ಆರ್ಥಿಕವಾಗಿ ಕಷ್ಟವಾದರೂ ಕೋವಿಡ್ ಸಮಯದಲ್ಲಿ ದೇಶದ ಪ್ರಧಾನಿ ನರೇಂದ್ರ ಮೋದಿ ದಿಟ್ಟ ನಿರ್ಧಾರ: ಡಾ.ಸಿದ್ದಾರ್ಥ

 

 

 

 

ಚಿತ್ರದುರ್ಗ: ಆರ್ಥಿಕವಾಗಿ ಕಷ್ಟವಾದರೂ ದೇಶದ ಪ್ರಧಾನಿ ನರೇಂದ್ರ ಮೋದಿರವರು ೨೦೨೦ರಲ್ಲಿ ಲಾಕ್‌ಡೌನ್ ಮೂಲಕ ದಿಟ್ಟ ನಿರ್ಧಾರ ಕೈಗೊಂಡಿದ್ದರಿಂದ ಕರೋನ ಮಹಾಮಾರಿಯಂತಹ ಸಂದರ್ಭದಲ್ಲಿ ಸಾವು ನೋವಿನ ಪ್ರಮಾಣ ಭಾರತದಲ್ಲಿ ಕಡಿಮೆಯಾಗಿದೆ ಎಂದು ಲಸಿಕಾ ಅಭಿಯಾನದ ಜಿಲ್ಲಾ ಸಂಚಾಲಕ ಡಾ. ಸಿದ್ಧಾರ್ಥ ಹೇಳಿದರು.

 

 

ನಗರದ   ಬಿ.ಜೆ.ಪಿ. ಕಛೇರಿಯಲ್ಲಿ ಬುಧವಾರ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು ಮುಂದುವರೆದ ಅಮೇರಿಕಾದಂತಹ ದೇಶವೇ ಕೊರೋನ ನಿಗ್ರಹಿಸುವಲ್ಲಿ ಸಾಕಷ್ಟು ಪರದಾಡಿತ್ತು. ಆದರೆ ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿರವರು ಪ್ರತಿಯೊಬ್ಬ ಪ್ರಜೆಯ ಜೀವ ಕಾಪಾಡುವ ದೂರದೃಷ್ಠಿ ಇಟ್ಟುಕೊಂಡು ಒಂದು ಮತ್ತು ಎರಡನೇ ಅಲೆಯಲ್ಲಿ ಉಚಿತವಾಗಿ ಲಸಿಕೆ ಪ್ರತಿಯೊಬ್ಬರಿಗೂ ಸಿಗುವಂತೆ ಯೋಜನೆ ರೂಪಿಸಿದರು. ಇದಲ್ಲದೆ ಶಕ್ತಿವರ್ಧಕವಾಗಿ ೬೦ವರ್ಷ ಮೇಲ್ಪಟ್ಟವರಿಗೂ ಬೂಸ್ಟರ್ ಡೋಸ್ ಲಸಿಕೆ ಸಿಗುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮುಂಜಾಗ್ರತೆ ವಹಿಸಿದ್ದರಿಂದ ಕೊರೋನಾ ನಮ್ಮ ದೇಶ ಹಾಗೂ ರಾಜ್ಯದಲ್ಲಿ ನಿಯಂತ್ರಣದಲ್ಲಿದೆಯೆAದು ಮೆಚ್ಚುಗೆ ವ್ಯಕ್ತಪಡಿಸಿದರು.
ಕೊರೋನಾಗೆ ಲಸಿಕೆ ಕಂಡು ಹಿಡಿದಾಗ ಕೆಲವು ವಿರೋಧಿಗಳು ಲಸಿಕೆ ಬಗ್ಗೆ ಅಪ ಪ್ರಚಾರ ಮಾಡಿ ಬಿ.ಜೆ.ಪಿಗೆ ಕೆಟ್ಟ ಹೆಸರು ತರುವ ಕುತಂತ್ರ ನಡೆಸಿದರು. ಜನ ತಲೆಕೆಡೆಸಿಕೊಳ್ಳಲಿಲ್ಲ. ದೇಶದಲ್ಲಿ ೧೮೬ ಕೋಟಿಗಿಂತ ಹೆಚ್ಚು ಲಸಿಕೆ ನೀಡಲಾಗಿದೆ. ಶೇಕಡ ೯೦ಕ್ಕಿಂತ ಹೆಚ್ಚು ೨ನೇ ಡೋಸ್ ಮುಗಿದಿದೆ. ಈಗ ೧೨ ರಿಂದ ೧೪ ವರ್ಷದೊಳಗಿನ ಮಕ್ಕಳಿಗೂ ಕಾರ್ಬಿವ್ಯಾಕ್ಸ್ ನೀಡಲಾಗುತ್ತಿದೆ. ೨ನೇ ಅಲೆಯಲ್ಲಿ ಕೊರೋನಾ ಪೀಡಿತರಿಗೆ ಆಕ್ಸಿಜನ್ ಕೊರತೆ ಎದುರಾಯಿತು. ಎಲ್ಲವನ್ನು ಧೈರ್ಯದಿಂದ ನಿಭಾಯಿಸಿದ ಪ್ರಧಾನಿ ನರೇಂದ್ರ ಮೋದಿರವರು ಮುಂದೆ ೪ನೇ ಅಲೆ ಬಂದರು ಆಕ್ಸಿಜನ್‌ಗೆ ಕೊರತೆಯಾಗದಂತೆ ಸಿದ್ಧತೆ ಮಾಡಿಟ್ಟಿದ್ದಾರೆ. ಇದಲ್ಲದೆ ಇತರೆ ಹದಿನೈದು ಹದಿನಾರು ದೇಶಗಳಿಗೆ ಉಚಿತವಾಗಿ ಲಸಿಕೆ ನೀಡಿ ಮಾನವೀಯತೆ ಮೆರೆದಿದ್ದಾರೆ ಎಂದು ಗುಣಗಾನ ಮಾಡಿದರು.
ಲಸಿಕೆ ಅಭಿಯಾನ ಯಶಸ್ವಿಯಾಗಿದ್ದು ಜನೌಷಧಿ ಕೇಂದ್ರವನ್ನು ಪ್ರಧಾನಿ ಮೋದಿರವರು ದೇಶದೆಲ್ಲಡೆ ತೆರದಿದ್ದರಿಂದ ಮಧ್ಯಮ ಹಾಗೂ ಬಡ ವರ್ಗದವರಿಗೆ ಸಾಕಷ್ಟು ಅನುಕೂಲವಾಗಿದೆ. ಬೇರೆ ದೇಶಗಳಲ್ಲಿನ ಸಾವು ನೋವಿನ ಪ್ರಮಾಣವನ್ನು ಹೋಲಿಸಿದರೆ ನಮ್ಮ ದೇಶದಲ್ಲಿ ತುಂಬಾ ಕಡಿಮೆ ಇದೆ. ಕೊರೋನಾ ಸಂದರ್ಭದಲ್ಲಿ ಅನೇಕ ದೇಶಗಳಲ್ಲಿ ಊಟಕ್ಕೂ ತೊಂದರೆ ಅನುಭವಿಸಿದರು. ಆದರೆ ನಮ್ಮ ದೇಶದಲ್ಲಿ ಪ್ರಧಾನಿ ಮೋದಿರವರು ಎಲ್ಲಾ ರಕ್ಷಣೆ ಮಾಡಿದ್ದಾರೆ.

ನಮ್ಮ ದೇಶದಲ್ಲಿ ಪ್ರಧಾನಿ ಮೋದಿರವರು ನ್ಯಾಯ ಬೆಲೆ ಅಂಗಡಿಗಳಲ್ಲಿ ೮೦ ಕೋಟಿ ಜನರಿಗೆ ಉಚಿತವಾಗಿ ಆಹಾರಧಾನ್ಯಗಳು ಸಿಗುವಂತೆ ಮುತುವರ್ಜಿವಹಿಸಿದ್ದಾರೆ. ಹಾಗಾಗಿ ಎಲ್ಲರೂ ಲಸಿಕೆ ಪಡೆದು ಸುರಕ್ಷಿತವಾಗಿರಿ ಎಂದು ಜನತೆಯಲ್ಲಿ ಡಾ. ಸಿದ್ಧಾರ್ಥ ಮನವಿ ಮಾಡಿದರು.
ಬಿ.ಜೆ.ಪಿ. ಜಿಲ್ಲಾಧ್ಯಕ್ಷ ಎ.ಮುರುಳಿ, ವಕ್ತಾರ ನಾಗರಾಜ್ ಬೇದ್ರೆ, ಜಿಲ್ಲಾ ಕಾರ್ಯದರ್ಶಿ ಎ.ರೇಖಾ, ಎಸ್.ಸಿ.ಮೋರ್ಚಾ ಜಿಲ್ಲಾಧ್ಯಕ್ಷ ತಿಪ್ಪೇಸ್ವಾಮಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

[t4b-ticker]

You May Also Like

More From Author

+ There are no comments

Add yours