ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪಿಗಳ ಬಂಧನ.

 

 

 

 

ದಿನಾಂಕ.19.12.2021 ರಂದು ಹೊಸದುರ್ಗ ತಾಲ್ಲೋಕು ಶೀರನಕಟ್ಟೆ ಮಜುರೆ ಕೋಡಿಹಳ್ಳಿಹಟ್ಟಿ ಗ್ರಾಮಸ್ಥರೊಬ್ಬರು
ಹೊಸದುರ್ಗ ಠಾಣೆಗೆ ಹಾಜರಾಗಿ ತಮ್ಮ ಮಗಳಿಗೆ ಮುದ್ದಪ್ಪ, ಸುದೀಪ, ಕೋಟಿ ದುರುಗೇಶಿ ಮತ್ತು ಅಭಿ ರವರು ನನ್ನ
ಮಗಳು ಕಾಲೇಜಿಗೆ ಹೋಗುವಾಗ ಬರುವಾಗ ರೇಗಿಸುವುದು, ಚುಡಾಯಿಸುವುದು ಮಾಡುತ್ತಿದ್ದು, ಈ ಕಿರುಕುಳದಿಂದ
ಬೇಸತ್ತು ದಿನಾಂಕ.19.12.2021 ರಂದು ಮಧ್ಯಾಹ್ನ 2.00 ಗಂಟೆ ಸಮಯದಲ್ಲಿ ನನ್ನ ಮಗಳು ನೇಣು ಹಾಕಿಕೊಂಡು
ಸಾವನ್ನಪ್ಪಿರುತ್ತಾಳೆ ಎಂತಾ ನೀಡಿದ ದೂರಿನ ಮೇರೆಗೆ ಹೊಸದುರ್ಗ ಪೊಲೀಸ್ ಠಾಣೆ ಮೊ.ನಂ.538/2021 ಕಲಂ:306 ರೆ/ವಿ
149 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿರುತ್ತದೆ.
ಸದರಿ ಪ್ರಕರಣದಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣರಾದ ಆರೋಪಿತರನ್ನು ಪತ್ತೆಯ ಬಗ್ಗೆ ಶ್ರೀ.ರೋಷನ್
ಜಮೀರ್ ಡಿ.ವೈ.ಎಸ್.ಪಿ ಹಿರಿಯೂರು ರವರ ಉಸ್ತುವಾರಿಯಲ್ಲಿ ಶ್ರೀ.ಎಂ.ಡಿ.ಫೈಜುಲ್ಲ,ಪಿ.ಐ. ಹೊಸದುರ್ಗ ಪೊಲೀಸ್
ಠಾಣೆರವರ ನೇತೃತ್ವದಲ್ಲಿ ಸಿಬ್ಬಂದಿಯವರಾದ ಉಮೇಶ ಹೆಚ್.ಸಿ.1351, ಧೃವಕುಮಾರ ಹೆಚ್.ಸಿ.1251, ಗಂಗಾಧರ
ಪಿಸಿ.2586, ಮಹಮದ್ ರಫಿ ಪಿಸಿ.2430 ರುದ್ರಮುನಿಸ್ವಾಮಿ ಪಿಸಿ-2401 ರವರ ತಂಡ ರಚಿಸಿದ್ದು, ಸದರಿ ತಂಡವು
ಆರೋಪಿತರ ಬಗ್ಗೆ ಗುಪ್ತಮಾಹಿತಿ ಸಂಗ್ರಹಿಸಿ ಈ ಕೆಳಕಂಡ ಅರೋಪಿತರಾದ
ಎ-1 ಮುತ್ತು@ಮುದ್ದಪ್ಪ ತಂದೆ ಗಿರಿಯಪ್ಪ ಸು.21 ವರ್ಷ, ಪಾಣಿಕಿಟ್ಟದಹಳ್ಳಿ ಗ್ರಾಮ ಹೊಸದುರ್ಗ ತಾಲ್ಲೂಕು ಇವನನ್ನು
ದಿನಾಂಕ.24.12.2021 ದಸ್ತಗಿರಿಮಾಡಿದ್ದು,
ಎ-2 ಸುದೀಪ ತಂದೆ ತಿಪ್ಪೇಸ್ವಾಮಿ, ಸು.19 ವರ್ಷ, ಶೀರನಕಟ್ಟೆ ಎಕೆ ಕಾಲೋನಿ, ಹೊಸದುರ್ಗ ತಾಲ್ಲೂಕು,
ದಿನಾಂಕ.24.12.2021 ದಸ್ತಗಿರಿಮಾಡಿದ್ದು,
ಎ-3 ಕೋಟಿ@ಕೋಟೆಶ ತಂದೆ ದುರುಗೇಶಿ, ಸು.19 ವರ್ಷ, ಶೀರನಕಟ್ಟೆ ಎಕೆ ಕಾಲೋನಿ, ಹೊಸದುರ್ಗ ತಾಲ್ಲೂಕು
ಇವರನ್ನು ದಿನಾಂಕ.23.12.2021 ರಂದು ದಸ್ತಗಿರಿಮಾಡಿದ್ದು,
ಎ-4 ಅಭಿ@ಅಭಿಷೇಕ್ ತಂದೆ ದುರ್ಗೇಶ್, ಸು.22 ವರ್ಷ, ಶೀರನಕಟ್ಟೆ ಎಕೆ ಕಾಲೋನಿ, ಹೊಸದುರ್ಗ ತಾಲ್ಲೂಕು
ದಿನಾಂಕ.25.12.2021 ರಂದು ದಸ್ತಗಿರಿ ಮಾಡಿದ್ದು, ಆರೋಪಿಗಳು ಹಾಲಿ ನ್ಯಾಯಾಂಗ ಬಂಧನದಲ್ಲಿರುತ್ತಾರೆ.
ಸದರಿ ಪತ್ತೆ ಕಾರ್ಯವನ್ನು ಮಾನ್ಯ ಪೊಲೀಸ್ ಅಧೀಕ್ಷಕರು, ಚಿತ್ರದುರ್ಗ ಜಿಲ್ಲೆ ರವರು ಶ್ಲಾಘಿಸಿರುತ್ತಾರೆ.

 

 

[t4b-ticker]

You May Also Like

More From Author

+ There are no comments

Add yours