ಗ್ಯಾಸ ಸೋರಿಕೆಯಾಗಿ ಬೆಂಕಿ ಅವಘಡದ ಇಂದಿರಾ ಕ್ಯಾಂಟಿನ್ ಗೆ ತಹಶೀಲ್ದಾರ್ ಎನ್.ರಘುಮೂರ್ತಿ ಭೇಟಿ

 

 

 

 

 

 

 

ಚಳ್ಳಕೆರೆ : ನಗರದ ಬಿಇಓ ಕಚೇರಿ ಆವರಣದಲ್ಲಿರುವ ಇಂದಿರಾ ಕ್ಯಾಂಟೀನ್ ನಲ್ಲಿ ಗುರುವಾರ ಗ್ಯಾಸ್ ಸೋರಿಕೆಯಾಗಿ ಅವಘಡ ಸಂಭವಿಸಿದ್ದು ಮೂರು ಜನ ಅಡಿಗೆ ತಯಾರಕರಿಗೆ ಗಾಯಗಳಾಗಿ ಪ್ರಾಣಪಾಯದಿಂದ ಪಾರಾಗಿದ್ದರು.
ಅಡುಗೆ ತಯಾರಿಸುವಾಗ ಗ್ಯಾಸ್ ಪೈಪ್ ನಲ್ಲಿ ಸೋರಿಕೆಯಾಗಿ ಅಡುಗೆ ತಯಾರು ಮಾಡುತ್ತಿದ್ದ ಮೂರು ಜನರ ಬಟ್ಟೆಗಳಿಗೆ ಬೆಂಕಿ ಹತ್ತಿಕೊಂಡಿದ್ದು, ಅಲ್ಲಿದ್ದವರು ಬೆಂಕಿ ನಂದಿಸಿ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗಾಗಿ ಸಾಗಿಸಿದ್ದಾರೆ.ಗಾಯಳುಗಳು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಮನೆಗೆ ತೆರಳಿದ್ದಾರೆ . ಇಂದು ಚಳ್ಳಕೆರೆ ತಹಶೀಲ್ದರ್ ಎನ್.ರಘುಮೂರ್ತಿ ಇಂದಿರಾ ಕ್ಯಾಂಟಿನ್ ಗೆ ಬೇಟಿ ನೀಡಿ ಪರಶೀಲಸಿದರು ನಂತರ ಗಾಯಳುಗಳನ್ನು ಮಾತನಾಡಿಸಿ ಅರೋಗ್ಯ ವಿಚಾರಿಸಿ ನಂತರ ಮಾತನಾಡಿ ಬಡವರಿಗೆ,ಕಾರ್ಮಿಕರಿಗೆ,ಶಾಲೆ ಮಕ್ಕಳಿಗೆ ಅನುಕೂಲವಾಗಲೆಂದು ಇಂದಿರಾ ಮಾಡಿಲಾಗಿದ್ದು ಈ ಕ್ಯಾಂಟಿನ್ ನಲ್ಲಿ ಸ್ವಚ್ಚತೆ ಕಾಪಾಡಿಕೊಳ್ಳಬೇಕು,ತಿಂಡಿ ಹಾಗೂ ಊಟ ಸ್ವಚ್ಚವಾಗಿ ರುಚಿಯಾಗಿ ಮಾಡಿಬೇಕು .
ಅಡಿಗೆ ತಯಾರು ಮಾಡುವಾಗ ಎಚ್ಚರ ವಹಿಸಬೇಕು

ಗ್ಯಾಸ್ ನಿಂದ ಅಡುಗೆ ತಯಾರು ಮಾಡುತ್ತಿರುವ ಉದ್ದೇಶದಿಂದ ಗ್ಯಾಸ್ ಬಳಕೆ ಹಾಗೂ ಅದರ ನಿರ್ವಹಣೆ ಬಗ್ಗೆ ಎಚ್ಚರಿಕೆ ವಹಿಸಬೇಕಾಗುತ್ತದೆ .ಇಲ್ಲವಾದರೆ ಕಾರ್ಮಿಕರು ತೊಂದರೆ ಅನುಭವಿಸುವಂತಾಗುತ್ತದೆ‌. ನಿನ್ನೆ ಆಗಿರುವ ಘಟನೆ ವಿಷಾದನೀಯ ಆದರೆ ಸದ್ಯ ಸಣ್ಣ ಅವಘಡದಲ್ಲೆ ಮುಗಿದಿದೆ ಇಂತಹ ಅವಘಡಗಳು ಪುನಃ ಸಂಭವಿಸದಂತೆ ಇಲ್ಲಿನ ವ್ಯವಸ್ಥಾಪಕರು ನೋಡಿಕೊಳ್ಳಬೇಕಾಗುತ್ತದೆ. ಎಂದು ಎಚ್ಚರಿಕೆ ನೀಡಿದರು.
ಹಾಗೂ ಇದೆ ಸಂದರ್ಭದಲ್ಲಿ ತಿಂಡಿ ತಿಂದು ರುಚಿ ನೋಡಿ ಅಲ್ಲಿನ ತಿಂಡಿ ತಿನ್ನುವವರೊಂದಿಗೆ ರುಚಿ ವಿಚಾರವಾಗಿ ಕೇಳಿದರು.

[t4b-ticker]

You May Also Like

More From Author

+ There are no comments

Add yours