ಕನ್ನಡತನದ ಸಂರಕ್ಷಣೆ ಮತ್ತು ಸಂವರ್ಧನೆಯೆ ಕಸಾಪ ಆಶಯ-ಕರಿಯಪ್ಪ ಮಾಳಿಗೆ

 

 

 

 

ಕನ್ನಡಿಗರ ಅಭಿಮಾನದ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತಿಗೆ 108ರ ಸಂಭ್ರಮ. ಕನ್ನಡ ನೆಲ ಜಲ ಭಾಷೆ ಸಾಹಿತ್ಯ ಸಂಸ್ಕೃತಿಯ ಸಂರಕ್ಷಣೆ ಮತ್ತು ಸಂವರ್ಧನೆಯ ಜೊತೆಗೆ, ಕನ್ನಡಿಗರ ಸಾಂಸ್ಕೃತಿಕ ಅಸ್ಮಿತೆಯಾಗಿರುವ ಪರಿಷತ್ತು 5-5-1915ರಲ್ಲಿ ಸ್ಥಾಪನೆಯಾದ ಸ್ವಾಯತ್ತ ಸಂಸ್ಥೆ. ಇದರ ಹುಟ್ಟು ಮತ್ತು ಬೆಳವಣಿಗೆಯ ಹಿಂದೆ ಅನೇಕ ಮಹನೀಯರ ಆಸಕ್ತಿ ಮತ್ತು ಶ್ರಮ ಇದೆ. ಮೈಸೂರು ಅರಸರಾಗಿದ್ದ ರಾಜರ್ಷಿ ನಾಲ್ವಡಿ ಕೃಷ್ನರಾಜ ಒಡೆಯರು ಕಾಳಜಿ ವಹಿಸಿ ಸ್ಥಾಪಿಸಿದ ಕರ್ನಾಟಕ ಸಾಹಿತ್ಯ ಪರಿಷತ್ತು ಮುಂದೆ ಕನ್ನಡ ಸಾಹಿತ್ಯ ಪರಿಷತ್ತಾಗಿ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿ ಕನ್ನಡಿಗರ ಹಿತಾಸಕ್ತಿಗಳನ್ನು ಸಂರಕ್ಷಿಸುವ ಹೊಣೆಗಾರಿಕೆಯಾಗಿ ಬೆಳೆಯಲು ಹಲವಾರು ಮಹನೀಯರು ಶ್ರಮಿಸಿದ್ದಾರೆ. ಈವರೆಗೆ ಸುಮಾರು 26 ಜನ ಅಧ್ಯಕ್ಷರಾಗಿದ್ದು, 85 ಸಾಹಿತ್ಯ ಸಮ್ಮೇಳನಗಳನ್ನು ಆಯೋಜಿಸಲಾಗಿದೆ. ಆ ಮೂಲಕ ಕನ್ನಡ ಮನಸ್ಸುಗಳ ಒಗ್ಗೂಡುವಿಕೆಗೆ, ಕನ್ನಡವನ್ನು ಆಧುನಿಕತೆಗೆ ತಕ್ಕಂತೆ ಕಟ್ಟುವಲ್ಲಿ, ಕನ್ನಡ ಪ್ರಜ್ಞೆಯನ್ನು ನಾಡಿನ ಮೂಲೆ ಮೂಲೆಗೆ ತಲುಪಿಸುವ ಮತ್ತು ವಿಸ್ತರಿಸುವ ಅಭೂತಪೂರ್ವ ಕಾರ್ಯವನ್ನು ಮಾಡುತ್ತಾ ಬಂದಿದೆ. ಕನ್ನಡ ಸಾಹಿತ್ಯದ ತಾತ್ವಿಕತೆಯಾದ ಸೌಹಾರ್ದತೆ, ಸಮಾನತೆ, ಮತ್ತು ಸಾಮರಸ್ಯವನ್ನು ಜನಸಾಮಾನ್ಯರಿಗೆ ತಲುಪಿಸಲು ಪುಸ್ತಕಗಳ ಪ್ರಕಟಣೆ, ಸಮ್ಮೇಳನ, ಸಂವಾದದ ಮೂಲಕ ಉಳಿಸಿ ಬೆಳೆಸುವ ಕ್ರಿಯೆಯಲ್ಲಿ ತೊಡಗಿದೆ. ಸಾವಿರಾರು ವರ್ಷಗಳ ಇತಿಹಾಸವಿರುವ ಕನ್ನಡ ಸಾಹಿತ್ಯ ಮತ್ತು ಕನ್ನಡ ಸಂಸ್ಕೃತಿಯನ್ನು ಜೈನಕವಿಗಳು, ವಚನಕಾರರು, ತತ್ವಪದಕಾರರು, ಜನಪದರು, ವೀರಶೈವ ಕವಿಗಳು, ವೈದಿಕ ಕವಿಗಳಲ್ಲದೆ, ಕ್ರೈಸ್ತ ಮಿಷನರಿಗಳು, ಇಸ್ಲಾಂಧರ್ಮೀಯರು ಆಧುನಿಕ ಕವಿಗಳು ಕನ್ನಡವನ್ನು ಜಾತಿ ಮತ ಧರ್ಮಗಳ ಎಲ್ಲೆಯನ್ನು ಮೀರಿ ಜಾತ್ಯತೀತವಾಗಿ ಕಟ್ಟಿದ್ದಾರೆ. ಮನುಷ್ಯ ಜಾತಿ ತಾನೊಂದೆ ವಲಂ ಎನ್ನುವ ಕವಿ ಆಶಯದಂತೆ ಮಾನವ ದರ್ಮದ ಮಹತ್ವ ಸಾರುವ ಕನ್ನಡ ಸಾಹಿತ್ಯವನ್ನು ಜನಸಾಮಾನ್ಯರಿಗೆ ತಲುಪಿಸುವ ಕೆಲಸವನ್ನು ಪರಿಷತ್ತು ಹಿಂದಿನಿಂದಲೂ ಮಾಡುತ್ತಿದೆ. ಹಾಗೆ ಮುಂದೆಯೂ ಮಾಡಬೇಕಿದೆ.
ಮುಖ್ಯ ಅತಿಥಿಯಾಗಿ ಬಾಗವಹಿಸಿದ್ದ ಎಚ್,ಎನ್. ನರಸಿಂಹಯ್ಯನವರು ಮಾತನಾಡುತ್ತಾ ಕನ್ನಡ ಸಾಹಿತ್ಯ ಬೇರೆ ಬೇರೆ ಭಾಷಿಕರಿಂದ ಬೆಳದು ಶ್ರೀಮಂತವಾಗಿದೆ. ಅದರಲ್ಲೂ ಇಂಗ್ಲೀಶ್ ಭಾಷೆಯಿಂದ ಪ್ರೇರಣೆ ಪಡೆದು ಹಲವು ಪ್ರಕಾರಗಳಾಗಿ ಬೆಳೆದು ಬಂದಿದೆ. ವಿದ್ಯಾರ್ಥಿಗಳು ಅನ್ಯ ಭಾಷೆಗಳ ಸಂಪರ್ಕದಿಂದ ಕನ್ನಡವನ್ನು ಕಲಿತು ಬೆಳೆಸಬೇಕಾಗಿದೆ ಎಂದರು.
ಪ್ರಭಾರ ಪ್ರಂಶುಪಾಲರಾದ ತಿಮ್ಮಯ್ಯನವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಡಾ.ನಾಗೇಶ್ ಮಾತನಾಡುತ್ತಾ ಪರಿಷತ್ತಿನ ಸದಸ್ಯರ ಸಂಖ್ಯೆ ಹೆಚ್ಚಿಸಬೇಕಿದೆ. ವಿದ್ಯಾರ್ಥಿಗಳು ಪರಿಷತ್ತನ ಸದಸ್ಯರಾಗಿ ಪರಿಷತ್ತಿನ ಸೌಲಭ್ಯ ಪಡೆಯಬೇಕು.
ಮಾಜಿ ಕಸಾಪ ಅಧ್ಯಕ್ಷರಾದ ಧನಂಜಯಕುಮಾರ್, ಹರ್ತಿಕೋಟೆ ಮಹಾಸ್ವಾಮಿ, ಸಕ್ಕರ ರಂಗಸ್ವಾಮಿ, ಗೌರವ ಕರ್ಯದರ್ಶಿಗಳಾದ ಅಸ್ಗರ್ ಅಹಮ್ಮದ್ ಸ್ವಾಗತಿಸಿದರು. ಎಚ್,ಕೃಷ್ಣಮೂರ್ತಿ ವಂದಿಸಿದರು. ಮಾಜಿ ಪುರಸಭೆ ಸದಸ್ಯ ಅಬ್ಬಾಸ್, ಕೆ,ಎಂ ವಿದ್ಯಾಧರ ಮತ್ತು ಕಾಲೇಜಿನ ಸಿಬ್ಬಂದಿಗಳು ಹಾಜರಿದ್ದರು.ಕಾರ್ಯಕ್ರಮದ ನಿರೂಪಣೆಯನ್ನು ಶ್ರೀಮತಿ ಅಂಬಿಕಾ ನಡೆಸಿಕೊಟ್ಟರು.

 

 

[t4b-ticker]

You May Also Like

More From Author

+ There are no comments

Add yours