ಎಲ್ಲಾ ಜನಾಂಗದವರಿಗೆ  ಸೂರು ಕಲ್ಪಿಸಲು ಕ್ರಮ:ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ

 

 

 

 

ಚಿತ್ರದುರ್ಗ:.29: ಎಲ್ಲಾ ಜನಾಂಗದವರಿಗೆ  ಹಂತ ಹಂತವಾಗಿ ಸೂರು ಕಲ್ಪಿಸುವ ಕೆಲಸ ಮಾಡಲಾಗುತ್ತಿದ್ದು ರೋಸ್ಟರ್ ಪ್ರಕಾರ ಫಲಾನುಭವಿಗಳನ್ನು ಆಯ್ಕೆ  ಮಾಡಿ ಎಲ್ಲಾರಿಗೂ ನ್ಯಾಯ ಒದಗಿಸಲಾಗುತ್ತದೆ ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ನಗರ ಆಶ್ರಯ ಹಾಗೂ ಮತ್ಸ್ಯಾಶ್ರಯ ಯೋಜನೆ ಅಡಿಯಲ್ಲಿ ಆಯ್ಕೆಯಾದ ಪಾಲಾನುಭವಿಗಳಿಗೆ ಮನೆಗಳ ಆದೇಶ ಪತ್ರವನ್ನು ವಿತರಿಸಿ ಮಾತನಾಡಿದರು.
2021-2022  ನೇ ಸಾಲಿನ ನಗರ ಆಶ್ರಯ ಯೋಜನೆ ಅಡಿಯಲ್ಲಿ ವಾಜಪೇಯಿ ಹಾಗೂ ಅಂಬೇಡ್ಕರ್ ವಸತಿಗಳನ್ನು ನಗರವಾಸಿಗಳಿಗೆ ನೀಡಲಾಗುವುದು.
ಒಟ್ಟು 100 ಮನೆಗಳಿಗೆ 108  ಅರ್ಜಿ ಬಂದಿದ್ದು ಅದರಲ್ಲಿ 100 ಮನೆಗಳನ್ನು ಅರ್ಹ ಫಲಾನುಭಿಗಳಿಗೆ ನೀಡಲಾಗಿದೆ. ಈ ಯೋಜನೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ  ಮನೆ ನಿರ್ಮಾಣದ  ಮೊತ್ತ 3,50,000 ರೂ ಹಾಗೂ ಒಬಿಸಿ ಯವರಿಗೆ 2,70,000 ರೂಗಳ ಮನೆ ನಿರ್ಮಾಣದ ಆದೇಶ ಪತ್ರಗಳನ್ನು ಫಲಾನುಭವಿಗಳಿಗೆ ನೀಡಿದ್ದೇನೆ ಎಂದರು.
2018-19 ನೇ ಸಾಲಿನ ಮೀನುಗಾರಿಕೆ ಇಲಾಖೆಯ ಮತ್ಸ್ಯಾಶ್ರಯ ಯೋಜನೆಯಲ್ಲಿ ಒಟ್ಟು 30 ಮನೆಗಳಿಗೆ  35 ಅರ್ಜಿಗಳು  ಬಂದಿದ್ದು ಅದರಲ್ಲಿ 29 ಅರ್ಹ ಫಲಾನುಭವಿಗಳಿಗೆ ಮನೆಗಳ ಮಂಜೂರಾತಿ ಆದೇಶ ಪತ್ರವನ್ನು ನೀಡಲಾಯಿತು.
ಎಸ್ಸಿ,ಎಸ್ಟಿ ಜನಾಂಗದರಿಗೆ ಮನೆ ನಿರ್ಮಾಣದ ಮೊತ್ತ 1,75,000  ಹಾಗೂ ಒಬಿಸಿ ಇತರೆ ವರ್ಗದ ಪಾಲಾನುಭವಿಗಳಿಗೆ  1,20,000 ರೂಗಳ ಮನೆ ನಿರ್ಮಾಣದ ಆದೇಶ ಪತ್ರಗಳನ್ನು ಫಲಾನುಭವಿಗಳಿಗೆ ನೀಡಲಾತ್ತಿದ್ದು ಫಲಾನುಭವಿಗಳು  ಸದ್ಬಳಕೆ ಮಾಡಿಕೊಳ್ಳಬೇಕಿದೆ.
ಸರ್ಕಾರದ   ನೀಡುವ ಹಣದ ಜೊತೆಗೆ ಒಂದಿಷ್ಟು ಹೆಚ್ಚಿನ ಹಣ ಹಾಕಿದರೆ ಉತ್ತಮ ಮನೆ  ನಿರ್ಮಾಣ ಮಾಡಿಕೊಳ್ಖಬಹುದು. ಎಲ್ಲಾರಿಗೂ ಮನೆಗಳ ಅವಶ್ಯಕತೆ ಇದೆ. ನಗರದಲ್ಲಿ ಮನೆಗಾಗಿ 15 ರಿಂದ 16 ಸಾವಿರ ಅರ್ಜಿಗಳು ನಗರಸಭೆಗೆ ಬಂದಿವೆ. ಆದರೆ ಮನೆ ಇದ್ದವರು ಮತ್ತೆ ಅರ್ಜಿ ಹಾಕಿದ್ದಾರೆ. ಮನೆ ಇದ್ದವರು ಯಾರು ಅಹ ಅರ್ಜಿ ಹಾಕಬಾರದು. ಅವಶ್ಯಕತೆಗಿಂತ ಹೆಚ್ಚು ಮನೆಗಳು ಏಕೆ ಎಂದು ಪ್ರಶ್ನಿಸಿದರು. ಅರ್ಹ ಫಲಾನುಭವಿಗಳಿಗೆ ಸೌಲಭ್ಯ ಸಿಗಬೇಕು. ಅರ್ಜಿಗಳನ್ನು ಒಂದಲ್ಲ ಎರಡು ಬಾರಿ ಪರಿಶೀಲಿಸಿ ಅಂತಿಮ ಪಟ್ಟಿ ಮಾಡಲಾಗುತ್ತದೆ ಎಂದು ತಿಳಿಸಿದರು.  ಈ ಸಂದರ್ಭದಲ್ಲಿ  ಜಿಲ್ಲಾ  ಮೀನುಗಾರಿ ಇಲಾಖೆ ಉಪ ನಿರ್ದೇಶಕ ಅಣ್ಣಪ್ಪ ಸ್ವಾಮಿ  ಇದ್ದರು.
[t4b-ticker]

You May Also Like

More From Author

+ There are no comments

Add yours