ಕಂದಾಯ ನೌಕರರ ಬಡಾವಣೆಯ ಖಾಲಿ‌ ಸೈಟ್ ಲ್ಲಿ ನೂರು‌ ಆಧಾರ ಕಾರ್ಡಗಳು ಪತ್ತೆ

 

 

 

 

ವರದಿ: ತಿಪ್ಪೇಶ್ 

ಚಳ್ಳಕೆರೆ: ನಗರದ ಕಂದಾಯ ನೌಕರರ ಬಡಾವಣೆಯಲ್ಲಿ ನೂರಕ್ಕೂ ಹೆಚ್ಚು ಆಧಾರ್ ಕಾರ್ಡ್ ಗಳು ಬೀಸಾಕಿರುವುದು ಬೆಳಕಿಗೆ ಬಂದಿದೆ., ಯಾತಕ್ಕಾಗಿ ಖಾಲಿ ಸೈಟುಗಳಿಗೆ ಆಧಾರ್ ಗಳು ಬೀಸಾಕಿದ್ದಾರೋ ಗೊತ್ತಿಲ್ಲ, ಒಟ್ಟು ನೂರು ಆಧಾರ್ ಕಾರ್ಡ್ ಗಳು ಪತ್ತೆಯಾಗಿವೆ.

ನಗರದ ಸೋಮಗುದ್ದು ಮಾರ್ಗದ ರಸ್ತೆಯ ಎಡಭಾಗದಲ್ಲಿರುವ ಕಂದಾಯ ನೌಕರರ ಬಡಾವಣೆಯಲ್ಲಿ ಆಧಾರ್ ಕಾರ್ಡ್ ಗಳ ಎಸೆದಿರುವುದು ಬೆಳಕಿಗೆ ಬಂದಿದ್ದು,
ಅಂಚೆ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಆಧಾರ್ ಕಾರ್ಡ್ ಗಳು ಜನರಿಗೆ ತಲುಪದೆ ಖಾಲಿ ಸೈಟುಗಳಿಗೆ ಎಸೆದಿದ್ದಾರೆ ಎಂದು ಆಧಾರ್ ಕಾರ್ಡ್ ತಲುಪದ ಸಾರ್ವಜನಿಕರು ಆರೋಪಿಸಿದ್ದಾರೆ.

 

 

 

ಆಧಾರ್ ಕಾರ್ಡ್ ಮಾಡಿಸಲು, ತಿದ್ದುಪಡಿ ಮಾಡಿಸಲು ಸಾರ್ವಜನಿಕರು ತಿಂಗಳು ಗಟ್ಟಲೆ ತಾ.ಕಚೇರಿಗೆ ಅಲೆದಾಡಿ ಆಧಾರ್ ಕಾರ್ಡ್ ಮಾಡಿಸಿರುತ್ತಾರೆ. ಒರಿಜನಲ್ ಆಧಾರ್ ಕಾರ್ಡ್ ಗಳನ್ನು ಸಾರ್ವಜನಿಕರಿಗೆ ತಲುಪಿಸದೆ ಖಾಲಿಸೈಟುಗಳಿಗೆ ಬೀಸಾಕಿರುವುದು ಆಧಾರ್ ಕಾರ್ಡ್ ದಾರಿರಿಗೆ ಬೇಸರ ತಂದಿದೆ…

ಒರಿಜಿನಲ್ ಆಧಾರ್ ಕಾರ್ಡ್ ಗಳು ಇದ್ದರೆ, ಕೆಲವು ಸೌಲಭ್ಯಗಳು ಪಡೆಯಬಹುದು, ಆಧಾರ್ ನಕಲು ಇದ್ದರೆ ಯಾವುದೇ ಕಚೇರಿಗಳಲ್ಲಿ ಕೆಲಸ ಕಾರ್ಯ ಗಳು ಮಾಡಿಕೊಡುವುದಿಲ್ಲ, ಇಂತಹ ಸ್ಥಿತಿಯಿದ್ದರೂ ಜನರಿಗೆ ಆಧಾರ್ ಕಾರ್ಡ್ ಗಳು ಪ್ರತಿಯೊಂದು ಕೆಲಸ ಕಾರ್ಯ ಗಳಿಗೆ ಆಧಾರ್ ಕಾರ್ಡ್ ಕಡ್ಡಾಯವಾಗಿದೆ. ಆದರೆ ನಗರದ ಕಂದಾಯ ನೌಕರರ ಬಡಾವಣೆಯಲ್ಲಿ ಒರಿಜನಲ್ ಆಧಾರ್ ಕಾರ್ಡ್ ಗಳನ್ನು ರಾಶಿ-ರಾಶಿ ಎಸೆದಿರುವುದು ಬೆಳಿಕಿಗೆ ಬಂದಿದೆ, ಎಂತಹವರು ಅಧಿಕಾರಿಗಳನ್ನು ಪ್ರಶ್ನೆ ಮಾಡುವಂತಿದೆ…!!!

[t4b-ticker]

You May Also Like

More From Author

+ There are no comments

Add yours