ಒಂದು ವಾರದಲ್ಲಿ ನಗರಂಗೆರೆ ಹಳ್ಳದ ಜಮೀನು ತೆರವುಮಾಡದಿದ್ದರೆ ಕಾನೂನು ಕ್ರಮ: ತಹಶೀಲ್ದಾರ್ ಎನ್.ರಘುಮೂರ್ತಿ

 

 

 

 

ಚಳ್ಳಕೆರೆ : ತಾಲೂಕು ನಗರಂಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಲಕ್ಷ್ಮಿಪುರ ಗ್ರಾಮದ ಈ ಸರ್ವೇ ನಂಬರ್ 43 ರಲ್ಲಿ ಚಂದ್ರಾರೆಡ್ಡಿ ಬಿನ್ ಸಣ್ಣಪ್ಪ ಇವರು ಕಳೆದ 15 ವರ್ಷದಿಂದ ಸರ್ವೇ ನಂಬರ್ ನಲ್ಲಿ ಅದು ಹೋಗುವಂತಹ ಹ ಳ್ಳದ ಕರಾಬು ಜಮೀನನ್ನು ಒತ್ತುವರಿ ಮಾಡಿಕೊಂಡಿದ್ದು ಇದರಿಂದ ಗ್ರಾಮದಲ್ಲಿ ಉಂಟಾಗುವಂತೆ ನೈರ್ಮಲ್ಯದ ನೀರನ್ನು ಗ್ರಾಮದ ಹೊರಗಡೆ ಹೋಗಲು ಅಡ್ಡಿ ಉಂಟಾಗಿತ್ತು ಈ ಸಂಬಂಧ ಗ್ರಾಮಸ್ಥರು ಹಿಂದೆ ಹಲವಾರು ಬಾರಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಕಾರ್ಯನಿರ್ವಹಣಾಧಿಕಾರಿಗಳು ತಾಲೂಕು ಪಂಚಾಯಿತಿ ಮತ್ತು ಇನ್ನೂ ಅನೇಕ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದ್ದರು ಸದರಿ ಸದ ರಿ ವತ್ತು ದಾರದಂತ ಚಂದ್ರ ರೆಡ್ಡಿ ಅವರು ಒತ್ತುವರಿ ತೆರವು ಮಾಡದೆ ಇದ್ದು ಇದರಿಂದ ರೋಸಿ ಹೋದ ಪಂಚಾಯಿತಿಯ ಸದಸ್ಯರುಗಳು ತಹಶೀಲ್ದಾರ್  ಅವರನ್ನು  ಭೇಟಿ ಮಾಡಿ ಸಮಸ್ಯೆಯನ್ನು ಬಗೆಹರಿಸುವಂತೆ ಕೋರಿದ್ದು ಅದರಂತೆ ಇಂದು ತಹಶೀಲ್ದಾರ್ ರಘುಮೂರ್ತಿ ಅವರು ಪಂಚಾಯಿತಿಯ ಎಲ್ಲಾ ಸದಸ್ಯರುಗಳು ಅಧ್ಯಕ್ಷರೊಂದಿಗೆ ಸದರಿ ವಿವಾದದ ಸ್ಥಳವನ್ನು ಪರಿಶೀಲಿಸಿ ಮಾಡಿ ಸರ್ವೆ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳೊಂದಿಗೆ ಸ್ಥಳ ತನಿಖೆ ಮಾಡಲಾಯಿತು ಸ್ಥಳ ತನಿಖೆಯ ಸಮಯದಲ್ಲಿ ಬರಿ ಚಂದ್ರಾರೆಡ್ಡಿ ಅವರು 6ಗುಂಟೆ ಹಳ್ಳದ ಕರಾಬ್ ಅನ್ನು ಒತ್ತುವರಿ ಮಾಡಿಕೊಂಡಿದ್ದು ಈ ವತ್ತು ವರಿಯನ್ನ ಒಂದು ವಾರದೊಳಗೆ ತೆರವುಗೊಳಿಸುವಂತೆ ಸರಿ ಚಂದ್ರಾರೆಡ್ಡಿ ಅವರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿ ಒತ್ತುವರಿ ತೆರವುಗೊಳಿಸದಿದ್ದಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸುವುದಾಗಿ ಯೂ ಹಾಗೂ ಎಲ್ಲಾ ವ್ಯತ್ಯಯಕ್ಕೆ ಕಾರಣವಾಗಿರುವ ಎಲ್ಲಾ ಖರ್ಚುಗಳನ್ನು ಸಂಬಂಧಿಸಿದ ಒತ್ತುವರಿದಾರರಿಂದ ಭರಿಸುವುದಾಗಿ ತಿಳಿಸಿದರು ಹಾಗೆಯೇ ಸರ್ವೆ ನಂಬರ 14 ಎಕರೆ ಸರ್ಕಾರಿ ಸರ್ವೆ ನಂಬರ್ ನಲ್ಲಿ 11 ಎಕರೆ ಜಮೀನನ್ನು ಯಾವುದೇ ಪ್ರಾಧಿಕಾರದ ಅನುಮತಿ ಇಲ್ಲದೆ ಒತ್ತುವರಿ ಮಾಡಿಕೊಂಡು ಮನೆ ಇತ್ತಿಲು ನಿರ್ಮಿಸಿಕೊಂಡಿದ್ದು ಈ ಸರ್ವೇ ನಂಬರ್ ನ ಎಲ್ಲಾ ವಿಸ್ತೀರ್ಣವನ್ನು ವೈಜ್ಞಾನಿಕವಾಗಿ ಅಳತೆ ಮಾಡಿ ನಿಖರವಾದ ಒತ್ತುವರಿ ಪ್ರದೇಶದ ವಿವರವನ್ನು ಸಲ್ಲಿಸುವಂತೆ ತಾಲೂಕು ಸರ್ವೆ ರವರಿಗೆ ಸೂಚಿಸಲಾಯಿತು ಈ ಸಂದರ್ಭದಲ್ಲಿ ನಗರಂಗೆರೆ ಪಂಚಾಯಿತಿ ಅಧ್ಯಕ್ಷ ಪಾತ ಲಿಂಗಪ್ಪ ಪಿಡಿಓ ರಾಮಚಂದ್ರಪ್ಪ ಸದಸ್ಯರಾದಂತಹ ಓಬಣ್ಣ ಕುಮಾರಸ್ವಾಮಿ ಕರಿಯಪ್ಪ ನಗರಂಗೆರೆ ಓಬಣ್ಣ ರಾಜಸ್ವನಿರೀಕ್ಷಕ ಲಿಂಗೇಗೌಡ ಸರ್ವೆಯರ್ ಪ್ರಸನ್ನಕುಮಾರ್ ಮುಂತಾದವರಿದ್ದರು

 

 

[t4b-ticker]

You May Also Like

More From Author

+ There are no comments

Add yours