ಆರೋಗ್ಯ ,ಶಿಕ್ಷಣ ,ನೀರು ಈ ಮೂರು ಕ್ಷೇತ್ರಗಳಿಗೆ ಹೆಚ್ಚಿನ ಆದ್ಯತೆ: ಶಾಸಕಿ ಪೂರ್ಣಿಮಾ ಶ್ರೀನಿವಾಸ್

 

 

 

 

ಹಿರಿಯೂರು: ಹಿರಿಯೂರು ತಾಲ್ಲೂಕಿನ ಐಮಂಗಲ ಹೋಬಳಿಯ ಗನ್ನಾಯಕನಹಳ್ಳಿ ಗ್ರಾಮದಲ್ಲಿ 30 ಲಕ್ಷ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ಗ್ರಾಮ ಪಂಚಾಯಿತಿಯ ಕಟ್ಟಡ ಹಾಗೂ 56 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಿರುವ ಕುಡಿಯುವ ನೀರಿನ ಸ್ಥಾವರವನ್ನು ಶಾಸಕಿ ಕೆ. ಪೂರ್ಣಿಮಾ ಶ್ರೀನಿವಾಸ್ ಅವರು ಉದ್ಘಾಟಿಸಿದರು.

 

 

ನಂತರ ಮಾತನಾಡಿದ ಅವರು ನಾನು ಶಾಸಕಿಯಾಗಿ ಆರೋಗ್ಯ ಶಿಕ್ಷಣ ನೀರು ಈ ಮೂರು ಕ್ಷೇತ್ರಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಾ ಬಂದಿದ್ದೇನೆ ಎಂದರು.
ತಾಲ್ಲೂಕಿನ ವಾಣಿ ವಿಲಾಸ ಜಲಾಶಯದ ನೀರನ್ನು ಗನ್ನಾಯಕನಹಳ್ಳಿ ಗ್ರಾಮದಲ್ಲಿ ಉಪಯೋಗಿಸುತ್ತಿದ್ದಾರೆ, ಅದಕ್ಕೆ ಮೂಲ ಕಾರಣ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಪಕ್ಷದ ಮುಖಂಡರು ಕಾರಣ ಎಂದು ಹೇಳಿದರು.

2018 ರಲ್ಲಿ ತಾಲ್ಲೂಕಿನ ಜನತೆ ಕೊಟ್ಟಿರುವ ಮತಕ್ಕೆ ದ್ರೋಹ ಆಗದ ರೀತಿಯಲ್ಲಿ ನೀರಾವರಿ ವಿಷಯದಲ್ಲಿ ಏನೇನು ಕೆಲಸಗಳು ಆಗಬೇಕು ಅದನ್ನು ಸರ್ಕಾರದ ಮಟ್ಟದಲ್ಲಿ ಗಮನ ಸೆಳೆದು ನನ್ನ ಪ್ರಾಮಾಣಿಕ ಪ್ರಯತ್ನ ಮಾಡುತ್ತಾ ಬಂದಿದ್ದೇನೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಾಜೇಶ್ವರಿ, ಉಪಾಧ್ಯಕ್ಷ ಪ್ರಹ್ಲಾದ್ ಯಾದವ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಮುರುಳಿ, ತಾಪಂ ಮಾಜಿ ಸದಸ್ಯ ಯಶವಂತರಾಜ್, ನಗರಸಭೆ ಸದಸ್ಯ ನಿತ್ಯಾನಂದ, ಮಾಜಿ ಅಧ್ಯಕ್ಷರಾದ ಕರಿಯೋಬನಹಳ್ಳಿ ರಾಮಕೃಷ್ಣಪ್ಪ, ಬಾಲೇನಹಳ್ಳಿ, ವಿಶ್ವನಾಥ್, ಜಡೆಗೊಂಡನಹಳ್ಹಿ ಕೃಷ್ಣಮೂರ್ತಿ ಮುಖಂಡರಾದ ವಿನಯ್ ಕುಮಾರ್, ನಾಗೇಂದ್ರಪ್ಪ, ರಂಗೇಗೌಡ, ವಿಜಯ್ ಯಾದವ, ಬಸಂತ್ ಕುಮಾರ್ ಮುಂತಾದವರು ಉಪಸ್ಥಿತರಿದ್ದರು.

[t4b-ticker]

You May Also Like

More From Author

+ There are no comments

Add yours