ಐತಿಹಾಸಿಕ ಮುರುಘಾ ಮಠಕ್ಕೆ ಉತ್ತರಾಧಿಕಾರಿಯಾಗಿ ಬಸವಾದಿತ್ಯ ಆಯ್ಕೆ

 

 

 

 

ಚಿತ್ರದುರ್ಗ:‌ಕೋಟೆ ನಾಡು ಚಿತ್ರದುರ್ಗದ ಮಠಗಳಲ್ಲಿ ಒಂದಾದ  ಐತಿಹಾಸಿಕ ಹಿನ್ನಲೆ ಹೊಂದಿರುವ  ಮುರುಘಾ ಮಠಕ್ಕೆ ಉತ್ತರಾಧಿಕಾರಿಯಾಗಿ ಮುರುಘಾ ಮಠದಲ್ಲೇ ಅಧ್ಯಯನ ಮಾಡುತ್ತಿದ್ದ ಬಸವಾದಿತ್ಯ ಅವರನ್ನು ಆಯ್ಕೆ ಮಾಡಲಾಗಿದೆ.

ಇಂದು  ಬೆಳಿಗ್ಗೆ ಮುರುಘಾ ಮಠದ ಶಿರಸಿಂಗಿ ಮಹಾಲಿಂಗ ಸ್ವಾಮಿ ಸಭಾಂಗಣದಲ್ಲಿ ನಡೆದ ಶರಣ ಸಭೆಯಲ್ಲಿ ಮಹತ್ವದ  ನಿರ್ಧಾರ ಮಾಡಿದ್ದಾರೆ.

 

 

ಇದನ್ನು ಓದಿ: ಸಾಮಾಜಿಕ ಜಾಲತಾಣದಲ್ಲಿ ಶ್ರೀ ಅಹೋಬಲ ಟಿವಿಎಸ್ ಕಂಪನಿಗೆ ನಂಬರ್ ಒನ್ ಸ್ಥಾನ ನೀಡಿದ ಗ್ರಾಹಕರಿಗೆ ಸಲಾಂ; ಮಾಲೀಕ ಅರುಣ್

ಉತ್ತರಾಧಿಕಾರಿಯಾದ ಶ್ರೀಗಳು ಪೂರ್ವಾಶ್ರಮದಲ್ಲಿ ಚಿತ್ರದುರ್ಗ ತಾಲೂಕಿನ ಹುಲ್ಲೂರು ಗ್ರಾಮದ ಚಂದ್ರಕಲಾ ಶಿವಮೂರ್ತಯ್ಯ ದಂಪತಿಗಳ ಪುತ್ರನಾದ ಬಸವಾದಿತ್ಯ ಎಂಬುದು ತಿಳಿದಿದೆ.

ಬಸವಣ್ಣನವರು ತಮ್ಮ  ವಚನಗಳಲ್ಲಿ  ಹೇಳುವಂತೆ  ಸಂಸಾರವೆಂಬುದು ಗಾಳಿಗಿಟ್ಟ ದೀಪ. ಅದೇ ರೀತಿ ಮಾನವನ ಬದುಕು ಅಸ್ಥಿರವಾಗಿರುತ್ತದೆ. ಬೇರೆಯವರು ಅಪಘಾತ, ಹೃದಯಾಘಾತ ಅಥವಾ ಇನ್ನಿತರೆ ಅವಘಡಗಳಿಂದ ಸಾವು ಅನುಭವಿಸಿದರೆ. ಮನೆಗಳಲ್ಲಿ ಇತರರು ಜವಾಬ್ದಾರಿ ತೆಗೆದುಕೊಳ್ಳುತ್ತಾರೆ. ಅದೇ ರೀತಿ ನೂರಾರು ಸಂಘಸಂಸ್ಥೆಗಳು, ಶಾಖಾ ಮಠಗಳು, ಸಂಘಟನೆಗಳು ಇರುವ ಮಠದಲ್ಲಿ ಇಂತಹ ಶೂನ್ಯ ನಿರ್ಮಾಣ ಆಗಬಾರದು. ಶೂನ್ಯವನ್ನು ಭರ್ತಿ ಮಾಡುವ ಸಲುವಾಗಿ ಗರಗುರು ಚರಮೂರ್ತಿಗಳು, ಸಮಾಜದ ಮುಖಂಡರ ಸಮ್ಮುಖದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಮುರುಘಾ ಶರಣರು ತಿಳಿಸಿದರು.

[t4b-ticker]

You May Also Like

More From Author

+ There are no comments

Add yours