ಆಗಸ್ಟ್ 22ರಂದು ವಿದ್ಯುತ್ ವ್ಯತ್ಯಯ.

 

 

 

 

ಆಗಸ್ಟ್ 22ರಂದು ವಿದ್ಯುತ್ ವ್ಯತ್ಯಯ
****
ಚಿತ್ರದುರ್ಗ,ಆಗಸ್ಟ್21:
ಕಾರ್ಯ ಮತ್ತು ಪಾಲನ ಚಿತ್ರದುರ್ಗ ನಗರ ಉಪವಿಭಾಗ ಘಟಕ-1ರ ವ್ಯಾಪ್ತಿಯಲ್ಲಿ ರಸ್ತೆ ಕಾಮಗಾರಿಯು ಚಾಲನೆಯಲ್ಲಿರುವ ಕಾರಣ ವಿದ್ಯುತ್ ಕಂಬಗಳು ಮತ್ತು ಪರಿವರ್ತಕಗಳನ್ನು ಸ್ಥಳಾಂತರಿಸುವುದರಿಂದ ಆಗಸ್ಟ್ 22ರಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ವಿದ್ಯುತ್ ಅಡಚಣೆಗೆ ಒಳಪಡುವ ಪ್ರದೇಶಗಳು: ಆರ್.ಟಿ.ಒ ಆಫೀಸ್ ರಸ್ತೆ, ಬಿ.ಎಲ್.ಗೌಡ ಲೇಔಟ್, ತಿಪ್ಪಜ್ಜಿ ಸರ್ಕಲ್, ಸಂಗಮೇಶ್ವರ ಸರ್ಕಲ್, ವಿ.ಪಿ.ಬಡಾವಣೆ ಮೊದಲನೇ ಕ್ರಾಸ್, ಬಸವೇಶ್ವರ ಟಾಕೀಸ್ ರಸ್ತೆ, ಎಸ್.ಬಿ.ಎಮ್, ವಾಸವಿ ಮಹಲ್, ಬಿ.ಡಿ.ರಸ್ತೆ, ಧರ್ಮಶಾಲಾ ರಸ್ತೆ, ಲಕ್ಷ್ಮೀ ಬಜಾರ್, ದೊಡ್ಡಪೇಟೆ, ಚಿಕ್ಕಪೇಟೆ, ಖಾಜಿ ಮೊಹಲ್ಲ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಆಡಚಣೆಯಾಗಲಿದೆ.
ಸಾರ್ವಜನಿಕರು ಸಹಕರಿಸಬೇಕು ಎಂದು ಬೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

 

[t4b-ticker]

You May Also Like

More From Author

+ There are no comments

Add yours