ಒಂದು ವಾರ ಒತ್ತುವರಿ ಜಮೀನು ತೆರವಿಗೆ ಡೆಡ್ ಲೈನ್,ಮಾಡದಿದ್ದರೆ ಕಾನೂನಿನ ಚಾಟಿ: ತಹಶೀಲ್ದಾರ್ ಎನ್.ರಘುಮೂರ್ತಿ.

 

 

 

 

ಚಳ್ಳಕೆರೆ: ಚಳ್ಳಕೆರೆ ತಾಲೂಕಿನಲ್ಲಿ  ಸರ್ಕಾರದ ಜಮೀನು ಒತ್ತುವರಿ ಕಾರ್ಯಕ್ಕೆ ತಹಶೀಲ್ದರ್ ಎನ್.ರಘುಮೂರ್ತಿ ಸಖತ್ ಫಾಸ್ಟ್ ವರ್ಕ್ ಮಾಡುತ್ತಿದ್ದು ಜಿಲ್ಲೆಯಲ್ಲಿ ವೇಗವಾಗಿ ಒತ್ತುವರಿ ತೆರವು ಮಾಡುತ್ತಿರುವ ಅಧಿಕಾರಿ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

 

 

ಹೌದು ಅಧಿಕಾರ ವಹಿಸಿಕೊಂಡಾಗಿನಿದ ಹಿಂದುಳಿದ ಜಿಲ್ಲೆಯಲ್ಲಿ ಅತಿ ಹಿಂದುಳಿದ ಪ್ರದೇಶವಾದ ಚಳ್ಳಕೆರೆ ಮತ್ತು ಮೊಳಕಾಲ್ಮುರು ತಾಲೂಕಿನಲ್ಲಿ ಸಾಕಷ್ಟು ಅರ್ಜಿಗಳು ಜಡತ್ವದಲ್ಲಿ ಇದ್ದವು ಇಂತಹ ಅರ್ಜಿಗೆ ಮುಕ್ತಿ ಕೊಡುವ ಜೊತೆಗೆ ಸರ್ಕಾರಿ ಜಮೀನು ಒತ್ತುವರಿ ಕಾರ್ಯ ಕಾಲಮಿತಿಯಲ್ಲಿ ಮಾಡುತ್ತಿದ್ದಾರೆ. ಇದು ಜನರಿಗೆ ಸಂತಸ ತಂದಿದೆ.   ಈ ವಿಚಾರವಾಗಿ ನ್ಯೂಸ್ 19 ಕನ್ನಡ ಜೊತೆ ಮಾತನಾಡಿದ ತಹಶೀಲ್ದರ್ ಅವರು ಸರ್ಕಾರಿ ಜಮೀನು ಯಾರೇ ಒತ್ತುವರಿ ಮಾಡಿರಲಿ ಅದನ್ನು ಅದು ಸರ್ಕಾರಕ್ಕೆ  ವಾಪಸ್  ಪಡೆಯುತ್ತೇವೆ. ಒಳ್ಳವರೆ ಸರ್ಕಾರಿ  ಜಮೀನು ಪಡೆದಿದ್ದರು ಅಂತವರ ವಿರುದ್ದ ಕ್ರಮ ಜರುಗಿಸಿ ಬಡವರಿಗೆ ನ್ಯಾಯ ಕೊಡಿಸುವುದೆ ನನ್ನ ಮೂಲ ಧ್ಯೇಯವಾಗಿದೆ. ಇದರ ಭಾಗವಾಗಿ ನಾಯಕನಹಟ್ಟಿ ಹೋಬಳಿ ಕೊರಡಿಹಳ್ಳಿ ಗ್ರಾಮದ ರಿಸನಂ-16, 17, 18 ಹಾಗೊ ಅಬ್ಬೇನಹಳ್ಳಿ ಗ್ರಾಮದ ರಿಸನಂ-19, 74 ರಲ್ಲಿ ಒಟ್ಟು 15 ಜನರು 60 ಎಕರೆ ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿದ್ದು ಇವರುಗಳು ಯಾವುದೇ ನಮೊನೆ 53 ಹಾಗೂ 57 ಅರ್ಜಿ ಸಲ್ಲಿಸದೇ ಇದ್ದು, ಒಂದು ವಾರದ ಕಾಲ ಅನಧಿಕೃತ ಒತ್ತುವರಿದಾರರಿಗೆ ಗಡುವು ನೀಡಿದ್ದು, ನಮೊನೆ 53, ನಮೊನೆ 57 ರ ಅರ್ಜಿ ಸಲ್ಲಿಸದೇ ಅನಧಿಕೃತ ಒತ್ತುವರಿಯಲ್ಲಿರುವ ಸಾರ್ವಜನಿಕರು ಕೂಡಲೇ ಸರ್ಕಾರಿ ಜಮೀನನ್ನು ತೆರವು ಮಾಡಬೇಕು ಈ ಬಗ್ಗೆ ಸರ್ಕಾರದ ಹಾಗೂ ಜಿಲ್ಲಾಧಿಕಾರಿಗಳ ನಿರ್ದೇಶನವಿದೆ. ಯಾರು ಒತ್ತುವರಿ ತೆರವು ಮಾಡುವುದಿಲ್ಲ ಅವರ ವಿರುದ್ದ ಮೊಕದ್ದಮೆ ದಾಖಲು ಮಾಡಲಾಗುವುದು ಹಾಗೂ ತೆರವುಗೊಳಿಸಲಾಗುವುದೆಂದು ಹೇಳಿದರು. ಒತ್ತುವರಿಯನ್ನು ಪರಿಶೀಲಿಸಿ, ತೆರವುಗೊಳಿಸಲಾಯಿತು.

ಈ ಸಂದರ್ಭದಲ್ಲಿ ಕಂದಾಯ ಹಾಗೂ ಸರ್ವೆ ಮತ್ತು ಪೋಲಿಸ್‌ ಇಲಾಖೆಯ ಅಧಿಕಾರಿಗಳಿದ್ದರು.

[t4b-ticker]

You May Also Like

More From Author

+ There are no comments

Add yours