ಸಿಡಿಪಿಓ ಮಲ್ಲೇಶ್ ಅವರನ್ನು ಕೂಡಲೇ ಅಮಾನತುಗೊಳಿಸಿ: ತಾಲೂಕು ಅಂಗನವಾಡಿ ಕಾರ್ಯಕರ್ತೆಯರ ಸಂಘ ಆಗ್ರಹ

 

 

 

 

ವರದಿ: ಎಸ್.ವೇದಮೂರ್ತಿ ಹೊಳಲ್ಕೆರೆ

 

 

ಹೊಳಲ್ಕೆರೆ : ತಾಲೂಕು ಅಂಗನವಾಡಿ ಕಾರ್ಯಕರ್ತೆಯರಿಗೆ ಕಿರುಕುಳ ನೀಡಿ ಆಕ್ರಮ ಹಣ ವಸೂಲಿ ದಂದೆಯಲ್ಲಿ ತೊಡಗಿಸಿಕೊಂಡ ತಾಲೂಕು ಸಿಡಿಪಿಓ ಮಲ್ಲೇಶ್ ನನ್ನು ಕೂಡಲೆ ಅಮಾನತುಗೊಳಿಸಬೇಕು ಎಂದು ಆಗ್ರಹಿಸಿ ಹೊಳಲ್ಕೆರೆ ತಾಲೂಕು ಅಂಗನವಾಡಿ ಕಾರ್ಯಕರ್ತೆಯರ ಸಂಘದಿಂ: ದ ಸಿಡಿಪಿಓ ಕಚೇರಿ ಮುತ್ತಿಗೆ ಹಾಕಿ ಗುರುವಾರ ಪ್ರತಿಭಟನೆ ನಡೆಸಲಾಯಿತ್ತು.

ತಾಲೂಕು ಅಂಗನವಾಡಿ ಕಾರ್ಯಕರ್ತೆರಿಂದ ಸಿಡಿಪಿಓ ಮಲ್ಲೇಶ್ ಅಕ್ರಮವಾಗಿ ಹಣ ವಸೂಲಿ ಮಾಡುವ ಉದ್ದೇಶದಿಂದ ಇಲ್ಲದ ಸಲ್ಲದ ಕಿರುಕುಳ ನೀಡುತ್ತಿದ್ದಾರೆ. ಇದರಿಂದಾಗಿ ಅಂಗನವಾಡಿಗಳಲ್ಲಿ ಕಾರ್ಯಕರ್ತೆಯರು ಕರ್ತವ್ಯ ನಿರ್ವಹಣೆ ಅಸಾಧ್ಯ ಎನ್ನುವಂತ ಸ್ಥಿತಿ ನಿರ್ಮಾಣವಾಗಿದೆ. ಕೇಂದ್ರಗಳಿಗೆ ಭೇಟಿ ನೀಡಿದಾಗ ಅನಗತ್ಯವಾಗಿ ಕಿರುಕುಳ ನೀಡುವ ಮೂಲಕ ಹಣ ವಸೂಲಿ ದಂಧೆ ತೊಡಗಿದ್ದು, ಸಿಡಿಪಿಓ ಕಚೇರಿ ಎನ್ನುವುದು ಭ್ರಷ್ಟಾಚಾರ ತಾಣವಾಗಿದೆ ಎಂದು ಪ್ರತಿಭಟನಾ ನಿರತರ ಕಾರ್ಯಕರ್ತರು ಸಿಡಿಪಿಓ ವಿರುದ್ದ ಆಕ್ರೋಶ ವ್ಯಕ್ತಪಡಿಸಿರು.
ಇಲಾಖೆಯ ವ್ಯಾಪ್ತಿಯಲ್ಲಿ ವ್ಯಾಪಕ ಭ್ರಷ್ಟಾಚಾರದ ಪರಿಣಾಮ ಅಂಗನವಾಡಿ ಕಾರ್ಯಕರ್ತರಿಗೆ ತುಂಭ ತೊಂದರೆಯಾಗಿದೆ. ಸಣ್ಣಪುಟ್ಟ ಕೆಲಸಗಳನ್ನು ಕಚೇರಿಯಲ್ಲಿ ಮಾಡಿಸಿಕೊಳ್ಳಲು ಹಣ ನೀಡುವಂತ ಸ್ಥಿತಿ ನಿರ್ಮಾಣವಾಗಿದೆ. ಅಂಗನವಾಡಿ ಕಾರ್ಯಕರ್ತೆಯರು ಕಚೇರಿಗೆ ಬಂದಾಗ ಅವರನ್ನು ಅಮಾನೀಯವಾಗಿ ನಡೆಸಿಕೊಳ್ಳುವ ಮೂಲಕ ಅವಮಾನ ಮಾಡುತ್ತಿದ್ದಾರೆ. ಪ್ರಮಾಣಿಕವಾಗಿ ಕರ್ತವ್ಯ ನಿರ್ವಹಿಸುವ ಕಾರ್ಯಕತೆÀðಯ ವಿರುದ್ದ ಸುಳ್ಳು ಆರೋಪ ಹೊರಿಸುತ್ತಿದ್ದಾರೆ. ತಿಂಗಳ ಮಾಮೂಲು ನೀಡುವಂತೆ ಸಿಡಿಪಿಓ ಮಲ್ಲೇಶ್ ಕಾರ್ಯಕರ್ತೆಯರಿಗೆ ತಾಕಿತು ಮಾಡುತ್ತಿದ್ದಾರೆ. ಕರ್ತವ್ಯ ನಿರ್ವಹಿಸಿದರೂ ಅನಗತ್ಯವಾಗಿ ಕಿರುಕುಳದಿಂದ ಕಾರ್ಯಕರ್ತೆ ಬೇಸತ್ತು ಅತ್ಮಹತ್ಯೆ ಮಾಡಿಕೊಳ್ಳುವಂತ ಸ್ಥಿತಿ ನಿರ್ಮಾಣವಾಗಿದೆ ಎಂದು ಪ್ರತಿಭಟನಾ ನಿರತರು ಆಕ್ರೋಶ ವ್ಯಕ್ತಪಡಿಸಿದರು.
ಹೊಳಲ್ಕೆರೆ ತಾಲೂಕಿನ ಅಂಗನವಾಡಿ ಸಾಹಯಕಿಯರಿಗೆ ಕಾರ್ಯಕರ್ತರಾಗಿ ಮುಂಬಡ್ತಿ ನೀಡಲು ಲಕ್ಷಾಂತರ ಹಣವನ್ನು ವಸೂಲಿ ಮಾಡುತ್ತಿದ್ದಾರೆ. ಬಡ್ತಿ ಕೇಳಲು ಹೊದವರಿಗೆ ಹಣ ಕೊಟ್ಟವರಿಗೆ ಬಡ್ತಿ ನೀಡಲಾಗುತ್ತದೆ ಎಂದು ಹೇಳುತ್ತಿದ್ದಾರೆ. ಬಡ್ತಿ ನೀಡುವ ದಂದೆಯಲ್ಲಿ ತೊಡಗಿಸಿಕೊಂಡಿರುವ ಸಿಡಿಪಿಓ ಮಲ್ಲೇಶ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು
ಅಂಗನವಾಡಿ ಕೇಂದ್ರಗಳಿಗೆ ಪೂರೈಕೆಯಾಗುತ್ತಿರುವ ಆಹಾರದಲ್ಲಿ ಕಳಪೆಯಾಗಿದ್ದು, ಮತ್ತು ಕಡಿಮೆ ಪ್ರಮಾಣದಲ್ಲಿ ಆಹಾರ ಪೂರೈಕೆ ಮಾಡಲಾಗುತ್ತಿದೆ. ಮೊಟ್ಟೆ ಹಣ್ಣು ಮತ್ತಿತರ ಬಿಲ್ ಪಡೆದುಕೊಳ್ಳಲು ಸಿಡಿಪಿಓ ಕಚೇರಿಯಲ್ಲಿ ಕಮಿಷನ್ ನೀಡಬೇಕಾಗಿದೆ. ಹಣ ನೀಡದಿದ್ದಲ್ಲಿ ಯಾವುದೇ ಒಂದು ಕೆಲಸವನ್ನು ಸಿಡಿಪಿಓ ಕಚೇರಿಯಲ್ಲಿ ಅಂಗನವಾಡಿ ಕಾರ್ಯಕರ್ತರಿಗೆ ಮಾಡಿಕೊಡುತ್ತಿಲ್ಲ. ಬ್ರಷ್ಟಾಚಾರದಲ್ಲಿ ತೊಡಗಿಸಿಕೊಂಡಿರುವ ಸಿಡಿಪಿಓ ಮಲ್ಲೇಶ್ ಅವರನ್ನು ಅಮಾನತುಗೊಳಿಸಿ ತಾಲೂಕಿನ ಅಂಗನವಾಡಿ ಕಾರ್ಯಕರ್ತರಿಗೆ ಸೂಕ್ತ ರಕ್ಷಣೆ ನೀಡಬೇಕಾಗಿದೆ ಎಂದು ಜಿಲ್ಲಾಢಳಿತರಕ್ಕೆ ಕಾರ್ಯಕತೆÀðರು ಆಗ್ರಹಿಸಿದ್ದಾರೆ.
ಪ್ರತಿಭಟನೆ ನೆತೃತ್ವವನ್ನು ಅಂಗನವಾಡಿ ಕಾರ್ಯಕರ್ತೆಯರು ಸಂಘದ ಕಾರ್ಯದರ್ಶಿ ಅಧ್ಯಕ್ಷೆ ನಿರ್ಮಾಲ, ಗಂಗಮ್ಮ, ಮುಖಂಡರಾದ ಸಜೀದ್, ಕಮಲಮ್ಮ, ಉಪಾಧ್ಯಕ್ಷರಾದ ಅಮಿನಾಬಿ, ಎಂ.ಶಾAತಕುಮಾರಿ, ಸಂಚಾಲಕಿ ಟಿ.ಚಂದ್ರಮತಿ, ಸಹ ಕಾರ್ಯದರ್ಶಿ ಸುಮಿತ್ರಮ್ಮ, ವೈ.ಶಾರದಮ್ಮ, ಸೇರಿದಂತೆ ನೂರಾರು ಕಾರ್ಯಕರ್ತೆಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

[t4b-ticker]

You May Also Like

More From Author

+ There are no comments

Add yours