ಗ್ರಾಮೀಣ ಭಾಗದ ರೈತರ ಹೊಲಗಳ‌ ರಸ್ತೆಗಳ‌ ಅಭಿವೃದ್ದಿ: ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ

 

 

 

 

ಚಿತ್ರದುರ್ಗ: ಸೊಂಡೇಕೊಳ ಮತ್ತು ಗೊಡಬನಾಳ್‌ ವ್ಯಾಪ್ತಿಯಲ್ಲಿ 6.67 ಕೋಟಿ ವೆಚ್ಚದಲ್ಲಿ ರಸ್ತೆಗಳ ಅಭಿವೃದ್ಧಿಯಿಂದ  ಸಾವಿರಾರು ಜನರಿಗೆ  ಅನುಕೂಲವಾಗಲಿದೆ ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದರು.

 

 

ತಾಲೂಕಿನ ಸೊಂಡೇಕೊಳ, ನಂದಿಪುರ, ಗೊಡಬನಾಳ್ ಗ್ರಾಮಗಳಲ್ಲಿ ಪಿಎಂಜಿಎಸ್ ವೈ ಮತ್ತು ಕೆಆರ್ಐಡಿಎಲ್ ಅನುದಾನದಲ್ಲಿ  ಸಿ.ಸಿ.ರಸ್ತೆ ಮತ್ತು ಡಾಂಬರೀಕರಣ ರಸ್ತೆ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದರು.
ಗೊಡಬನಾಳ್ ನಿಂದ  ಸೊಂಡೇಕೊಳ ಮೂಲಕ  ನಂದಿಪುರ, ಅಲಗಪ್ಪನಹಟ್ಟಿ,ಓಬೇನಹಳ್ಳಿ ಉಪ್ಪಾನಾಯಕನಹಳ್ಳಿ ವರೆಗೂ  ಪಿಎಂಜಿಎಸ್ ವೈ ಯೋಜನೆಯಲ್ಲಿ ಸುಮಾರು 3.17 ಕೋಟಿ ವೆಚ್ಚದಲ್ಲಿ ಡಾಂಬರೀಕರಣ ಮತ್ತು ಊರಿನ ಒಳಗಡೆ ಹಾದು ಹೋಗುವಾಗ ಸಿ.ಸಿ.ರಸ್ತೆಗಳು ಮಾಡಲು ಹಣ ನೀಡಿದ್ದೇನೆ.ನೀರು ಹೆಚ್ಚು ಹರಿಯುವ ಕಡೆಗಳಲ್ಲಿ  ಚಿಕ್ಕ ಡಕ್ ಗಳನ್ನು ಮಾಡಲು ತಿಳಿಸಿದ್ದೇನೆ.  ಬಹು ದಿನಗಳಿಂದ ಈ ರಸ್ತೆಯ ಬೇಡಿಕೆ ಇಟ್ಟಿದ್ದು ಅದನ್ನು ಹಣದ ವ್ಯವಸ್ಥೆ ಮಾಡಿ ನೇರವೇರಿಸುತ್ತೇನೆ ಎಂದು ತಿಳಿಸಿದ್ದು ಅದರಂತೆ ರಸ್ತೆ ಹಣ ನೀಡಿದ್ದೇನೆ. ಈ ಎಲ್ಲಾ ಹಳ್ಳಿಯ ರಸ್ತೆಗಳು ಆಗುವುದರಿಂದ ಸಾವಿರಾರು ರೈತರ ಹೊಲಗಳಿಗೆ, ವಸ್ತುಗಳನ್ನು ಸಾಗಿಸುವುದಕ್ಕೆ ಸಾಕಷ್ಟು ಅನುಕೂಲವಾಗುತ್ತದೆ ಎಂದರು. ಉಪ್ಪಾನಾಯಕನಹಳ್ಳಿ ಕಡೆಯಿಂದ ಬುರುಜನರೊಪ್ಪ ಕಡೆ ತೆರಳುವ ರಸ್ತೆಗೆ ಸಹ ಪಿಎಂಜಿಎಸ್ ವೈ ಯೋಜನೆಯಲ್ಲಿ 1.50 ಕೋಟಿ ಹಣ ನೀಡಿ ರಸ್ತೆಪೂರ್ಣವಾಗಿದೆ ಎಂದು ತಿಳಿಸಿದರು‌
ಸೊಂಡೇಕೊಳ ಗ್ರಾಮದ ಎಲ್ಲಾ ರಸ್ತೆಗಳು ಪೂರ್ಣ: ಸೊಂಡೇಕೊಳ ಗ್ರಾಮದಲ್ಲಿ ಮಳೆ ಬಂದ ಸಂದರ್ಭದಲ್ಲಿ  ನೂರಾರು ರೈತರು ತಮ್ಮ ಹೊಲಗಳಿಗೆ ಹೋಗಲು ಆಗುತ್ತಿರಲಿಲ್ಲ ಹಾಗಾಗಿ ಓಣಿ ರಸ್ತೆಗೆ ಕೆಆರ್ಡಿಎಲ್   ಯೋಜನೆಯಲ್ಲಿ 75 ಲಕ್ಷ ಅನುದಾನ ನೀಡಿದ್ದು ಹೊಲಗಳ ಬಾಗಿಲಲ್ಲಿ ಚಿಕ್ಕ ಡಕ್ ಮಾಡಲು ತಿಳಿಸಿದ್ದೇನೆ. ಸೊಂಡೇಕೊಳ ಗ್ರಾಮದ ಊರಿನ ಚಿಕ್ಕ ಪುಟ್ಟ ರಸ್ತೆಗಳಿಗೆ 45 ಲಕ್ಷ ಹಣ ನೀಡಿದ್ದು ಎಲ್ಲಾ ರಸ್ತೆಗಳು ಪೂರ್ಣವಾದಂತೆ ಆಗುತ್ತವೆ.ಮೊತ್ತೊಂದು ಭಾಗದ  ರೈತರ ಹೊಲಗಳ ರಸ್ತೆಗೆ 80 ಲಕ್ಷ ನೀಡಿದ್ದು ಮಂಜೂರಾದ ತಕ್ಷಣ ಕೆಲಸ ಪ್ರಾರಂಭ ಮಾಡುತ್ತೇನೆ. 3 ಕೋಟಿ ವೆಚ್ಚದ ದೊಡ್ಡ ಚಕ್ ಡ್ಯಾಂ ಸಹ ಮಾಡಲಾಗಿದ್ದು ಎಲ್ಲಾವೂ ಸಹ ತುಂಬಿವೆ. ದೇವಸ್ಥಾನ ಅಭಿವೃದ್ಧಿಗೆ ಹಣ  ಕೇಳಿದ್ದು ಶಾಸಕರ ಅನುದಾನದಲ್ಲಿ 5 ಲಕ್ಷ ನೀಡುತ್ತೇನೆ ಎಂದು ಭರವಸೆ ನೀಡಿದರು.
ಸೊಂಡೇಕೊಳ ಗ್ರಾಮದ ಮುಖಂಡ ರವೀಶ್ ಮಾತನಾಡಿ  ಶಾಸಕರು ನಮ್ಮ ಎಲ್ಲಾ‌ ಕೆಲಸ ಕಾರ್ಯಗಳನ್ನು ಮಾಡಿಕೊಟ್ಟಿದ್ದಾರೆ. ಊರಿನ ಎಲ್ಲಾ ಭಾಗಗಳಲ್ಲಿ ಸಿಸಿ ರಸ್ತೆ ನಿರ್ಮಾ ಮಾಡಿದ್ದಾರೆ. ತೇರು ಬೀದಿಗೆ ರಸ್ತೆ, ಚಕ್ ಡ್ಯಾಂಮಗಳ,ಹೊಲಗಳ‌ ರಸ್ತೆಗಳು ಸೇರಿ ಊರಿಗೆ ಕೊರತೆ ಇಲ್ಲದಂತೆ ಎಲ್ಲಾ‌ಕೆಲಸ ಮಾಡಿದ್ದು ಅವರಿಗೆ ಎಲ್ಲಾ ಜನರ ಪರವಾಗಿ ಅಭಿನಂದನೆ ಮತ್ತು ಸದಾ ಅವರಿಗೆ ಚಿರಋಣಿ ಆಗಿರುತ್ತೇವೆ ಎಂದರು.
ಸೊಂಡೇಕೊಳ ‌ಗ್ರಾಮ ಪಂಚಾಯತಿ ಅಧ್ಯಕ್ಷೆ ಭಾರತಮ್ಮ, ಗೊಡಬನಾಳ್ ಗ್ರಾ.ಪಂ ಅಧ್ಯಕ್ಷೆ ಸವಿತಾ, ಗ್ರಾಮ ಪಂಚಾಯತಿ ಸದಸ್ಯರಾದ ಸಂತೋಷ್, ಓಬಮ್ಮ, ವಿಶಾಲಕ್ಷಮ್ಮ, ಕಲ್ಲಪ್ಪ ,ಜಯ್ಯಪ್ಪ, ಉಮೇಶ್  ಮುಖಂಡರಾದ ಬಸವರಾಜ್, ನಾಗರಾಜ್, ಪ್ರಸನ್ನಕುಮಾರ್, ಕುಮಾರಸ್ವಾಮಿ, ಎಂ.ಬಿ.ಜಯ್ಯಪ್ಪ ,ಸಚಿನ್, ಕಲ್ಲೇಶ್ ಮತ್ತು ಸಾರ್ವಜನಿಕರು ಹಾಜರಿದ್ದರು.
[t4b-ticker]

You May Also Like

More From Author

+ There are no comments

Add yours