ಕೋವಿಡ್-19ರ ಮೂರನೇ ಅಲೆ ನಿಯಂತ್ರಣಕ್ಕೆ ಲಸಿಕೆ ಪಡೆಯಿರಿ: ಡಿಸಿ ಕವಿತಾ ಎಸ್.ಮನ್ನಿಕೇರಿ

 

 

 

 

ವಿಶೇಷ ಲಸಿಕಾ ಅಭಿಯಾನಕ್ಕೆ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಚಾಲನೆ

 

 

ಚಿತ್ರದುರ್ಗ,ಆಗಸ್ಟ್17:
ಕೋವಿಡ್-19ರ ಸಂಭಾವ್ಯ ಮೂರನೇ ಅಲೆಯ ನಿಯಂತ್ರಣಕ್ಕೆ ಸಾರ್ವಜನಿಕರು ಲಸಿಕೆ ಪಡೆಯಬೇಕು ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ತಿಳಿಸಿದರು.
ಮೊಳಕಾಲ್ಮುರು ತಾಲ್ಲೂಕಿನ ಅಶೋಕ ಸಿದ್ದಾಪುರ, ರಾಂಪುರ ಹಾಗೂ ನಾಗಸಮುದ್ರ ವ್ಯಾಪ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಮಂಗಳವಾರ ವಿಶೇಷ ಲಸಿಕಾ ಅಭಿಯಾನ ವೈದ್ಯರ ನಡೆ ಹಳ್ಳಿ ಕಡೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಕೋವಿಡ್ ಲಸಿಕೆ ಸಂಪೂರ್ಣ ಸುರಕ್ಷಿವಾಗಿದ್ದು, ಸಾರ್ವಜನಿಕರು  ತಪ್ಪದೇ ಲಸಿಕೆ ಪಡೆಯಬೇಕು.  ಲಸಿಕೆ ಪಡೆಯುವುದರಿಂದ ಯಾವುದೇ ಅಡ್ಡ ಪರಿಣಾಮ ಬರುವುದಿಲ್ಲ. ಜನರು ಯಾವುದೇ ಕಿವಿಮಾತುಗಳಿಗೆ ವದಂತಿಗಳನ್ನು ನಂಬದೇ ಲಸಿಕೆ ಪಡೆಯಬೇಕು ಎಂದು ಮನವಿ ಮಾಡಿದರು.
ಮೊಳಕಾಲ್ಮೂರು ತಾಲ್ಲೂಕಿನಲ್ಲಿ ಕೋವಿಡ್ ಲಸಿಕಾ ಪ್ರಗತಿ ಕುಂಠಿತಗೊಂಡ ಹಿನ್ನೆಯಲ್ಲಿ ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಆರ್. ರಂಗನಾಥ್ ತಂಡವು ಮೊಳಕಾಲ್ಮೂರು ತಾಲ್ಲೂಕಿನ ಆಶೋಕ ಸಿದ್ದಾಪುರ ಸಮುದಾಯ ಆರೋಗ್ಯ  ಕೇಂದ್ರ ವ್ಯಾಪ್ತಿಯ  ಕೋನಪುರ, ಹೊಸಕೋಟೆ ಮತ್ತು ರಾಂಪುರ ಸಮುದಾಯ ಆರೋಗ್ಯ ಕೇಂದ್ರದ ಬೊಮ್ಮಕ್ಕನಹಳ್ಳಿ, ನಾಗಸಮುದ್ರ ವ್ಯಾಪ್ತಿಯ ಉಚ್ಚಂಗಿದುರ್ಗ ಗ್ರಾಮಗಳಿಗೆ ಭೇಟಿ ನೀಡಿ ಲಸಿಕಾ ಮೇಳ ಆಯೋಜಿಸಿ ಮನೆ ಭೇಟಿ ಮಾಡಿ ಮಾಹಿತಿ ಶಿಕ್ಷಣ ನೀಡಲಾಯಿತು.
=====

[t4b-ticker]

You May Also Like

More From Author

+ There are no comments

Add yours