ಒಂದು ಕೋಟಿ ವೆಚ್ಚದಲ್ಲಿ ಮುಕ್ತಿನಾಥೇಶ್ವರ ರುದ್ರಭೂಮಿ ರಸ್ತೆ ಅಭಿವೃದ್ಧಿ: ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ

 

 

 

 

ಚಿತ್ರದುರ್ಗ: ಒಂದು ಕೋಟಿ ಹಣದಲ್ಲಿ ಮುಕ್ತಿನಾಥೇಶ್ವರ ರುದ್ರಭೂಮಿ ರಸ್ತೆ ಅಭಿವೃದ್ಧಿ ಮಾಡಲಾಗುವುದು ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಭರವಸೆ ನೀಡಿದರು.
ನಗರದ ಜೋಗಿಮಟ್ಟಿ ರಸ್ತೆಯಲ್ಲಿ  ಶೌಚಾಲಯ. ಚಿತ್ರದುರ್ಗ ನೂತನ ಮುಕ್ತಿನಾಥೇಶ್ವರ ದೇವಾಲಯ ಲೋಕಾರ್ಪಣೆ ಮತ್ತು ನೂತನ ಶೌಚಲಯ ಮತ್ತು ಸ್ನಾನ‌ಗೃಹ ಕೊಠಡಿಗಳನ್ನು ಉದ್ಘಾಟಿಸಿ ಮಾತನಾಡಿದರು.
ಎಲ್ಲಾ ಕಡೆಗಳಲ್ಲಿ  ಸಹ ರುದ್ರಭೂಮಿ ಅವಶ್ಯಕವಾಗಿ ಬೇಕಾಗಿದೆ. ಹಲವರು ಅಂತ್ಯಸಾಂಸ್ಕರ ಮುಗಿಸಿ ಮನೆಗಳಿಗೆ ಹೋಗಿ ಮನೆಯ ಹೊರಗಡೆ ಸ್ನಾನ ಮಾಡುವ ಪದ್ದತಿ ಇದೆ. ಕೆಲವು ಕಡೆಗಳಲ್ಲಿ  ಇಲ್ಲದೆ ಇರಬಹುದು.ಆದರೆ ಜೋಗಿಮುಟ್ಟಿ ರಸ್ತೆಯಲ್ಲಿ  ರುದ್ರಭೂಮಿಯನ್ನು ಹೈಟೆಕ್ ರುದ್ರಭೂಮಿಯಂತೆ ಮಾಡಿದ್ದಾರೆ. ಸ್ಮಶಾನ ಎಂದ ಕೂಡಲೇ ಒಂದು ರೀತಿಯಲ್ಲಿ ಭಯದ ವಾತವರಣದಂತೆ ಬ್ರಾಸವಾಗುತ್ತದೆ. ಆದರೆ ಇಲ್ಲಿ ದೇವಸ್ಥಾನ , ಸ್ನಾನಗೃಹಗಳು , ಗಿಡ, ಮರ ಉತ್ತಮ ವಾತವರಣ ಎಲ್ಲಾವನ್ನು ನೋಡಿದರೆ ಇದು ರುದ್ರಭೂಮಿ ಎನ್ನಲು ಸಾಧ್ಯವಿಲ್ಲ ಎಂದು ವರ್ಣಿಸಿದರು.
ನಗರದ ನಾನಾ ಭಾಗಗಳಿಂದ ಮುಕ್ತಿದಾಮಕ್ಕೆ ಬರುತ್ತಾರೆ. ಇದಕ್ಕೆ ಉತ್ತಮ ರಸ್ತೆ ಇದ್ದರೆ ಉತ್ತಮ ಎಂಬುದು‌ ಜನರ ಮನವಿ ಮಾಡಿದ್ದು ಒಂದು ಕೋಟಿ ಹಣ ನೀಡುತ್ತೇನೆ. ಕಡಿಮೆ ಬಂದರೆ ನೋಡೋಣ ಎಂದರು. ಈ ಮೊದಲು ಸಹ ಬೊರವೆಲ್ ನೀರಿನ ಟ್ಯಾಂಕ್ ನಿರ್ಮಾಣ ಮಾಡಿದ್ದೆ. ಈ ಭಾಗದ ಜನರು ಮುಕ್ತಿನಾಥೇಶ್ವರ ದೇವಾಲಯ ಮಾಡಿದ್ದು  ಸ್ಮಶಾನ ಅಂದವಾಗಿ ಕಾಣುತ್ತಿದೆ. ಗಿಡ,ಮರ, ಕುಳಿತುಕೊಳ್ಳಲು ಬೆಂಚ್ ಸಹ ಹಾಕಿರುವುದು ದೇವಾಲಯ ಆವರಣ ಮತ್ತಷ್ಟು ಮೆರಗು ಬಂದಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಉಪಾಧ್ಯಕ್ಷ ರಾಧಮ್ಮ, ನಗರಸಭೆ ಸದಸ್ಯ ವಿರೇಶ್, ಪರಮೇಶ್, ಬಿಜೆಪಿ ಜಿಲ್ಲಾಧ್ಯಕ್ಷ ಮುರುಳಿ,ಮಾಜಿ‌ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಬದ್ರಿನಾಥ್ ಮತ್ತು ಮುಖಂಡರು ಹಾಜರಿದ್ದರು.
[t4b-ticker]

You May Also Like

More From Author

+ There are no comments

Add yours