ಕ್ಯಾದಿಕುಂಟೆ ಗ್ರಾಮದಲ್ಲಿ  ಒತ್ತುವರಿಯಾಗಿದ್ದ ಸರಕಾರಿ ಜಮೀನನ್ನ ತಹಶೀಲ್ದಾರ್ ನೇತೃತ್ವದಲ್ಲಿ ತೆರವು.

 

 

 

 

ಪರಶುರಾಂಪುರ.
ಹೋಬಳಿ  ವ್ಯಾಪ್ತಿಯ ಕ್ಯಾದಿಕುಂಟೆ ಗ್ರಾಮದಲ್ಲಿ  ಒತ್ತುವರಿಯಾಗಿದ್ದ ಸರಕಾರಿ ಜಮೀನನ್ನ ತಹಶೀಲ್ದಾರ್ ರಘುಮೂತಿ೯ ನೇತೃತ್ವದಲ್ಲಿ   ತೆರವುಗೊಳಿಸಿದರು.

ಗ್ರಾಮದ  ಸರ್ವೆ ನಂಬರ್ 157 ರಲ್ಲಿ  20 ಎಕರೆ 16 ಗುಂಟೆಯಲ್ಲಿ  ಅನಧಿಕೃತವಾಗಿ ಗುಡಿಸಲುಗಳ ನಿಮಾ೯ಣ ಜತೆ  ಜಾಗವನನ್ನ  ಅತಿಕ್ರಮಿಸಿ ಕೊಂಡಿದ್ದು ವಿಷಯ ತಿಳಿದ ತಹಶೀಲ್ದಾರ್ ರಘುಮೂರ್ತಿ ಶುಕ್ರವಾರ ಹಾಗೂ ಶನಿವಾರ ಬೆಳ್ಳಂಬೆಳಗ್ಗೆ ಸ್ಥಳಕ್ಕೆ ಭೇಟಿ ನೀಡಿ ಪೊಲೀಸ್ ಹಾಗೂ ಕಂದಾಯ ಅಧಿಕಾರಿಗಳ ಸಮಕ್ಷಮದಲ್ಲಿ ಒತ್ತುವರಿಯಾಗಿದ್ದು ಸರ್ಕಾರಿ ಜಮೀನನ್ನು ಮರುವಶಕ್ಕೆ ಪಡೆದಿದ್ದಾರೆ .

 

 

ಈ ವೇಳೆ ಮಾತನಾಡಿ, ಮುಂಬರುವ ದಿನಗಳಲ್ಲಿ ಚಳ್ಳಕೆರೆ ತಾಲೂಕಿನಲ್ಲಿ ಯಾವುದೇ ಸರ್ಕಾರಿ ಜಮೀನು ಕೆರೆ ಕುಂಟೆ ಹಳ್ಳ-ಕೊಳ್ಳ ಅರಣ್ಯಭೂಮಿಯನ್ನು ಯಾವುದೇ ಕಾರಣಕ್ಕೂ ಒತ್ತುವರಿ ಮಾಡುವುದಕ್ಕೆ ಮುಂದಾಗಬಾರದು , ಆಗ್ಯೂ ಒತ್ತುವರಿಗೆ ಪ್ರಯತ್ನಿಸಿದಲ್ಲಿ ಗೂಂಡಾ ಕಾಯ್ದೆ ಮತ್ತು ಭೂ ಕಂದಾಯ ಕಾಯ್ದೆಯ ನಿಯಮದಡಿ ಶಿಕ್ಷೆಗೆ ಗುರಿಪಡಿಸಲಾಗುವುದು ಎಂದು ಎಚ್ಚರಿಕೆ  ಜತೆ  ಗುಡಿಸಿಲುಗಳನ್ನ ಈ ವೇಳೆ ತೆರವುಗೊಳಿಸಲಾಯಿತು.

ಈ ಸಂದರ್ಭದಲ್ಲಿ ಪಿಎಸ್ಐ  ಸ್ವಾತಿ , ಕಂದಾಯ ಇಲಾಖೆಯ ಆರ್ ಐ ಮೋಹನ ಕುಮಾರ , ಪೊಲೀಸ್ ಮತ್ತು ಕಂದಾಯ ಇಲಾಖೆಯ ಸಿಬ್ಬಂದಿಗಳು,ಗ್ರಾಮಸ್ಥರು ಹಾಜರಿದ್ದರು.

[t4b-ticker]

You May Also Like

More From Author

+ There are no comments

Add yours