ಅಡುಗೆ ಎಣ್ಣೆಯನ್ನು ಮೂಲ ಬೆಲೆಗಿಂತ ಅಧಿಕ‌ ಬೆಲೆಗೆ ಮಾರಟದ ವರ್ತಕರ ಅಂಗಡಿ‌ಗಳ ಪರಿಶೀಲನೆ: ತಹಶೀಲ್ದಾರ್ ಎನ್.ರಘುಮೂರ್ತಿ

 

 

 

 

ಚಳ್ಳಕೆರೆ: ರಷ್ಯಾ  ಹಾಗೂ ಉಕ್ರೇನ್ ಯುದ್ದದ ಹಿನ್ನೆಲೆಯಲ್ಲಿ ಅಡಿಗೆ ಎಣ್ಣೆ ದುಬಾರಿ ಬೆಲೆ ಕಂಡ ಹಿನ್ನೆಲೆಯಲ್ಲಿ ಚಳ್ಳಕೆರೆ ನಗರದಲ್ಲಿ ಅಂಗಡಿ ವರ್ತಕರು ಅಡಿಗೆ ಎಣ್ಣೆಯನ್ನು ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಅಂಗಡಿಗಳ‌ ಮೇಲೆ ಚಳ್ಳಕೆರೆ‌ ತಹಶೀಲ್ದಾರ್ ಎನ್. ರಘುಮೂರ್ತಿ ಅವರ ನೇತೃತ್ವದಲ್ಲಿ ಅಂಗಡಿಗಳ ಪರಿಶೀಲನೆ ಮಾಡಿದ್ದಾರೆ ಎಂದು ತಿಳಿದಿದೆ.

 

 

ಚಳ್ಳಕೆರೆ‌ ನಗರದ ಅಂಗಡಿ‌ಗಳಲ್ಲಿ  ಮಾರಾಟ ಮಾಡುವುದಕ್ಕಿಂತ  ಹೆಚ್ಚು ಶೇಖರಣೆ ಮಾಡಿದ್ದಾರೆ ಎಂಬ  ಸಾರ್ವಜನಿಕರ ಮಾಹಿತಿ ಮೇರೆಗೆ ಆಹಾರ ಇಲಾಖೆಯ ಆಯುಕ್ತರ ಹಾಗೂ ಜಿಲ್ಲಾಧಿಕಾರಿಗಳು ಸೂಚನೆ ಮೇರೆಗೆ ಚಳ್ಳಕೆರೆ ಆಹಾರ ಶೀರಸ್ತೆದಾರ್  ಶಿವಾಜಿ,  ಆಹಾರ ಪುಡ್ ಇನ್ಸ ಪೆಕ್ಟರ್  ಹಾಗೂ  ತೂಕ ಮಾಪನ ಅಧಿಕಾರಿಗಳು ಕಂದಾಯ ಅಧಿಕಾರಿಗಳು ಆಹಾರ ತಪಸಣೆ ಅಧಿಕಾರಿಗಳು ನಗರದ ಮಹದೇವಿ ರಸ್ತೆಯಲ್ಲಿರುವ ಹಲವು ಅಂಗಡಿಗಳ ಮೇಲೆ ದಾಳಿ‌ ಮಾಡಲಾಗಿದ್ದು ಕೆಲವು ವರ್ತಕರು,ಅಳತಗಿಂತ ಹೆಚ್ಚು ಅಡಿಗೆ ಎಣ್ಣೆ ಶೇಖರಣೆ ಮಾಡಿದ್ದ ಕಂಡುಬಂದಿದೆ ಇನ್ನು ಕೆಲವರು  ವರ್ತಕರು ನೆಲಮಾಳಿಗೆಯಲ್ಲಿ ಎಣ್ಣೆಯನ್ನು ಸೇರಿಸಿ ನಂತರ ಎಣ್ಣೆ ಡಬ್ಬಿಗಳಿಗೆ  ತುಂಬಿ ಮಾರಾಟ ಮಾಡುತ್ತಿದ್ದು ಕಂಡು ಬಂದಿದೆ. ಇಂತಹ ಅಂಗಡಿಗಳಲ್ಲಿ  ಅಧಿಕಾರಿಗಳು ತಪಾಸಣೆ ಮಾಡಿ ಅವರು ಮಾರಾಟ ಮಾಡುತ್ತಿದ್ದ ಎಣ್ಣೆಯನ್ನು ಪ್ರಯೋಗಕ್ಕೆ ಕಳುಹಿಸಿಕೊಡಲಾಗಿದೆ. ವರದಿ ಬಂದ ನಂತರ ಅಂತಹ ವರ್ತಕರ ಮೇಲೆ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ, ಇನ್ನು ಕೆಲವು ಅಂಗಡಿ ವರ್ತಕರು  ಎಣ್ಣೆಯ ಟಿನ್ ಮೇಲೆ ಬೆಲೆಯನ್ನು  ಕೈಯಲ್ಲಿ ಬದಲಾವಣೆ ಮಾಡಿರುವುದನ್ನು ಅಧಿಕಾರಿಗಳ‌ ಗಮನಕ್ಕೆ ಬಂದಿದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿ ಬಂದ ನಂತರ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು‌ ಅಧಿಕಾರಿಗಳ ತಂಡ ತಿಳಿಸಿದೆ.

[t4b-ticker]

You May Also Like

More From Author

+ There are no comments

Add yours