ಕಿತ್ತಳೆಹಣ್ಣು ಮಾರಾಟ ಮಾಡಿ ಬಂದ ಹಣದಲ್ಲಿ ಶಾಲೆ ನಿರ್ಮಿಸಿದ ಸಂತ ಹರೇಕಳ ಹಾಜಬ್ಬ ಪದ್ಮಶ್ರೀ ಪ್ರಶಸ್ತಿ ಪ್ರದಾನ

 

 

 

 

ಕಿತ್ತಳೆಹಣ್ಣು ಮಾರಾಟ ಮಾಡಿ ಅದರಿಂದ ಬಂದ ಹಣವನ್ನು ಬಳಸಿ ಶಾಲೆಯನ್ನು ನಿರ್ಮಿಸಿ ಸದ್ದಿಲ್ಲದೆ ಕ್ರಾಂತಿ ಮಾಡಿದ ಅಕ್ಷರ ಸಂತ ಹರೇಕಳ ಹಾಜಬ್ಬ ಅವರಿಗೆ ದೆಹಲಿಯಲ್ಲಿಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ಪದ್ಮಶ್ರೀ ಪ್ರಶಸ್ತಿಯನ್ನು ಪ್ರದಾನ ಮಾಡಿದರು.

ಮಂಗಳೂರಿನಲ್ಲಿ ಹಣ್ಣು ಮಾರಿದ್ದರಿಂದಲೇ ಬಂದ ಹಣದಿಂದ ತನ್ನ ಹುಟ್ಟೂರು ಹರೇಕಳ ಗ್ರಾಮದಲ್ಲಿ ಶಾಲೆ ಕಟ್ಟಿಸಿದ ಹಾಜಬ್ಬ ಮಕ್ಕಳಿಗೆ ಶಿಕ್ಷಣ ನೀಡುವಲ್ಲಿ ಮಹತ್ತರ ಪಾತ್ರ ವಹಿಸಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಆಶಯ ಹಾಜಬ್ಬ ಅವರದ್ದು.

 

 

ಶಾಲೆಯ ಮಾಲಿಕತ್ವವನ್ನು ಹೊಂದಿದ್ದರೂ ಇಂದಿಗೂ ಹಣ್ಣು ಮಾರಾಟದಿಂದಲೇ ಶಾಲೆಯ ನಿರ್ವಹಣೆ ಮಾಡುತ್ತಿದ್ದಾರೆ. ಹರೇಕಳ ಹಾಜಬ್ಬ ಪದ್ಮಶ್ರೀ ಪ್ರಶಸ್ತಿ ಪಡೆಯುತ್ತಿದ್ದಂತೆಯೇ ಗ್ರಾಮಸ್ಥರು ಮತ್ತು ಶಾಲಾ ಮಕ್ಕಳು ಅತ್ಯಂತ ಸಂಭ್ರಮ ವ್ಯಕ್ತಪಡಿಸಿದರು ಎಂದು ವಾರ್ತಾಭಾರತಿ ಫೋಟೋ ಸಹಿತ ವರದಿ ಮಾಡಿದೆ.

ದೊಡ್ಡದೊಡ್ಡ ಬಂಡವಾಳಗಾರರು ಅಪಾರ ಬಂಡವಾಳ ಹೂಡಿ ಶಿಕ್ಷಣ ಸಂಸ್ಥೆಗಳು ಸ್ಥಾಪಿಸಿ ಲಾಭ ಮಾಡುವುದು ಒಂದು ಕಡೆ ಇದ್ದರೆ, ಹಾಜಬ್ಬ ಅವರು ಹಣ್ಣು ಮಾರುತ್ತಲೇ ಅದರಿಂದ ಬಂದ ಹಣವನ್ನೆಲ್ಲಾ ಶಾಲೆ ನಿರ್ಮಿಸಲು ಬಳಸಿದರು. ಬಳಸುತ್ತಿದ್ದಾರೆ ಕೂಡ. ಹಾಜಬ್ಬ ಅವರದ್ದು ಲಾಭದ ದೃಷ್ಟಿಯಲ್ಲ. ಗ್ರಾಮೀಣ ಪ್ರದೇಶದ ಎಲ್ಲಾ ಜಾತಿಯ ಬಡಮಕ್ಕಳಿಗೆ ಶಿಕ್ಷಣ ನೀಡಬೇಕೆಂಬ ಕನಸನ್ನು ನನಸು ಮಾಡಿದ್ದಾರೆ.

ಬಂಡವಾಳಗಾರರು ಸಾಧನೆ ಮಾಡಿ ಪ್ರಶಸ್ತಿ ಪಡೆಯುವುದು ಸುಲಭ. ಆದರೆ ಹಾಜಬ್ಬ ಅಂತಹ ಉದ್ದೇಶವನ್ನೇ ಹೊಂದಿಲ್ಲ ಎಂಬುದು ಮೆಚ್ಚುವಂತಹ ಸಂಗತಿ. ಲಾಭವಿಲ್ಲದೆ ಶಿಕ್ಷಣ ಸಂಸ್ಥೆಯನ್ನು ಮುನ್ನಡೆಸುವುದು ಎಷ್ಟೊಂದು ಕಷ್ಟ ಎಂಬುದು ಹಾಜಬ್ಬ ಅವರಿಗೆ ಮಾತ್ರ ಗೊತ್ತು. ಇಂತಹ ಸಂತತಿ ಸಾವಿರವಾಗಲಿ. ಹಾಜಬ್ಬ ಅವರಂಥವರು ಮತ್ತಷ್ಟು ಮಂದಿ ಹುಟ್ಟಿ ಬರಲಿ. ಶಿಕ್ಷಣ ಕ್ರಾಂತಿ ಉಜ್ವಲವಾಗಲಿ.

[t4b-ticker]

You May Also Like

More From Author

+ There are no comments

Add yours