ಕೋಟ್ಯಾಂತರ ಅನುದಾನ ನೀಡಿ ಗ್ರಾಮೀಣ ಭಾಗದ ಅಭಿವೃದ್ದಿ: ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ

 

 

 

 

ಚಿತ್ರದುರ್ಗ: ಆರು ಹಳ್ಳಿಗಳಲ್ಲಿ 15 ಕೋಟಿಗಿಂತ ಹೆಚ್ಚು ಅನುದಾನದಲ್ಲಿ ಆರು ಹಳ್ಳಿಗಳಲ್ಲಿ ರಸ್ತೆಗಳು, ಸರ್ಕಾರಿ ಶಾಲೆಗಳು, ಅಂತರ್ಜಲ ಅಭಿವೃದ್ಧಿಗೆ ಒತ್ತು‌ ನೀಡಲಾಗಿದೆ ಎಂದು ಶಾಸಕ‌ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದರು.

ತಾಲೂಕಿನ ಕೆ.ಬಳ್ಳೆಕಟ್ಟೆ,ಬೀರಾವರ, ಸಾದರಹಳ್ಳಿ, ಎನ್.ಬಳಿಗಟ್ಟೆ, ಒಬವ್ವನಾಗತಿಹಳ್ಳಿ ಗ್ರಾಮಗಳಲ್ಲಿ ಡಿಎಂಎಫ್ ಅನುದಾನದಲ್ಲಿ ನೂತನ ಶಾಲಾ ಕಟ್ಟಡಗಳು ಮತ್ತು ಲೋಕೋಪಯೋಗಿ ಇಲಾಖೆಯಿಂದ ನಿರ್ಮಿಸುತ್ತಿರು ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು..

ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ಧಿ ಹೆಚ್ಚು ಒತ್ತು ನೀಡಲಾಗಿದೆ. ಹಳ್ಳಿಗಳ ಮುಖ್ಯ ರಸ್ತೆಗಳ ಜೊತೆಗೆ ಒಳ‌ ಭಾಗದಲ್ಲಿ ಸಿಸಿ. ರಸ್ತೆಗಳ ಮಾಡಲಾಗುತ್ತಿದ್ದು ಬಹುತೇಕ ಹಳ್ಳಿಗಳಿಗೆ ಕೇಲವೇ ರಸ್ತೆಗಳು ಬಿಟ್ಟು ಉಳಿದ ಎಲ್ಲಾ ರಸ್ತೆಗಳ ಅಭಿವೃದ್ಧಿಗೆ ಮಾಡಲಾಗಿದೆ. ಜೊತೆಗೆ ಶಿಕ್ಷಣಕ್ಕೆ ಒತ್ತು ನೀಡುವ ದೃಷ್ಟಿಯಿಂದ ಸರ್ಕಾರಿ ಶಾಲಾ ಕಟ್ಟಡಗಳಿಗೆ ಡಿಎಂಎಫ್ ನಲ್ಲಿ ಹಣ ನೀಡಿದ್ದೇನೆ
ಖಾಸಗಿ ಶಾಲೆಗಳಿಗಿಂತ ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಕರೆ ತರುವ ಕೆಲಸ ಮಾಡಬೇಕಾಗಿದೆ. ಅದಕ್ಕಾಗಿ ಶೀತಲವಾಸ್ಥೆ ಹಂತದಲ್ಲಿ ಇರುವ ಶಾಲಾ ಕಟ್ಟಡಗಳಿಗೆ ಆದ್ಯತೆ ಮೇರೆಗೆ ಹಣ ನೀಡಿ ಸುಧಾರಣೆಗೆ ಒತ್ತು ನೀಡಲಾಗುತ್ತಿದ್ದು ಹಂತ ಹಂತವಾಗಿ ಸುಧಾರಣೆ ಮಾಡಲಾಗುತ್ತದೆ.
ರೈತರಿಗೆ ಅಂತರ್ಜಲ ಮಟ್ಟ ಹೆಚ್ಚಿಸುವ ದೃಷ್ಟಿಯಿಂದ ಈ ಭಾಗದಲ್ಲಿ ಒಂದು ಚಕ್ ಡ್ಯಾಂ 1 ಕೋಟಿ ವೆಚ್ಚದಂತೆ 10 ಚಕ್ ಡ್ಯಾಂ ನಿರ್ಮಾಣ ಮಾಡಲಾಗಿದೆ ಎಂದರು.

 

 

ಇಂದು ನನ್ನ ಕ್ಷೇತ್ರದ ಬೀರಾವರ ಗ್ರಾಮದಲ್ಲಿ 46 ವೆಚ್ಚದಲ್ಲಿ ಸಿ.ಸಿ‌.ರಸ್ತೆ, 1 ಕೋಟಿ ವೆಚ್ಚದ ಚಕ್ ಡ್ಯಾಂ, ಎನ್.ಬಳಿಗಟ್ಟೆ ಗ್ರಾಮದಲ್ಲಿ 16 ಲಕ್ಷ ವೆಚ್ಚದಲ್ಲಿ ಶಾಲಾ ಕಟ್ಟಡ ಮತ್ತು 32 ಲಕ್ಷ ವೆಚ್ಚದ ಸಿಸಿ ರಸ್ತೆ , 1 ಕೋಟಿ ವೆಚ್ಚದ ಡ್ಯಾಂ ,ಸಾದರಹಳ್ಳಿ ಗ್ರಾಮದಲ್ಲಿ 16 ಲಕ್ಷ ವೆಚ್ಚದಲ್ಲಿ ಶಾಲಾ ಕಟ್ಟಡ ಮತ್ತು 1 ಕೋಟಿ ವೆಚ್ಚದಲ್ಲಿ ಚಕ್ ಡ್ಯಾಂ,
ಮಾರಘಟ್ಟ 20 ಲಕ್ಷ ಸಿ.ಸಿ.ರಸ್ತೆ, 50 ಲಕ್ಷದ ಚಕ್ ಡ್ಯಾಂ, ಓಬವ್ವನಾಗತೀಹಳ್ಳಿ ಹಳ್ಳಿಯಲ್ಲಿ 26 ಲಕ್ಷ ವೆಚ್ಚದಲ್ಲಿ ಸಿ.ಸಿ.ರಸ್ತೆ, 2 ಕೋಟಿ ವೆಚ್ಚದಲ್ಲಿ 2 ಚಕ್ ಡ್ಯಾಂ ಕಾಮಗಾರಿಗೆ ಚಾಲನೆ ನೀಡಿದ್ದು 15 ರಿಂದ 20 ದಿನದಲ್ಲಿ ಕೆಲಸ ಮುಕ್ತಾಯವಾಗಲಿದೆ. ಇನ್ನು ಒಂದೆರಡು ಹಳ್ಳಿಗಳಲ್ಲಿ ಚಕ್ ಡ್ಯಾಂ ಮತ್ತು ಸಿಸಿ.ರಸ್ತೆ ಕೇಳಿದ್ದು ಮಾರ್ಚ್ ನಂತರ ನೀಡುತ್ತೇನೆ ಎಂದು ಭರವಸೆ ನೀಡಿದರು.

ಜಲ ಜೀವನ್ ಮಿಷನ್ ಅಡಿಯಲ್ಲಿ ಎಲ್ಲಾ‌ ಹಳ್ಳಿಗಳಲ್ಲಿ ಓವರ್ ಎಡ್ ಡ್ಯಾಂಕ್ ನಿರ್ಮಾಣ ಮಾಡಿ ಪೈಪ್ ಲೈನ್ ಮೂಲಕ ಪ್ರತಿ ಮನೆ ಮನೆಹೆ ನಲ್ಲಿ ಮೂಲಕ‌ ನೀರು ಒದಗಿಸುವಂತಹ ಜನಪ್ರಿಯ ಕಾರ್ಯಕ್ರಮ ನಮ್ಮ ಸರ್ಕಾರ ಮಾಡಿರುವುದು ಎಲ್ಲಾ ಜನರಿಗೆ ಸಿದ್ದ ನೀರಿ ಸಿಕ್ಕಂತಾಗುತ್ತದೆ ಮತ್ತು ಫ್ಲೋರೈಡ್ ನೀರಿನಿಂದ ಮುಕ್ತಿ ಹೊಂದಿ ಆರೋಗ್ಯ ಉತ್ತಮವಾಗಿರಲು ಸಹಕಾರಿ‌ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ಉಮೇಶ್, ರೂಪ, ಮೇಘರಾಜ್,ಪ್ರಸನ್ನಕುಮಾರ್, ಪವಿತ್ರ,ಶಿವು, ಶಿವಕುಮಾರ್, ರವಿಕುಮಾರ್ ಮತ್ತು ಮುಖಂಡರಾದ ತಿಪ್ಪೇಸ್ವಾಮಿ, ಮಲ್ಲಿಕಾರ್ಜುನ್, ಕುಮಾರಸ್ವಾಮಿ , ಮಂಜುನಾಥ್ ಮತ್ತು ಲೋಕೋಪಯೋಗಿ ಇಂಜಿನಿಯರ್ ಇದ್ದರು.

[t4b-ticker]

You May Also Like

More From Author

+ There are no comments

Add yours