ಇನ್ನೆಷ್ಟು ದಿನ ವಾಲ್ಮೀಕಿ ಶ್ರೀ ಆಹೋರಾತ್ರಿ ಧರಣಿ ಮಾಡಬೇಕು ಸಿಎಂ ಸಾಹೇಬರೆ, 7.5 ಮೀಸಲಾತಿ ನೀಡಲು ಸಮಾಜದ ಮೇಲೆ‌ ಸಿಟ್ಟೇಕೆ ಸರ್ಕಾರಕ್ಕೆ!

 

 

 

 

ಬೆಂಗಳೂರು: ರಾಜ್ಯದಲ್ಲಿ ವಾಲ್ಮೀಕಿ ಸ್ವಾಮೀಜಿಯವರು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ  ಎಸ್ಟಿ ಮೀಸಲಾತಿಗಾಗಿ ಆಹೋರಾತ್ರಿ ಧರಣಿ ಕುಳಿತ್ತಿದ್ದರು ಸಹ ವಾಲ್ಮೀಕಿ ಶ್ರೀಗಳ ಧರಣಿಗೆ ಪರಿಹಾರ ನೀಡುವ ಕೆಲಸ ಸರ್ಕಾರದಿಂದ ಸರಿಯಾದ ರೀತಿಯಲ್ಲಿ ಆಗುತ್ತಿಲ್ಲ ಎಂಬ ಮಾತು ರಾಜ್ಯ ವಾಲ್ಮೀಕಿ ಸಮಾಜದಲ್ಲಿ ಕೇಳಿ ಬರುತ್ತಿದೆ.

 

 

ಹೌದು ಪಾದಯಾತ್ರೆ ಸಂದರ್ಭದಲ್ಲಿ ಸಹ ಬೆಂಗಳೂರು ತಲುಪಿದ ನಂತರ  ನಾಗಮೋಹನ್ ದಾಸ್ ನೇತೃತ್ವದ ಸಮಿತಿ ರಚಿಸಿ  ವರದಿ ಬಂದ ತಕ್ಷಣ ಮೀಸಲಾತಿ ಹೆಚ್ಚಿಸುವ  ಭರವಸೆ ನೀಡಿದ ಕುಮಾರಸ್ವಾಮಿ ‌ನೇತೃತ್ವದ ಸಮ್ಮಿಶ್ರ ಸರ್ಕಾರ ಒಂದು ಸಮಿತಿ ಮಾಡಿ ನ್ಯಾಯ ಕೊಡಿಸುತ್ತೇವೆ ಎಂಬ ಭರವಸೆಯನ್ನು ಅಂದಿನ‌ ಕಾಂಗ್ರೆಸ್ – ಜೆಡಿಎಸ್  ಸಚಿವರಾಗಿದ್ದ ಪ್ರಿಯಾಂಕ್ ಖರ್ಗೆ, ದಿನೇಶ್ ಗುಂಡೂರಾವ್, ಸತೀಶ್ ಜಾರಕಿಹೊಳಿ, ರಘುಮೂರ್ತಿ, ನಾಗೇಂದ್ರ ಹಾದಿಯಾಗಿ ಎಲ್ಲಾ ಶಾಸಕರು ಮೀಸಲಾತಿ  ಅಭಯ ನೀಡಿ‌ ಹೋಗಿದ್ದರು. ಆದರೆ ಸಮಿತಿ ಮಾಡಿದ ಕೇಲವು ದಿನಗಳಲ್ಲಿ ಸಮ್ಮಿಶ್ರ ಸರ್ಕಾರ ಪತನವಾಯಿತು. ಅಂದು ವಿರೋಧ ಪಕ್ಷದಲ್ಲಿದ್ದ ವಾಲ್ಮೀಕಿ ಸಮುದಾಯದ ಪ್ರಭಾವಿ ಮುಂಗಡ ಬಿ.ಶ್ರೀರಾಮುಲು ತುಂಬಿದ ಸಭೆಯಲ್ಲಿ ವಾಲ್ಮೀಕಿ ‌ಶ್ರೀಗಳ ಮುಂದೆ ಬಿಜೆಪಿ ಸರ್ಕಾರ ಬಂದರೆ 24 ಗಂಟೆಯಲ್ಲಿ  ವಾಲ್ಮೀಕಿ ಸಮಾಜಕ್ಕೆ 7.5 % ಮೀಸಲಾತಿ ಕೊಡಿಸುತ್ತೇನೆ. ಕೊಟ್ಟ ಮಾತು ತಪ್ಪಲ್ಲ ಎಂದಿದ್ದರು. ಮಾಜಿ ಸಚಿವ ಶಾಸಕ ರಾಜುಗೌಡ ಸಹ ಯಡಿಯೂರಪ್ಪ ಸಾಹೇಬರು ಮುಖ್ಯಮಂತ್ರಿ ಆದರೆ ನಮಗೆ ಮೀಸಲಾತಿಯನ್ನು ಕೂಡಲೇ ಜಾರಿಗೊಳಿಸಲು ಒತ್ತಡ ಏರುತ್ತೇನೆ ಎಂದು ಘರ್ಜಿಸಿದ್ದರು.
ಅದೇನೋ ಒಳಜಗಳದಿಂದ ಸಮ್ಮಿಶ್ರ ಸರ್ಕಾರ ಪತನವಾಗಿ ಬಿಜೆಪಿ ಸರ್ಕಾರ ರಚನೆಯಾಯಿತು. ನಮ್ಮ ಪಕ್ಷ ಅಧಿಕಾರಕ್ಕೆ ಬಂದು 24 ಗಂಟೆ ಅಂದವರು 500 ದಿನಗಳು ಕಳೆದರು ಸಹ ಮಾತು ತಪ್ಪಲ್ಲ ಅಂತಿದ್ದಾರೆ. ಮಾತು ನೇರವೇರಿಉವಷ್ಟರಲ್ಲಿ  ಚುನಾವಣೆ ಬಂದರೆ  ವಾಲ್ಮೀಕಿ ಸಮುದಾಯಕ್ಕೆ  ಮೀಸಲಾತಿ ವಿಚಾರ ಮತ್ತಷ್ಟು ಮುಂದೆ ಹೋಗಿ ಚುನಾವಣಾ ಪ್ರಚಾರದ ಅಸ್ತ್ರು ಆಗಬಹುದು.
ಮೀಸಲಾತಿ ವಿಚಾರವಾಗಿ ನೇಮಿಸಿದ್ದ ನಾಗಮೋಹನ್ ದಾಸ್ ವರದಿ ಬಂದು ಅಂದು ಖಾತೆ ಹೊಂದಿ ಸಮಾಜ ಕಲ್ಯಾಣ ಸಚಿವರಾಗಿದ್ದು  ವಾಲ್ಮೀಕಿ ಸಮುದಾಯದ. ಬಿ.ಶ್ರೀರಾಮುಲು ವರದಿ ಆಧರಿಸಿ ಮೀಸಲಾತಿಗೆ ಅಂಕಿತ ಹಾಕುವುದು ಬಿಟ್ಟು ಉಪ ಸಮಿತಿ ರಚನೆ ಮಾಡಿ ಸಮಾಜಕ್ಕೆ ದೊಡ್ಡ ಪೆಟ್ಟು ನೀಡಿದರು. ಸ್ವಲ್ಪ ದಿನದಲ್ಲಿ ಸಮಾಜ ಕಲ್ಯಾಣ ಇಲಾಖೆ ಖಾತೆ ಸಹ ಬೇರೆಯವರ ಪಾಲಾಯಿತು. ಬಿಜೆಪಿ‌ ಶಾಸಕರು ಸಾಮೂಹಿಕವಾಗಿ ಸಮಾಜದ ಪರವಾಗಿ ರಾಜೀನಾಮೆಯನ್ನು ನೀಡುವ ಅಸ್ತ್ರ ಉಪಯೋಗಿಸಿದ್ದರೆ ಇಂತಹ ಸ್ಥಿತಿ  ಸಮಾಜಕ್ಕೆ‌ಬರುತ್ತಿರಲಿಲ್ಲ ಎಂದು ಹೇಳಬಹುದು.
61  ದಿನಕ್ಕಿಂತ ಹೆಚ್ಚು ದಿನಗಳು ಕಳೆದರು ಸಹ ಕುಕ್ಕದೇ ಕುಳಿತಿರುವ ಸ್ವಾಮೀಜಿ‌ ಸಮಾಜ ಕಾಳಜಿಗೆ ಒಂದು ಸಲಾಂ, ರಾಜ್ಯ ಬಿಜೆಪಿ‌ ಸರ್ಕಾರ ಮತ್ತು ಶಾಸಕರು ವಾಲ್ಮೀಕಿ ಸಮಾಜಕ್ಕೆ ಮೀಸಲಾತಿ‌ ಕೊಡಿಸುವರೇ? ಎಂಬ ನಂಬಿಕೆ ಸಮಾಜಕ್ಕಿಲ್ಲ. ಕಾಂಗ್ರೆಸ್ ಜೆಡಿಎಸ್ ನಾಯಕರು ವಿಧಾನಸಭಾ ಅಧಿವೇಶನದಲ್ಲಿ  ಎಲ್ಲಾರೂ ಒಕ್ಕೊರಲಿನಿಂದ ವಾಲ್ಮೀಕಿ ‌ಸಮಾಜಕ್ಕೆ‌ ಮೀಸಲಾತಿ ನೀಡಿ ಅದರಲ್ಲಿ‌ ಮೀನಮೇಷ ಬೇಡ ಎಂದು ಕಡ್ಡಿ ತುಂಡಾದಂತೆ ಹೇಳಿದ್ದಾರೆ. ವಿಧಾನಸಭೆಯಲ್ಲಿ ಸಚಿವ ರಾಮುಲು ರಕ್ತಪತ್ರ ವಿಚಾರಕ್ಕೆ ತರಾಟೆಗೆ ತೆಗೆದುಕೊಂಡಿದ್ದಾರೆ. ಸಮಾಜ ಅಂತ ಬಂದಾಗ ಎಲ್ಲಾ ಶಾಸಕರು ಪಕ್ಷಾತೀತವಾಗಿ ಒಗ್ಗಟ್ಟು ಪ್ರದರ್ಶಿಸದಿದ್ದರೆ ಇನ್ನೇಲ್ಲಿ ಮೀಸಲಾತಿ ಸ್ವಾಮಿ, ಫ್ರೀಡಂ ಪಾರ್ಕ್‌ನಲ್ಲಿ  ಇನ್ನೆಷ್ಟು ದಿನ ಕಳೆಯಬೇಕು ಸಿಎಂ ಸಾಹೇಬರೆ ನೀವೇ ಹೇಳಿ.ವಾಲ್ಮೀಕಿ ಜನಾಂಗವೆಂದರ ನಿಮಗೆ ಅಷ್ಟೊಂದು ಅಸಡ್ಡೆ ಮನೋಭಾವವೇ. ನಿಮ್ಮದೇ ಜನಾಂಗದ ಸ್ವಾಮೀಜಿ ಇಂತಹ ನಿರ್ಧಾರ ಕೈಗೊಂಡಿದ್ದರೆ ನಿಮ್ಮ ನಿರ್ಧಾರ ಏನಿರುತ್ತಿತ್ತು ಸತ್ಯ‌ ಹೇಳಿ , ಮೀಸಲಾತಿ‌ ಕೊಡಿವಬ ಮಾತು  ಸಮಾಜದ ಕಟ್ಟಕಡೆಯ ವ್ಯಕ್ತಿಯ ಬಾಯಲ್ಲಿ ಲಿಂಗಣಿಸುತ್ತಿದೆ.  ಮುಂದೆ‌ ಎಷ್ಟು ದಿನ ಎಂಬುದು‌ ಸ್ವಾಮೀಜಿಯೇ ತಿಳಿಸಬೇಕಾಗಿದೆ.
[t4b-ticker]

You May Also Like

More From Author

+ There are no comments

Add yours