ಎಲ್ಲಾರಂತೆ ಸಮಾನವಾಗಿ ವಿಕಲಚೇತನರು ಬದುಕಬೇಕು: ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ

 

 

 

 

ಯಂತ್ರಚಾಲಿತ ದ್ವಿಚಕ್ರ ವಾಹನ ವಿತರಣೆ: ನಗರದ ನಗರಸಭೆ ಆವರಣದಲ್ಲಿ ನಗರಸಭೆ ವತಿಯಿಂದ 2021-22 ಸಾಲಿನ 5% ಅನುದಾನದಲ್ಲಿ 14 ಜನ ಅಂಗವಿಕಲರಿಗೆ ಯಂತ್ರಚಾಲಿತ ದ್ವಿಚಕ್ರ (ರೆಟ್ರೋಫಿಟ್ ಮೆಂಟ್) ಸಹಿತ ವಾಹನ ವಿತರಣೆ ಮಾಡಿ ಮಾತನಾಡಿ ಜಿಲ್ಲಾ ಕೇಂದ್ರ ಆಗಿರುವುದರಿಂದ ಅಂಗವಿಕಲರಿಗೆ ಹೆಚ್ಚು ತ್ರಿಚಕ್ರ ವಾಹನಗಳು ಬೇಕಾಗುತ್ತವೆ. ಸರ್ಕಾರ ಅನುದಾನ ಬಿಟ್ಟು ಜಿಲ್ಲಾ ಅಂಗವಿಕಲರ ಕಲ್ಯಾಣ ಇಲಾಖೆಯಿಂದ ಡಿಎಂಎಫ್ ಅನುದಾನದಲ್ಲಿ 75 ರಿಂದ 80 ವಾಹನ 15 ದಿನದೊಳಗೆ ನೀಡಲಾಗುತ್ತಿದೆ. ಅಂಗವಿಕಲರು ಸಹ ತಮ್ಮ ವ್ಯಾಪರ, ವ್ಯವಹಾರ ಮೂಲಕ ಬದುಕು ಕಟ್ಟಿಕೊಳ್ಳಲು ದ್ವಿಚಕ್ರ ವಾಹನ ವಿತರಣೆ ಮಾಡುತ್ತಿದ್ದು ಮುಂದಿನ ಇನ್ನು 300ರಿಂದ 400 ವಾಹನಗಳು ಬೇಕಿದ್ದು ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ವ್ಯವಸ್ಥೆ ಮಾಡಲಾಗುತ್ತದೆ. ಅಂಗವಿಕಲರಿಗೆ ನೀಡಿದ ವಾಹನಗಳನ್ನು ರೆಟ್ರೋಫಿಟ್ ಮೆಂಟ್ ಸಹಿತ ವಾಹನ ನೀಡುತ್ತಿದ್ದು ಕೇಲವರು ರಕ್ಷಣೆಗಾಗಿ ಹಾಕಿರುವ ಪಕ್ಕದ ವಿಲ್ ತೆಗೆಯುತ್ತಿದ್ದು ಅಂತವರು ಕಣ್ಣಿಗೆ ಬಿದ್ದರೆ ವಾಹನ ವಾಪಸ್ಸು ಪಡೆಯಲಾಗುವುದು ಎಂದು ಅಂಗವಿಕಲರಿಗೆ ಎಚ್ಚರಿಕೆ ನೀಡಿದರು. ವಾಹನಗಳನ್ನು ಸದುಪಯೋಗ ಪಡೆದುಕೊಳ್ಳಿ ಎಂದು ತಿಳಿಸಿದರು. ನಗರಸಭೆ ಪೌರಯುಕ್ತ ಹನುಮಂತರಾಜು, ನಗರಸಭೆ ಅಧ್ಯಕ್ಷೆ ತಿಪ್ಪಮ್ಮ ವೆಂಕಟೇಶ್, ಉಪಾಧ್ಯಕ್ಷೆ ಅನುರಾಧ ರವಿಕುಮಾರ್, ವೆಂಕಟೇಶ್, ಮಲ್ಲಿಕಾರ್ಜುನ್, ತಾರಕೇಶ್ವರಿ, ಪರಮೇಶ್ ,ಸುರೇಶ್, ಶ್ರೀನಿವಾಸ್, ಬಾಸ್ಕರ್ ಹಾಜರಿದ್ದರು.

 

 

ಸಿ.ಸಿ.ರಸ್ತೆ ಕಾಮಗಾರಿಗೆ ಚಾಲನೆ: ನಗರದ ಸಂಪಿಗೆ ಸಿದ್ದೇಶ್ವರ ಶಾಲೆ ಹಿಂಭಾಗದ ಬಡಾವಣೆಯಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ನಿಗಮದ 50 ಲಕ್ಷ ವೆಚ್ಚ ಅನುದಾನದಲ್ಲಿ ಸಿ.ಸಿ. ರಸ್ತೆ ಕಾಮಗಾರಿಗೆ ಚಾಲನೆ ನೀಡಿದರು.ಈ ವೇಳೆಯಲ್ಲಿ ನಗರಸಭೆ ಸದಸ್ಯ ಮಲ್ಲಿಕಾರ್ಜುನ್ ಮತ್ತು ಸ್ಥಳೀಯರು ಹಾಜರಿದ್ದರು‌.

[t4b-ticker]

You May Also Like

More From Author

+ There are no comments

Add yours