ಸಿಡಿಲು ಬಡಿದು ಕಿರಿಗಾಹಿಯೊಬ್ಬ ಸ್ಥಳದಲ್ಲೆ ಸಾವು:ತಹಶೀಲ್ದಾರ್ ಎನ್.ರಘುಮೂರ್ತಿ ಭೇಟಿ ನೀಡಿ ಸಾಂತ್ವನ

 

 

 

 

.ಚಳ್ಳಕೆರೆ ತಾಲೂಕಿನ: ಸಿಡಿಲು ಬಡಿದು ಕಿರಿಗಾಹಿಯೊಬ್ಬ ಸ್ಥಳದಲ್ಲೆ ಮೃತಪಟ್ಟ ಘಟನೆ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕು ತಳಕು ಹೋಬಳಿಯ ದೇವರೆಡ್ಡಿಹಳ್ಳಿ ಗ್ರಾಮದಲ್ಲಿ ಭಾನುವಾರ ಸಂಜೆ ನಡೆದಿದೆ.
ಮೃತ ಯುವಕ ಯಶವಂತ(19).
ಭಾನುವಾರ ಸಂಜೆ 4:00 ಗಂಟೆಗೆ ಜೋರಾಗಿ ಬೀಸಿದ ಗಾಳಿ ಹಾಗೂ ಮಳೆ‌ಜೋರಾಗಿತ್ತು. ಕುರಿಕಾಯಲು ಹೋಗಿದ್ದ ಯುವಕ ಯಶವಂತ ಮಳೆಯನ್ನು ಕಂಡು ಕುರಿಗಳನ್ನು ಹೊಡೆದುಕೊಂಡು ಮರಳಿ‌ಮನೆಕಡೆಗೆ ವಾಪಸ್ ಬರುವಾಗ ದೇವರೆಡ್ಡಿ ಹಳ್ಳಿ ಗ್ರಾಮದ ಹೊರವಲಯದಲ್ಲಿ ಹುಣಸೆಮರದ ಕೆಳಗಡೆ ನಿಂತಿದ್ದಾನೆ. ಇದೇವೇಳೆ ಸಿಡಿಲು ಬಡಿದು ಸ್ಥಳದಲ್ಲೆ ಮೃತಪಟ್ಟಿದ್ದಾನೆ.
ವಿಷಯ ತಿಳಿದು ಚಳ್ಳಕೆರೆ ತಹಶೀಲ್ದಾರ್ ಎನ್.ರಘುಮೂರ್ತಿ, ತಳಕು ಪಿಎಸ್ ಐ. ಮಾರುತಿ ಸ್ಥಳಕ್ಕೆ ಭೇಟಿನೀಡಿ ಪರಿಶೀಲಿಸಿದ್ದಾರೆ.
ಭಾರೀ ಮಳೆ ಗಾಳಿಗೆ ತಾಲೂಕಿನ ಹಲವೆಡೆ ಜನ ಜೀವನ ಅಸ್ತವ್ಯಸ್ತವಾಗಿದೆ.

ಇಂದು ಸುರಿದ ಮಳೆಗೆ ತಾಲೂಕಿನ ನೇರ್ಲಗುಂಟೆ ಗ್ರಾಮದ ಕಾಟಹಳ್ಳಿಯಲ್ಲಿ ನಿರ್ಮಿಸಿದ್ದ ಶುದ್ದ ನೀರಿನ ಘಟಕ ಗಾಳಿಗೆ ಮೇಲ್ಚಾವಣಿ ಹಾರಿಹೊಗಿ ಅಪಾರ ಹಾನಿಯಾಗಿದೆ

 

 

ಅದರಂತೆ ಗಿರಿಯಮ್ಮನಹಳ್ಳಿ ವ್ಯಾಪ್ತಿಯ ನಾಗರಾಜ್ ಎಂಬುವವರಿಗೆ ಸೇರಿದ ಕೋಳಿ ಪಾರಂ ಗಾಳಿಗೆ ಹಾನಿಯಾಗಿದೆ

ಸುಮಾರು ಐದು ಸಾವಿರ ಕೋಳಿ ಸಾಕಾಣಿಕೆ ಮಾಡುತ್ತಿದ್ದರು ಎನ್ನಲಾಗಿದೆ , ಇನ್ನೇನು ಮುಂದಿನ ವಾರ ಮಾರುಕಟ್ಟೆಗೆ ಕಳಿಸಬೆಕಾದ ಐದು ಸಾವಿರ ಕೋಳಿಗಳು ಇರುವ ಶೇಡ್ ಮಳೆ ಗಾಳಿಗೆ ಹಾರಿಹೊಗಿದೆ.

ಸ್ಥಳಕ್ಕೆ ಚಳ್ಳಕೆರೆ ತಹಶೀಲ್ದಾರ್ ಎನ್ ರಘುಮೂರ್ತಿ ಬೇಟಿ ನೀಡಿ ಸ್ಥಳ ಪರೀಶಿಲನೆ ನಡೆಸಿ ಸರಕಾರದಿಂದ ಸಿಗುವ ಪರಿಹಾರ ಮೊತ್ತ‌ಕ್ಕೆ ಶಿಪಾರಸ್ಸು ಮಾಡಲಾಗುವುದು ಎಂದು ನೊಂದ ಮಾಲೀಕರಿಗೆ ಸಾಂತ್ವನ ಹೇಳಿ ದೈರ್ಯ ತುಂಬಿದ್ದಾರೆ. ನಂತರ ತಾಲೂಕಿನ ಜನತೆಯಲ್ಲಿ ಮಳೆ ಬರುವಂತಹ ಸಂದರ್ಭದಲ್ಲಿ ಬೃಹತ್ ಮರದಡಿ ನಂದ ಗೋಡೆಯ ಸಮೀಪ ಶಿಥಿಲಗೊಂಡ ಗೊಂಡ ಕಟ್ಟಡದ ಪಕ್ಕದಲ್ಲಿ ನಿಲ್ಲಬೇಡಿ ಮಳೆಯಿಂದಾಗಿ ನೆನೆದ ಗೋಡೆಗಳು ಬೀಳುವಂತಹ ಸಂದರ್ಭ ಇರುತ್ತದೆ ಎಂದು ಮನವಿ ಮಾಡಿದ್ದಾರೆ
ಹಾಗೇ ತಾಲೂಕು ಆಡಳಿತದ ಅಂದಾಜು ವರದಿಯ ಪ್ರಕಾರ ಚಳ್ಳಕೆರೆ ತಾಲ್ಲೂಕಿನ ತಳಕು ಹಾಗೂ ನಾಯಕನಹಟ್ಟಿ ಹೋಬಳಿಯಲ್ಲಿ ಅತಿಹೆಚ್ಚು ಸೀಟಿನ ಮನೆಗಳು ಹಳೆಯ ಮನೆಗಳು ದುರಸ್ಥಿಯಲ್ಲಿರುವ ಮನೆಗಳು ಇವೆ ಎಂದು ಕಂಡು ಬರುತ್ತಿದೆ. ಇನ್ನು ಮುಂದಿನ ದಿನಗಳಲ್ಲಿ ಮಳೆಗಾಲ ಆರಂಭವಾಗಲಿದೆ. ಹಾಗಾಗಿ ಆರಂಭದಲ್ಲಿ ಮಳೆಯ ಆರ್ಭಟ ಜೋರಾಗಿರುತ್ತದೆ ಹಾಗಾಗಿ ಸಾರ್ವಜನಿಕರು ಹಳೆಯ ಗೋಡೆಗಳ ಪಕ್ಕದಲ್ಲಿ ಮರಗಳ ಕೆಳಗಡೆ ವಿದ್ಯುತ್ ಪರಿವರ್ತಕಗಳ ಬಳಿ ಹಾಗೂ ವಿದ್ಯುತ್ ಕಂಬಗಳ ಬಳಿ ಮೊಬೈಲ್ ಗಳ ಟವರ್ ಬಳಿ ನಿಲ್ಲುವುದಾಗಿ ತಂಗುವುದು ಆಗಲಿ ಮಾಡಬಾರದು ಕಾರಣ ಎಲ್ಲಾ ತಾಣಗಳಲ್ಲಿ ಸಿಡಿಲಿನ ಆಕರ್ಷಣೆ ಹೆಚ್ಚಾಗಿರುತ್ತದೆ ಇದರಿಂದ ಪ್ರಾಣ ಹಾನಿ ಸಂಭವ ಹೆಚ್ಚಾಗಿರುತ್ತದೆ ಎಂದರು.

[t4b-ticker]

You May Also Like

More From Author

+ There are no comments

Add yours