ಹಳೇ ವಿದ್ಯಾರ್ಥಿಗಳು ಏ. 27, 28 ರಂದು ಬಂದು ಸೂಕ್ತ ಮಾಹಿತಿಯನ್ನು ತಜ್ಞರ ತಂಡಕ್ಕೆ ನೀಡಬೇಕು:ಪ್ರಾಚಾರ್ಯ ಗುಡದೇಶ್ವರಪ್ಪ ಮನವಿ

 

 

 

 

ವರದಿ: ಸುರೇಶ್ ಪಟ್ಟಣ್
ಚಿತ್ರದುರ್ಗ,ಏ.೨೧

ಕಲಾ ಕಾಲೇಜಿಗೆ ತಜ್ಞರ ತಂಡ ಪೊಷಕರು ಹಾಗೂ ವಿದ್ಯಾರ್ಥಿಗಳ ಜೊತೆ ಚರ್ಚಿಸಿ ವರದಿಯನ್ನು ಅಂಕಗಳ ರೂಪದಲ್ಲಿ ನೀಡಲಿದೆ. ಅದಕ್ಕಾಗಿ ಹಳೇ ವಿದ್ಯಾರ್ಥಿಗಳು ಏ. ೨೭, ೨೮ ರಂದು ಬಂದು ಸೂಕ್ತ ಮಾಹಿತಿಯನ್ನು ತಜ್ಞರ ತಂಡಕ್ಕೆ ನೀಡಬೇಕೆಂದು ಸರ್ಕಾರಿ ಕಲಾ ಕಾಲೇಜಿನ ಪ್ರಾಚಾರ್ಯ ಗುಡುದೇಶ್ವರಪ್ಪ, ಮನವಿ ಮಾಡಿದರು.

ನಗರದ ಕಲಾ ಕಾಲೇಜಿನ ಸಭಾಂಗಣದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಬರದ ನಾಡು ಜಿಲ್ಲೆಯಲ್ಲಿ ಶೈಕ್ಷಣಿಕವಾಗಿ ಸಾಕಷ್ಟು ಸುಧಾರಣೆ ತರಲಾಗುತ್ತಿದೆ.ಸ್ನಾತಕ ಹಾಗೂ ಸ್ನಾತಕೋತ್ತರ ಪದವಿಗಳು ಇವೆ. ಇಂದಿನ ಶಿಕ್ಷಣಕ್ಕೆ ಅನುಗುಣವಾಗಿ ಶೈಕ್ಷಣಿಕ ಅಭಿವೃದ್ಧಿ ಮಾಡಲಾಗುತ್ತಿದೆ. ಈ ತಿಂಗಳ ಅಂತ್ಯಕ್ಕೆ ಸ್ಯಾಕ್ ಸಮಿತಿ ಬರಲಿದೆ ಎಂದರು.

 

 

೧೯೪೮ರಲ್ಲಿ ಕಲಾ ಕಾಲೇಜು ಪ್ರಾರಂಭ ಆಗಿದ್ದು, ಮೈಸೂರು ವಿವಿಯಲ್ಲಿ ಒಳ್ಳೆಯ ಹೆಸರು ಪಡೆದಿದೆ. ೪ ನೇ ಸೈಕಲ್‌ಗೆ ಹೋಗಲಿದೆ. ವಿ ವಿ ಗ್ರೇಡ್ ಹತ್ತಿರವಾಗಿದೆ. ನ್ಯಾಕ್ ನ ೩ ಜನರ ತಜ್ಞರ ತಂಡ ಚಿತ್ರದುರ್ಗಕ್ಕೆ ೨೬ ಕ್ಕೆ ಬಂದು ೨೭ ಹಾಗೂ ೨೮ ರಂದು ಇಲ್ಲಿನ ಕಾಲೇಜಿನ ೧೦೦೦ ಅಂಕಗಳಿಗೆ ಒಳಪಟ್ಟಂತೆ ಪರೀಶೀಲನೆ ಮಾಡಲಿದೆ. ಮೇ ಮೊದಲ ವಾರದಲ್ಲಿ ಫಲಿತಾಂಶ ಪ್ರಕಟ ಆಗಲಿದೆ ಇದ್ದಲ್ಲದೆ ೧.೨೭ ಲಕ್ಷ ಪುಸ್ತಕಗಳಿರುವ ಬಹು ದೊಡ್ಡ ಗ್ರಂಥಾಲಯ ಇಲ್ಲಿನ ಕಲಾ ಕಾಲೇಜಿನಲ್ಲಿ ಇದೆ ಎಂದರು.

ಈ ಬಾರಿ ಕಲಾ ಕಾಲೇಜು ಶೈಕ್ಷಣಿಕ ಎಲ್ಲಾ ರೀತಿಯ ಗುಣಮಟ್ಟದಲ್ಲಿ ದೇಶದಲ್ಲಿ ೨೧ನೇ ಸ್ಥಾನವನ್ನು ಪಡೆದಿದೆ. ೧೯-೨೦ರಲ್ಲಿ ೨೫ನೇ ಸ್ಥಾನದಲ್ಲಿತ್ತು. ಕಾಲೇಜಿನಲ್ಲಿ ಪಿಎಚ್‌ಡಿ ಮಾಡುವವರಿಗೆ ಉತ್ತಮವಾದ ಮಾರ್ಗದರ್ಶನವನ್ನು ನೀಡಲಾಗುತ್ತಿದೆ. ನಮ್ಮ ಹಲವಾರು ಜನ ಮಾರ್ಗದರ್ಶಕರಿದ್ದಾರೆ ಇವರ ಸಹಾಯದಿಂದ ನಮ್ಮ ವಿದ್ಯಾರ್ಥಿಗಳು ಪಿಎಚ್‌ಡಿ.ಯನ್ನು ಪಡೆಯುತ್ತಿದ್ದಾರೆ. ನಮ್ಮಲ್ಲಿ ೭ ಪಿಜಿ ಕೋರ್ಸ್ಗಳು ಕಾರ್ಯ ನಿರ್ವಹಿಸುತ್ತಿವೆ ಎಂದರು.

ಸರ್ಕಾರಿ ಕಲಾ ಕಾಲೇಜಿನ ಪ್ರಾಚಾರ್ಯರಾದ ಪ್ರೋ.ಸುರೇಶ್, ಕರಿಯಪ್ಪ ಮಾಳಿಗೆ ಗೋಷ್ಟಿಯಲ್ಲಿ ಭಾಗವಹಿಸಿದ್ದರು.

[t4b-ticker]

You May Also Like

More From Author

+ There are no comments

Add yours