ಕ್ರೀಡೆಯಲ್ಲಿ ಜಾತಿ ಭೇದವಿಲ್ಲದೆ ಎಲ್ಲಾರೂ ಸಮಾನರು: ಡಿ.ಯಶೋಧರ

 

 

 

 

ಕ್ರೀಡೆಗಳು ಶಾಂತಿಯ ತೋಟಗಳು : ಡಿ ಯಶೋಧರ

 

ಹಿರಿಯೂರು.ಮೇ 14- ಕ್ರೀಡೆಗಳು ಶಾಂತಿಯ ತೋಟಗಳು ಕ್ರೀಡಾಪಟುಗಳು ಬೇರೆ ಬೇರೆ ಜಾತಿ ಧರ್ಮ ಬೇರೆ ಬೇರೆ ಊರುಗಳಿಂದ ಬಂದಿದ್ದರು ಎಲ್ಲರೂ ಒಂದೇ ಕುಟುಂಬದವರಂತೆ ವರ್ತಿಸುವುದು ನಿಜಕ್ಕೂ ಶಾಂತಿಯ ಮನೋಭಾವನೆ ಇದ್ದು ಇದು ಶಾಂತಿಯ ತೋಟವೇ ಸರಿ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷರಾದ ಡಿ ಯಶೋಧರ ಹೇಳಿದರು.

 

 

ಹಿರಿಯೂರಿನ ನೆಹರು ಕ್ರೀಡಾಂಗಣದಲ್ಲಿ ಬಾಲ್ ಬ್ಯಾಡ್ಮಿಂಟನ್ ಅಸೋಸಿಯೇಷನ್ ವತಿಯಿಂದ ಆಯೋಜಿಸಿರುವ 7ನೇ ಫೆಡರೇಷನ್ ಕಪ್ ಬ್ಯಾಡ್ಮಿಂಟನ್ ಸ್ಪರ್ಧೆಯ ಎರಡನೇ ದಿನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಬಾಲ್ ಬ್ಯಾಡ್ಮಿಂಟನ್ ಆಲ್ ಇಂಡಿಯಾ ಫೆಡರೇಷನ್ ಮುಖ್ಯಸ್ಥರಾದ ತೆಲಂಗಾಣದ ರಾಮಕೃಷ್ಣ ರಾವ್ ರವರು ಮಾತನಾಡಿ ಗ್ರಾಮೀಣ ಪ್ರದೇಶಗಳಿಂದ ಹೆಚ್ಚೆಚ್ಚು ಕ್ರೀಡಾಪಟುಗಳು ಹೊರಹೊಮ್ಮುತ್ತಿದ್ದಾರೆ ಇದು ಸಂತೋಷದ ವಿಚಾರ, ಕ್ರೀಡಾಪಟುಗಳಿಗೆ ಉಜ್ವಲವಾದ ಭವಿಷ್ಯವಿದೆ ಎಂದು ಹೇಳಿದರು, ಹಿರಿಯೂರಿನ ಬಾಲ್ ಬ್ಯಾಡ್ಮಿಂಟನ್ ಅಸೋಸಿಯೇಷನ್ ಅವರು ಕಾರ್ಯಕ್ರಮವನ್ನು ತುಂಬಾ ವ್ಯವಸ್ಥಿತವಾಗಿ ಆಯೋಜಿಸಿರುವುದು ತುಂಬಾ ಹೆಮ್ಮೆಯ ವಿಷಯ ಎಂದರು.

ಕಾರ್ಯಕ್ರಮದಲ್ಲಿ ಬಾಲ್ ಬ್ಯಾಡ್ಮಿಂಟನ್ ಪ್ರೆಡರೇಷನ್ ನ ವೈ ರಾಜಾರಾವ್, ದಿನೇಶ್, ಅಶೋಕ್ ಗಿರಿಯ,ಗೋಪಾಕುಮಾರ್, ಜ್ಯೋತಿಶ್, ಗೌಸ್ ಷರೀಫ್, ಶ್ರೀನಿವಾಸ್ ವೀರಭದ್ರ ರಾವ್ ಸೌಗತ್ ದತ್ತ, ಇಲಿಯಾರನ್ ಆನಂದಯ್ಯ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷರಾದ ಕೆ ಮಂಜುನಾಥ್, ಬಿ.ವಿ ವೆಂಕಟೇಶ್ ಮುರೇಶ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಚಿನ್ನದ ಪದಕ ಪುರಸ್ಕೃತರಾದ ಎಂ ಆರ್ ಅಮೃತ ಲಕ್ಷ್ಮಿ, ಎಂ ಪಿ ತಿಪ್ಪೇಸ್ವಾಮಿ, ಶಿವಶಂಕರ ಮಠದ್, ಎ. ರಾಘವೇಂದ್ರ,

ಪಂಟು,ಆಬಿದ್ ಹುಸೇನ್,ಶೇಷಾದ್ರಿ,ಮಂಜುನಾಥ್,ಜಗದೀಶ್ ಹಾಗೂ ಬಾಲ್ ಬ್ಯಾಡ್ಮಿಂಟನ್ ಅಸೋಸಿಯೇಷನ್ ಪದಾಧಿಕಾರಿಗಳು ಮತ್ತು ನಾನಾ ಭಾಗಗಳಿಂದ ಬಂದಿದ್ದ ಮಾರ್ಗದರ್ಶಕರು ಭಾಗವಹಿಸಿದ್ದರು.

[t4b-ticker]

You May Also Like

More From Author

+ There are no comments

Add yours