರು ನಗರದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ, ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಆಡಳಿತದಲ್ಲಿದ್ದಾಗ ಸುಮಾರು 150 ಕೋಟಿ ಸಾಲ ಮನ್ನಾ ಯೋಜನೆ ಮಾಡುವ ಮೂಲಕ ರೈತ ಸಮುದಾಯಕ್ಕೆ ಆಸರೆಯಾಗಿದ್ದರು. ಅದರಂತೆ ಹಲವಾರು ನೀರಾವರಿ ಯೋಜನೆಗಳಿಗೆ ಸುಮಾರು 4500 ಕೋಟಿ ಹಣವನ್ನು ಬಿಡುಗಡೆ ಮಾಡುವ ಮೂಲಕ ನೀರಾವರಿ ಯೋಜನೆಗೂ ಸಹ ಕೋಟಿ ಕೋಟಿಗಟ್ಟಲೇ ಹಣವನ್ನು ನೀಡಿದ್ದು ಜೆಡಿಎಸ್ ಪಕ್ಷ. ಇದನ್ನು ಅರಿತು ಮತದಾರರು ಅಭಿವೃದ್ಧಿ ಮಾಡುವಂತಹ ಪಕ್ಷಕ್ಕೆ ಮತ ನೀಡುವ ಮೂಲಕ 2023 ರ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕು. ಚಳ್ಳಕೆರೆ ತಾಲೂಕಿನಾದ್ಯಂತ ಹಲವಾರು ನೀರಾವರಿ ಯೋಜನೆಗಳಿಗೆ ಸಾವಿರಾರು ಕೋಟಿ ರೂಪಾಯಿಗಳ ಬಿಡುಗಡೆ ಮಾಡಿದ್ದು ಜೆಡಿಎಸ್ ಪಕ್ಷ ಆದರೆ ಹಲೋ ಪಕ್ಷದ ಮುಖಂಡರು ನಾವು ಮಾಡಿದ್ದು ನಮ್ಮಿಂದ ಹಾಗಿದ್ದು ಎಂದು ಸುಳ್ಳು ಆಶ್ವಾಸನೆಗಳನ್ನು ನೀಡುವ ಮೂಲಕ ಜನರನ್ನು ತಪ್ಪುದಾರಿಗೆ ಎಳೆಯುತ್ತಿದ್ದಾರೆ ಇದನ್ನು ಅರಿತು ಜನರು ಅಭಿವೃದ್ಧಿ ಕಡೆಗೆ ಹೆಚ್ಚಿನ ಒಲವು ನೀಡಬೇಕು ಎಂದು ತಿಳಿಸಿದರು.
ತಾಲೂಕು ಜೆಡಿಎಸ್ ಅಧ್ಯಕ್ಷ ಬಿಜೆಪಿ ಸ್ವಾಮಿ ಮಾತನಾಡಿ, ಜಲಧಾರೆ ರಥಯಾತ್ರೆ ಚಳ್ಳಕೆರೆಗೆ ನಾಯಕನಟಿ ಮೂಲಕ ಆಗಮಿಸಲಿದ್ದು ಚಳ್ಳಕೆರಮ್ಮ ದೇವಸ್ಥಾನದ ಮುಂಭಾಗ ರಥಯಾತ್ರೆಯನ್ನು ಸ್ವಾಗತಿಸುವ ಮೂಲಕ ಬಳ್ಳಾರಿ ರಸ್ತೆ ನೆಹರು ರುತ್ತ ಚಿತ್ರದುರ್ಗ ಮೂಲಕ ರಥಯಾತ್ರೆಯನ್ನು ನಡೆಸಲಾಗುವುದು. ಇದಕ್ಕೂ ಮುನ್ನ ವೃತ್ತದಲ್ಲಿ ಬಹಿರಂಗ ಸಭೆಯ ಮೂಲಕ ಜೆಡಿಎಸ್ ಪಕ್ಷದ ಸಾಧನೆಗಳನ್ನು ಕುರಿತು ಮುಖಂಡರು ಮಾತನಾಡಲಿದ್ದಾರೆ. ಅಂತ ಯಾತ್ರೆಗೂ ಮುನ್ನ ಪಕ್ಷದ ಕಾರ್ಯಕರ್ತರು ಮುಖಂಡರು ಅಭಿಮಾನಿಗಳು ಬೈಕ್ ರ್ಯಾಲಿ ನಡೆಸುವ ಮೂಲಕ ಜಲಧಾರೆಯ ರಥಯಾತ್ರೆ ಜಾಗೃತಿ ಮೂಡಿಸಲಾಗುವುದು. ಅಲ್ಲಿ ಸುಮಾರು 2000ದಿಂದ ಎರಡುವರೆ ಸಾವಿರ ಕಾರ್ಯಕರ್ತ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಸಭೆಯಲ್ಲಿ ನಗರಸಭಾ ಸದಸ್ಯರಾದ ಶ್ರೀನಿವಾಸ್, ಪ್ರಮೋದ್,ಆನಂದಪ್ಪ, ಚೆನ್ನಿಗರಾಯ, ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾದ ಅನಿಲ್ ಕುಮಾರ್ ಹನುಮಂತರಾಯ, ಕಿರಣ್ ಕುಮಾರ್, ಮಂಜುನಾಥ್ ಮುಂತಾದವರು ಇದ್ದರು.

[t4b-ticker]

You May Also Like

More From Author

+ There are no comments

Add yours