ಎರಡು ಕೋಟಿ ವೆಚ್ಚದಲ್ಲಿ ಲಕ್ಷ್ಮಿ ಸಾಗರ ಕೆರೆ ಅಭಿವೃದ್ದಿ: ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ

 

 

 

 

ಚಿತ್ರದುರ್ಗ: ಎರಡು ಕೋಟಿ ವೆಚ್ಚದಲ್ಲಿ ಲಕ್ಷ್ಮಿಸಾಗರ ಕೆರೆ ಕಟ್ಟೆ ಭದ್ರಗೊಳಿಸಿ ಕೆರೆ ಸ್ವಚ್ಚಗೊಳಿಸುವ ಮೂಲಕ ಅಂತರ್ಜಲ ವೃದ್ಧಿಗೆ ಒತ್ತು ನೀಡಲಾಗುವುದು ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದರು.

ತಾಲೂಕಿನ ಲಕ್ಷ್ಮಿಸಾಗರ, ಕಿಟ್ಟದಹಟ್ಟಿ,‌ ಒಡ್ಡರಸಿದ್ದವ್ವನಹಳ್ಳಿ ,ಚಿಕ್ಕಲ್ಲಘಟ್ಟ, ದೊಡ್ಡಲ್ಲಘಟ್ಟ ಗ್ರಾಮದಲ್ಲಿ
ನಮ್ಮ ಗ್ರಾಮ ನಮ್ಮ ರಸ್ತೆ ಮತ್ತು ಪಿಎಂಜಿಎಸ್ ವೈ ಯೋಜನೆಯಲ್ಲಿ ನಿರ್ಮಿಸುತ್ತಿರುವ ರಸ್ತೆಗಳಿಗೆ ಚಾಲನೆ ನೀಡಿ ಮಾತನಾಡಿದರು.

 

 

ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ಧಿ ಮೋದಿ ಅವರ ಕನಸಾಗಿದೆ.ರೈತರಿಗೆ ಅನುಕೂಲಾವಗುವ ದೃಷ್ಟಿಯಿಂದ ದೇಶದ ಪ್ರತಿ ವಿಧಾನ ಸಭಾ ಕ್ಷೇತ್ರಕ್ಕೆ ಪ್ರಧಾನಿ ಮೋದಿ ಅವರು 30 ಕಿಲೋ ಮೀಟರ್ ರಸ್ತೆ ಅಭಿವೃದ್ಧಿಗೆ ಕೇಂದ್ರ ಸರ್ಕಾರದಿಂದ ಅನುದಾನ ನೀಡಿದ್ದಾರೆ.ಒಟ್ಟು 11 ಕೋಟಿ‌ ವೆಚ್ಚದಲ್ಲಿ ಒಡ್ಡಾರಸಿದ್ದವ್ವನಹಳ್ಳಿ, ಕೋಣನೂರು ಭೀಮಸಮುದ್ರ ತೋರೆಬೆಲು ರಸ್ತೆ, ನಿಲಯ್ಯನ ಹಟ್ಟಿಯಿಂದ ದ್ಯಾಮನಹಳ್ಳಿ, ದೊಡ್ಡಲಘಟ್ಟದಿಂದ ಸಿರಿಗೆರೆಗೆ ರಸ್ತೆಗಳನ್ನು ಪಿಎಂಜಿಎಸ್ ವೈ ಅನುದಾನದಲ್ಲಿ ಮಾಡಲಾಗುತ್ತಿದೆ. ಲಕ್ಷ್ಮಿಸಾಗರ, ಕಿಟ್ಟದ ಹಟ್ಟಿ ಯಲ್ಲಿ‌ನಮ್ಮ ಗ್ರಾಮ ನಮ್ಮ ರಸ್ತೆಯಲ್ಲಿ 25 ಲಕ್ಷ ವೆಚ್ಚದಲ್ಲಿ ರಸ್ತೆ ಮಾಡಲಾಗುತ್ತಿದೆ‌. ಲಕ್ಷ್ಮಿಸಾಗರ ಗ್ರಾಮದ ಸಿ.ಸಿ.ರಸ್ತೆ 40 ಲಕ್ಷ ಹಣ ನೀಡಿದ್ದು ಸ್ವಲ್ಪ ದಿನದಲ್ಲಿ ಕೆಲಸ ಪ್ರಾರಂಭ ಮಾಡಲಾಗುತ್ತದೆ ಎಂದರು.

ಲಕ್ಷ್ಮಿ ಸಾಗರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸುಮಾರು 15 ಕೋಟಿಗಿಂತ ಹೆಚ್ಚು ವೆಚ್ಚದಲ್ಲಿ ಚಕ್ ಡ್ಯಾಂ ನಿರ್ಮಾಣ‌ ಮಾಡಲಾಗಿದೆ. ಈಗ ರೈತರು ಲಕ್ಷ್ಮಿಸಾಗರ ಕೆರೆ ಅಭಿವೃದ್ಧಿಗೆ ಹಣ ಕೇಳಿದ್ದು 2 ಕೋಟಿ‌ ಹಣ ಕೆರೆಯ ಏರಿ ಅಭಿವೃದ್ಧಿ, ಜಂಗಲ್ ಕಟ್ಟಿಂಗ್, ಕೋಡಿ ಭದ್ರಗೊಳಿಸುವಿಕೆ‌ಗೆ ಹಣ ನೀಡಿದ್ದು ಕಡಿಮೆ ಬಂದರೆ ಮತ್ತೆ ಹಣ ನೀಡುತ್ತೆನೆ. ಲಕ್ಷ್ಮಿಸಾಗರ ಕೆರೆ ದೊಡ್ಡಕೆರೆಯಾಗಿದ್ದು ಈ ಕೆರೆಯ ಅಭಿವೃದ್ಧಿಯಿಂದ ಸಾವಿರಾರು ಬೋರವೆಲ್ ಗೆ ಅನುಕೂಲವಾಗುತ್ತದೆ ಜೊತೆಗೆ ಸಿರಿಗೆರೆ ಶ್ರೀಳು ಈ ಕೆರೆ ನೀರುಣಿಸುವ ಕೆಲಸ ಮಾಡುತ್ತಿದ್ದು ನೀರು ಹರಿಯುವ ವೇಳೆ ಕೆರೆ ಸಂಪೂರ್ಣ ಭದ್ರವಾಗಿರಬೇಕು ಎಂಬ ದೃಷ್ಟಿಯಿಂದ ಹಣ ನೀಡಿದ್ದು ಊರಿನವರು ಎಲ್ಲಾ ಮುಂದೆ ಇದ್ದು ಎಲ್ಲಾ ಕೆಲಸಗಳನ್ನು ಮಾಡಿಸಿಕೊಳ್ಳಿ ಎಂದರು
ಲಕ್ಷ್ಮಿಸಾಗರದ ದೇವಸ್ಥಾನಕ್ಕೆ 5 ಲಕ್ಷ ಹಣ ನೀಡಿದ್ದೇನೆ. ಕಿಟ್ಟದ ಹಟ್ಟಿ ಜನರು ಬಸ್ ಸೌಲಭ್ಯ ಕೇಳಿದ್ದು ಈ ಭಾಗದ ಸಾರ್ವಜನಿಕರು ಬಂದರೆ ಮಾರ್ಗ ತಿಳಿಸಿದರೆ ಸರ್ವೆ ಮಾಡಿಸಿ ಬಸ್ ಸೌಲಭ್ಯ ಕಲ್ಪಿಸಲಾಗುವುದು ಎಂದು ತಿಳಿಸಿದರು.
ಗ್ರಾಮ ಪಂಚಾಯತಿ ಸದಸ್ಯರಾದ ಪಾಡುರಂಗಪ್ಪ, ಶೋಭ, ಶಿವಮ್ಮ, ವಸಂತ ಕುಮಾರ್ ,ರಾಮಾಂಜನೇಯ, ಅಶೋಕ್ ಕುಮಾರ್, ಧನಂಜಯ,ಕವಿತ ಮತ್ತು ಪಿಎಂಜಿಎಸ್ ವೈ ಯೋಜನ ಅಭಿಯಂತರ ನಾಗರಾಜ್ ಇದ್ದರು.

[t4b-ticker]

You May Also Like

More From Author

+ There are no comments

Add yours