ಹಿರಿಯ ನಾಗರಿಕರಿಗೆ ಸಾಧನ ಸಲಕರಣೆ: ಆಗಸ್ಟ್ 17 ರಿಂದ 24ರವರೆಗೆ ವೈದ್ಯಕೀಯ ಮೌಲ್ಯ ಮಾಪನ ಶಿಬಿರ

 

 

 

 

ಚಿತ್ರದುರ್ಗ,ಆಗಸ್ಟ್12:
ಕೇಂದ್ರ ಸರ್ಕಾರದ  ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ಅಡಿಯಲ್ಲಿ ರಾಷ್ಟ್ರೀಯ ವಯೋಶ್ರೀ ಯೋಜನೆಯಡಿ ಹಿರಿಯ ನಾಗರಿಕರಿಗೆ ಸಾಧನ ಸಲಕರಣೆಗಳನ್ನು ಉಚಿತವಾಗಿ ಒದಗಿಸಲು ಆಗಸ್ಟ್ 17 ರಿಂದ 24ರವರೆಗೆ ವೈದ್ಯಕೀಯ ಮೌಲ್ಯಮಾಪನ ಶಿಬಿರ ಹಮ್ಮಿಕೊಳ್ಳಲಾಗಿದೆ.
ಚಿತ್ರದುರ್ಗ ಜಿಲ್ಲೆಯ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಅವರುಗಳ  ಅಗತ್ಯತೆಗನುಸಾರ ಅವಶ್ಯವಿರುವ ವಾಕಿಂಗ್ ಸ್ಟಿಕ್, ಎಲ್ಬೋಕ್ಲಚ್ಚರ್ಸ್, ಆಕ್ಸಿಲರಿ ಕ್ಲಚ್ಚರ್ಸ್, ವೀಲ್‍ಚೇರ್, ಟ್ರೈಪ್ಯಾಡ್, ವಾಕರ್ ಪೋಲ್ಡಬಲ್, ಶ್ರವಣಸಾಧನ, ಕನ್ನಡಕ, ಕೃತಕ ದಂತ ಪಂಕ್ತಿ, ವೀಲ್‍ಚೇರ್ ವಿತ್ ಕಮೋಡ್, ವಾಕಿಂಗ್ ಸ್ಟಿಕ್ ವಿತ್ ಸೀಟ್, ವಾಕರ್, ರೋಲೆಟರ್ ವಿತ್ ಬ್ರೇಕ್ಸ್, ಸ್ಟೂಲ್ ವಿತ್ ಕಮೋಡ್, ಮುಂತಾದ ಸಾಧನ ಸಲಕರಣೆಗಳನ್ನು ಉಚಿತವಾಗಿ ಒದಗಿಸಲು ವಿಕಲಚೇತನರು ಹಾಗೂ ಹಿರಿಯ  ನಾಗರೀಕ ಸಬಲೀಕರಣ ಇಲಾಖೆ, ಮಹಿಳ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಬೆಂಗಳೂರಿನ ಅಲಿಮ್ಕೋ ಆಕ್ಸಿಲರಿ ಪ್ರೊಡಕ್ಷನ್ ಸೆಂಟರ್ ವತಿಯಿಂದ ಚಿತ್ರದುರ್ಗ ಜಿಲ್ಲೆಯ ಆರು ತಾಲ್ಲೂಕುಗಳಲ್ಲಿ ವೈದ್ಯಕೀಯ ಮೌಲ್ಯಮಾಪನ ಶಿಬಿರಗಳನ್ನು 60ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರಿಗೆ ಹಮ್ಮಿಕೊಳ್ಳಲಾಗಿದೆ.
ಶಿಬಿರ ನೆಡಯುವ ದಿನ ಮತ್ತು ಸ್ಥಳ: ಆಗಸ್ಟ್ 17 ರಂದು ಚಿತ್ರದುರ್ಗದ ಪಿ.ಪಿ.ಎಸ್ ಶಾಲೆ ಗುರುಭವನ ಪಕ್ಕ ಚಿತ್ರದುರ್ಗ, ಆಗಸ್ಟ್ 18 ರಂದು ಚಳ್ಳಕೆರೆಯ ಸರ್ಕಾರಿ ಮಾದರಿ ಬಾಲಕಿಯರ ಶಾಲೆ, ಆಗಸ್ಟ್ 19 ರಂದು ಹೊಸದುರ್ಗದ ತೋಟದ ರಾಮಯ್ಯ ಪ್ರೌಢಶಾಲೆ, ಆಗಸ್ಟ್ 21 ರಂದು ಹಿರಿಯೂರಿನ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು (ಪ್ರೌಢಶಾಲೆ ವಿಭಾಗ) ಹಿರಿಯೂರು, ಆಗಸ್ಟ್ 23ರಂದು ಮೊಳಕಾಲ್ಮುರಿನ ಸರ್ಕಾರಿ ಬಾಲಕಿರ ಪ್ರೌಢಶಾಲೆ ಮೊಳಕಾಲ್ಮೂರು, ಆಗಸ್ಟ್ 24ರಂದು ಹೊಳಲ್ಕೆರೆಯ ಬಿ.ಇ.ಒ ಕಚೇರಿಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಬಿರ ನಡೆಯಲಿದೆ. ಜಿಲ್ಲೆಯ ಎಲ್ಲಾ ತಾಲ್ಲೂಕಿನಲ್ಲಿ ಬೆಳಿಗ್ಗೆ 10.30 ಗಂಟೆಯಿಂದ ವೈದ್ಯಕೀಯ ಶಿಬಿರ ನಡೆಯಲಿದೆ.
ದಾಖಲಾತಿಗಳು: ಆಧಾರ್ ಕಾರ್ಡ್, ಬಿ.ಪಿ.ಎಲ್.ಕಾರ್ಡ್, ಎಂ.ಜಿ.ಎನ್.ಆರ್.ಇ.ಜಿ (ನರೇಗಾ) ಕಾರ್ಡ್, ವೃದ್ದಾಪ್ಯ ವೇತನದ ಮಂಜೂರಾತಿ ಪ್ರತಿ ಜೆರಾಕ್ಸ್, ಆದಾಯ ಪ್ರಮಾಣಪತ್ರ, 3 ಭಾವಚಿತ್ರಗಳು ಸೇರಿದಂತೆ ಅಗತ್ಯ ದಾಖಲಾತಿಗಳೊಂದಿಗೆ ಹಾಜರಾಗಿ ಸೌಲಭ್ಯ ಪಡೆದುಕೊಳ್ಳಬಹುದು.
ಹೆಚ್ಚಿನ ಮಾಹಿತಿಗಾಗಿ ಗ್ರಾಮ ಪಂಚಾಯಿತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು, ತಾಲ್ಲೂಕು ಪಂಚಾಯಿತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ, ವಿವಿದೊದ್ದೇಶ ಪುನರ್ವಸತಿ ಕಾರ್ಯಕರ್ತರು ಹಾಗೂ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳ ಕಚೇರಿ, ಜಿಲ್ಲಾ ಬಾಲ ಭವನ ಆವರಣ, ಸ್ಟೇಡಿಯಂ ರಸ್ತೆ, ಚಿತ್ರದುರ್ಗ ದೂರವಾಣಿ ಸಂಖ್ಯೆ 08194-235284/86ಗೆ ಸಂಪರ್ಕಿಸಬಹುದು ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜೆ. ವೈಶಾಲಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

 

[t4b-ticker]

You May Also Like

More From Author

+ There are no comments

Add yours