ಕೋಟೆನಾಡು ಬುಡಕಟ್ಟು ಜನರ ಸಂಸ್ಕ್ರತಿ ಮತ್ತು ಸಂಪ್ರಾದಯದ ತವರೂರು: ಸಚಿವ ಬಿ.ಶ್ರೀರಾಮುಲು.

 

 

 

 

ಚಿತ್ರದುರ್ಗ:ಬುಡಕಟ್ಟುಗಳ  ಸಂಸ್ಕ್ರತಿ ಮತ್ತು ಸಂಪ್ರಾಯದ ನಾಡು ತವರೂರು ಎಂದರೆ ಕೋಟೆ ನಾಡು ಎಂದು ಸಾರಿಗೆ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸಚಿವರದಾ ಬಿ.ಶ್ರೀರಾಮುಲು ಹೇಳಿದರು.

 

 

ನಗರದ ಹಳೆ ಮಾಧ್ಯಮಿಕ ಮೈದಾನದಲ್ಲಿ (ಮದಕರಿ ಮೈದಾನ) ದಲ್ಲಿ  ಪರಿಶಿಷ್ಟ ಪಂಗಡಗಳ ಸಚಿವಾಲಯ, ಕರ್ನಾಟಕ ಸರ್ಕಾರ ಬೆಂಗಳೂರು, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಬೆಂಗಳೂರು, ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ  ಮೈಸೂರು ಇವರ ಸಂಯುಕ್ತ ಆಯೋಜಕತ್ವದಲ್ಲಿ ಚಿತ್ರದುರ್ಗ ಜಿಲ್ಲಾಡಳಿತ ಸಹಯೋಗದೊಂದಿಗೆ ರಾಜ್ಯ ಮಟ್ಟದ ಬುಡಕಟ್ಟು ಉತ್ಸವ ಕಾರ್ಯ ಉದ್ಘಾಟಿಸಿ ಮಾತನಾಡಿದರು.
ಇಂದು ವಿಶೇಷವಾಗಿರುವ ದಿನ 2 ವರ್ಷಗಳಿಂದ ಕೋವಿಡ್ ನಿಂದಾಗಿ ಎಲ್ಲಾರನ್ನು ಸೇರಿಸಿ ಮಾಡುವ ಕಾರ್ಯಕ್ರಮ ಮಾಡಲು ಆಗಿಲ್ಲ. ಚಿತ್ರದುರ್ಗ ಜಿಲ್ಲೆಯಲ್ಲಿ ಸಾಕಷ್ಟು ಬುಡಕಟ್ಟು ಸಂಸ್ಕ್ರತಿಗಳ ನಾಡಾಗಿದೆ. ಬುಡಕಟ್ಟು ಗಳ ಆಹಾರ ಪದ್ದತಿಗಳು, ಆಹಾರ ಪದ್ದತಿ, ವ್ಯಾಪಾರ , ಉದ್ಯಮಗಳು, ಕಲೆಗಳು ಸೇರಿ ಎಲ್ಲಾವನ್ನು ಜನರಿಗೆ ಬುಡಕಟ್ಟು ಸಮುದಾಯದ ಎಲ್ಲಾವನ್ನು ಸಾರುವ  ಕೆಲಸ ಬುಡಕಟ್ಟು ಉತ್ಸವದಲ್ಲಿ ತೋರಿಸಲಾಗುತ್ತಿದೆ.  ಚಿತ್ರದುರ್ಗದಲ್ಲಿ ಬುಡಕಟ್ಟು ಜನರು ವಿವಿಧತೆಯಲ್ಲಿ ಏಕತೆಯಾ
ಉತ್ಸವಗಳ ಮೂಲಕ ತಮ್ಮ ಮನೆಯಲ್ಲಿ ಮಾಡಿದ ಗುಡಿ ಕೈಗಾರಿಕೆಗಳ  ಮೂಲಕ  ಮಾಡಿದ  ಎಲ್ಲಾ ವಸ್ತುಗಳನ್ನು  ಬುಡಕಟ್ಟು ಉತ್ಸವದಲ್ಲಿ ತೋರಿಸಬಹುದು.
ಕರಿಮೆಣಸು, ಕಾಫಿ ಮೈಸೂರು ಭಾಗದಲ್ಲಿ ಬುಡಕಟ್ಟು ಜನರು ಹೆಚ್ಚು ಬೆಳೆಯುತ್ತಿದ್ದ ಆ ಜನರಿಗೆ   ಅಂತರಾಷ್ಟ್ರೀಯ ಮಾರುಕಟ್ಟೆ ದೊರಕಿಸುವ ಕೆಲಸ ಇಲಾಖೆ ಮಾಡುತ್ತಿದೆ. ಬಹು ದಿನಗಳ ಕನಸಾದ ಬುಡಕಟ್ಟು ಸಂಶೋಧನಾ ಸಂಸ್ಥೆ ಕಟ್ಟಡ ನಿರ್ಮಾಣವಾಗುತ್ತಿದೆ ಅದು ನನ್ನ ಭಾಗ್ಯವಾಗಿದೆ. ಸಮುದಾಯ ಕಟ್ಟ ಕಡೆಯ ವ್ಯಕ್ತಿಗಳ ಅಭಿವೃದ್ಧಿ ಆಗಬೇಕು ಎಂದರು.
ಪರಿಶಿಷ್ಟ ವರ್ಗಗಳ ಸಚಿವಾಲಯ ಮಾಡುವ ಮೂಲಕ ಸರ್ಕಾರ ಸಮುದಾಯದ ಏಳ್ಗೆಗೆ ಬದ್ದವಾಗಿದೆ.  ಅದಕ್ಕೆ ಸಿಎಂ ಬೊಮ್ಮಾಯಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಬುಡಕಟ್ಟು ಆಶ್ರಮಗಳಲ್ಲಿನ  ಮಕ್ಕಳು ಖಾಸಗಿ ಸಂಸ್ಥೆಗಳಿಗೆ ಪೈಪೋಟಿ ಮಾಡುತ್ತಿರುವುದು ಸಂತೋಷವಾಗಿದೆ.
ನಾನು ಮಂತ್ರಿಯಾದ ಮೇಲೆ  ರಾಜ್ಯದ ಎಲ್ಲಾ ಆಶ್ರಮ ಶಾಲೆಗಳನ್ನು ವಾಲ್ಮೀಕಿ ಶಾಲೆಗಳೆಂದು   ಘೋಷಿಸಲಾಗಿದೆ. ಚಾಮರಾಜನಗರ, ಮೈಸೂರು ಕಡೆ ಹೋದಾಗ ಸ್ವತಂತ್ರ ಬಂದು ಇಷ್ಟು ದಿನ ಆದರು ಸೌಲಭ್ಯಗಳು ಇನ್ನು ತಲುಪುತ್ತಿಲ್ಲ.
ಮೊಳಕಾಲ್ಮುರು ಮತ್ತು ಚಳ್ಳಕೆರೆಯಲ್ಲಿ ಬುಡಕಟ್ಟು ಸಂಸ್ಕ್ರತಿ ಜನರು ಹೆಚ್ಚು ನಾವು ಕಾಣಬಹುದು. ಈಗಾಲು ಸಹ ದೇವರ ಎತ್ತುಗಳ ಜೊತೆ ಕಂಬಳಿ ಹಾಕಿಕೊಂಡು ಇಲ್ಲಿಯವರೆಗೂ ಸುಮ್ಮನೆ ಹೋಗುತ್ತಿದ್ದಾರೆ. ಆದರೆ ಯಾವುದೇ ಸಂಬಳ ಇಲ್ಲದೆ ಸಂಸ್ಜ್ರತಿ ಮತ್ತು ಸಂಪ್ರದಾಯ ನಾವು ಕಾಣಬಹುದು. ಸಂಪ್ರದಾಯ ಮುಂದೆ ಹೋಗಲು ಏನು ಮಾಡಬೇಕು ಎಂಬ ಯೋಚನೆ ಮಾಡಬೇಕಿದೆ.
ಸಮುದಾಯ ಇನ್ನು ಬಲಿಷ್ಠವಾಗಿ ಬೆಳೆಯಬೇಕು. ದೇಶದ ಪ್ರಧಾನಿ ನರೇಂದ್ರ ಮೋದಿ ಅವರು  ಸಹ  ಬುಡಕಟ್ಟು ಜನರಿಗಾಗಿ ಗೊ ಲೊಕಲ್ ಫರ್ ಲೋಕಲ್ ಎಂಬ ಯೋಜನೆಗೆ ಚಾಲನೆ ನೀಡಿದ್ದಾರೆ.  ಇದರ ಜೊತೆಯಲ್ಲಿ ರಾಜ್ಯ ಮಟ್ಟದ ಬುಡಕಟ್ಟು ಉತ್ಸವಗಳು ಯಶಸ್ವಿಯಾಗಲು ಸಾರ್ವಜನಿಕರ ಸಹಕಾರ ಮತ್ತು ಬುಡಕಟ್ಟು ಜನರ ಸಮಸ್ಯೆಗಳನ್ನು ಅರಿತು ಅವರಿಗೆ ನ್ಯಾಯ ಒದಗಿಸುವ ಕೆಲಸ ಮಾಡಲು ನಾನು ಬದ್ದ ಎಂದು ತಿಳಿಸಿದರು.
ಸಮುದಾಯದವರಿಗೆ ಶಿಕ್ಷಣ ನೀಡುವ ಕೆಲಸವನ್ನು ಬುದ್ದಿಜೀವಿಗಳು, ಸಮಾಜದವರು, ಹಿರಿಯ ಅಧಿಕಾರಿಗಳು, ಪತ್ರಕರ್ತರು ಸಮಾಜ ಒಗ್ಗಟ್ಟು ಮಾಡುವ ಕೆಲಸ ಮಾಡಬೇಕಿದೆ.
ಸಮುದಾಯದಲ್ಲಿನ ಕಚ್ಚಾಟ ಬಿಟ್ಟು  ಎಲ್ಲಾರ ಒಂದಾಗಬೇಕು,  ಶ್ರೀರಾಮಲು ಅಂತಹ ಒಬ್ಬ ವ್ಯಕ್ತಿ ಬೆಳೆಯಲು ಇನ್ನು 15 ವರ್ಷ ಆದರು ಆಗಲ್ಲ. ನೆನಪಿನಲಿಟ್ಟುಕೊಂಡು ಸಮಾಜ  ಒಂದಾಗಬೇಕು ಎಂದು ಸಮಾಜ ತಿದ್ದುವ ಕೆಲಸ ಸಹ ಬುಡಕಟ್ಟು ಉತ್ಸವದಲ್ಲಿ ಸಚಿವ ಮಾಡಿದರು.
ಶಾಸಕ ಟಿ.ರಘುಮೂರ್ತಿ ಮಾತನಾಡಿ ಪರಿಶಿಷ್ಟ ವರ್ಗಗಳ ಸಚಿವಲಾಯ ಆಗಿರುವುದಕ್ಕೆ ಸಂತೋಷ ಆಗಿದೆ. ಕರ್ನಾಟದಲ್ಲಿರುವ 50 ಬುಡಕಟ್ಟು ಜನರ  ದೇಆಶದ 765 ಬು ಸಮುದಾಯ ಇವೆ.ಬುಡಕಟ್ಟು ಸಮುದಾಯದ ಅರಣ್ಯ ಪ್ರದೇಶ ಜನರಿ ಹೆಚ್ಚು ಮುಗ್ದತೆ ಇದೆ. ಚಳ್ಳಕೆರೆ ಕ್ಷೇತ್ರದ ನನ್ನಿವಾಳ ಭಾಗದಲ್ಲಿ 30 ಹಟ್ಟಿಗಳಿಗೆ. ಬುಡಕಟ್ಟು ಜನರ ಆರ್ಥಿಕ ಪರಿಸ್ಥಿತಿ ಸುಧಾರಿಸಬೇಕಿದೆ. ಬುಡಕಟ್ಟು ಜನರಿಗೆ ಶಿಕ್ಷಣ ನೀಡಬೇಕಿದೆ. ಈ ರಾಜ್ಯದಲ್ಲಿ  ನಾಯಕ ಸಮುದಾಯದಲ್ಲಿ ಎತ್ತರಕ್ಕೆ ಬೆಳೆದಿದ್ದಾರೆ. ಅವಿ ಒಂದು ಮನವಿ ಎಂದರೆ ಪರಿಶಿಷ್ಟ ವರ್ಗಗಕ್ಕೆ 7.5% ಮೀಸಲಾತಿ ಮಾಡುವ ಕೆಲಸ ಆಗಬೇಕಿದೆ. ನಮ್ಮವರೆ ಸಚಿವರು ಆಗಿರುವುದರಿಂದ ಸಮಾಜಕ್ಕೆ‌ ನ್ಯಾಯ ದೊರಕಿಸುವ ಕೆಲಸ ಆಗಬೇಕಿದೆ.  ನಮ್ಮ ನಾಯಕರು ಆಗಿರುವ ಶ್ರೀರಾಮುಲು ಮಾಡುತ್ತಾರೆ ಎಂಬ ಅಚಲ ವಿಶ್ವಾಸ ಇದೆ ಎಂದರು.
ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಮಾತನಾಡಿ ಬುಡಕಟ್ಟು ಸಮುದಾಯದವರಿಗೆ ಸೌಲಭ್ಯಗಳನ್ನು ದೊರಕಿಸುವ ಕೆಲಸ ಅಧಿಕಾರಿಗಳು ಮಾಡಬೇಕಿದೆ. ಸಚಿವರಾದ ಶ್ರೀರಾಮುಲು ಅವರು ಇನ್ನು ಹೆಚ್ಚಿನ ಒತ್ತು ನೀಡಬೇಕಿದೆ. ಬುಡಕಟ್ಟು ಜನರು ಅಲ್ಲಿನ ಪರಿಸ್ಥಿತಿ ಮತ್ತು ಜೀವನ ಶೈಲಿ ಕುರಿತು ಜನಪದ ಗೀತೆಗಳನ್ನು ಹಾಡುತ್ತಾರೆ. ಅಂತಹವರ ಶೈಕಣಿಕ ಅಭಿವೃದ್ಧಿಗೆ ಶ್ರಮವಹಿಸಿ ಎಂದರು.
ಹರಿಹರದ ರಾಜನಹಳ್ಳಿ ಗುರುಪೀಠದ ಶ್ರೀಪ್ರಸನ್ನಾನಂದಪುರಿ ವಾಲ್ಮೀಕಿ ಸ್ವಾಮೀಜಿ ‌ಮಾತನಾಡಿ ಮನುಷ್ಯ ಹಬ್ಬ ಹರಿದಿನ, ಉತ್ಸವ ಮಾಡುವಾಗ ಸಂಭ್ರಮದಿಂದ ಇರುತ್ತಾನೆ. ಕರ್ನಾಟಕದಲ್ಲಿ 50 ಬುಡಕಟ್ಟು ಸಮುದಾಯಗಳಿವೆ.50-60 ಲಕ್ಷ ಬುಡಕಟ್ಟು ಜನಸಂಖ್ಯೆ ಹೊಂದಿದ್ದಾರೆ. ಚಿತ್ರದುರ್ಗ, ಬಳ್ಳಾರಿಯಲ್ಲಿ ಹೆಚ್ಚು ಬುಡಕಟ್ಟು ಜನಸಂಖ್ಯೆ ಇದ್ದಾರೆ.
ಸಮುದಾಯಗಳಿಗೆ ಸರ್ಕಾರಗಳು ಸಾಕಷ್ಟು ಅನುದಾನ ನೀಡುತ್ತಿದ್ದಾರೆ. ಯಡಿಯೂರಪ್ಪ ಅವರಿಗೆ ಬಿ.ಶ್ರೀರಾಮುಲು ಅವರ ನೇತೃತ್ವದಲ್ಲಿ ಮನವಿ ಕೊಟ್ಟಾಗ ವಾಲ್ಮೀಕಿ ಜಯಂತಿಯನ್ನು ಸರ್ಕಾರಿ ಆಚರಣೆಗೆ ಅವಕಾಶ ಮಾಡಿಕೊಟ್ಟರು.
ನಕಲಿ ಜಾತಿ ಪ್ರಮಾಣ ಪತ್ರವನ್ನು ತೆಗೆದುಕೊಳ್ಳುತ್ತಿದ್ದಾರೆ. ಇದಕ್ಕೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ರಾಜಕೀಯ, ಆರ್ಥಿಕವಾಗಿ ನೀಡಿರುವುದನ್ನು ಕರ್ನಾಟಕದಲ್ಲಿ ಉದ್ಯೋಗ ಮತ್ತು ಶಿಕ್ಷಣಕ್ಕೆ ಜನಸಂಖ್ಯೆ ಅನುದಾನ ನೀಡಬೇಕು. ಅರಣ್ಯ ಭೂಮಿ ಉಳುಮೆ ಮಾಡಿದವರಿಗೆ ಹಕ್ಕು ಪತ್ರ ನೀಡಿದರೆ ಅವರು ಸ್ವಾವಲಂಬನೆ ಆಗಲು ಅನುಕೂಲವಾಗುತ್ತದೆ.
ಪರಿಶಿಷ್ಟ ವರ್ಗಗಕ್ಕೆ 7.5% ಮೀಸಲಾತಿ, ನಕಲಿ ಜಾತಿ ಪ್ರಮಾಣ ಪತ್ರ ತಡೆಗಟ್ಟಲು ಕ್ರಮ, ಅರಣ್ಯ ಹಕ್ಕು ಪತ್ರ ವಿತರಣೆ ಮಾಡಬೇಕು ಎಂದು ಸ್ವಾಮೀಜಿ ಮನವಿ ಮಾಡಿದರು.
ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಮಾತನಾಡಿ ನಮ್ಮ ಜಿಲ್ಲೆಯಲ್ಲಿ ಅತಿ ಹೆಚ್ಚು ಜನಸಂಖ್ಯೆ ಇರುವ ನಮ್ಮ ಜಿಲ್ಲೆಗೆ ಬುಡಕಟ್ಟು ಉತ್ಸವ ಮಾಡಲು ಅವಕಾಶ ಮಾಡಿಕೊಟ್ಟಿದ್ದಕ್ಕೆ ಸಚಿವ ಶ್ರೀರಾಮುಲು ಅವರಿಗೆ ಅಭಿನಂದನೆ ಸಲ್ಲಿಸಿದರು.ಎತ್ತುಗಳನ್ನು ದೇವರ ರೀತಿಯಲ್ಲಿ ನೋಡಿಕೊಳ್ಳುತ್ತಾರೆ. ಬುಡಕಟ್ಟು ಸಂಸ್ಕ್ರತಿಯನ್ನು ಚಿತ್ರದುರ್ಗ ಜಿಲ್ಲೆಯಲ್ಲಿ ಅದ್ಭತವಾಗಿ ಕಾಣಬಹುದು. ಬುಡಕಟ್ಟು ಸಂಸ್ಜ್ರತಿಯ ಉಸೇನ್ ಬೊಲ್ಟ್ 3 ಬಾರಿ ನೂರು ಮೀಟರ್  ಓಟದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಎಂಎಲ್ ಸಿ ಯಾದ  ಶಾಂತರಾಮ್ ಸಿದ್ದಿ ಅವರು ಬುಡಕಟ್ಟು ಸಂಸ್ಕ್ರತಿಯ ಉಳಿಸುವ ಕೆಲಸ ಮಾಡುತ್ತಿದ್ದಾರೆ. ದಾವಣಗೆರೆಯಲ್ಲಿ ಬುಡಕಟ್ಟು ವಿಶ್ವವಿದ್ಯಾಲಯ ಮಾಡಬೇಕು ಎಂದು ಸಚಿವರಿಗೆ ತಿಳಿಸಿದರು.
ಈ‌ ಸಂದರ್ಭದಲ್ಲಿ ಎಂಎಲ್ ಸಿ ಶಾಂತರಾಮ ಸಿದ್ದಿ,    ನಗರಸಭೆ ಅಧ್ಯಕ್ಷೆ ತಿಪ್ಪಮ್ಮ ವೆಂಕಟೇಶ್, ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಜಿ.ರಾಧಿಕಾ, ರಾಜ್ಯ ಪರಿಶಿಷ್ಟ ವರ್ಗಗಳ ನಿರ್ದೇಶಕ ಕಾಂತರಾಜ್, ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ನಿರ್ದೇಶಕ ಟಿ.ಟಿ.ಬಸವನಗೌಡ, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಬದ್ರಿನಾಥ್, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಧಿಕಾರಿ ಎನ್.ಮಂಜುನಾಥ್ ಮುಖಂಡರಾದ ಪಾಪೇಶ್ ನಾಯಕ ಇದ್ದರು.
[t4b-ticker]

You May Also Like

More From Author

+ There are no comments

Add yours