ಸರ್ಕಾರಿ ಕೆಲಸ ದೇವರ ಕೆಲಸ, ನಿಷ್ಠೆ ಹಾಗೂ ನ್ಯಾಯಸಮ್ಮತಾಗಿ ಕೆಲಸ ಮಾಡೋಣ: ಡಿಸಿ ಕವಿತಾ ಎಸ್.ಮನ್ನಿಕೇರಿ

 

 

 

 

ವರದಿ:ಸುರೇಶ್ ಪಟ್ಟಣ್ 

ಚಿತ್ರದುರ್ಗ, ಏ.೨೧

ಸರ್ಕಾರಿ ಕೆಲಸ ದೇವರ ಕೆಲಸ ಎಂದು ಹೇಳಲಾಗುತ್ತದೆ ಅದರಂತೆ ನಿಷ್ಟೆ ಹಾಗೂ ನ್ಯಾಯಸಮ್ಮತವಾಗಿ ನಾವುಗಳು ಕೆಲಸ ಮಾಡಬೇಕು ಎಂದು ಜಿಲ್ಲಾಧಿಕಾರಿ ಕವೀತಾ ಎಸ್. ಮನ್ನಿಕೆರೆ ಕರೆ ನೀಡಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಇಂದು ಹಮ್ಮಿಕೊಂಡಿದ್ದ ರಾಜ್ಯ ಸರ್ಕಾರಿ ನೌಕರರ ದಿನಾಚರಣೆ ಹಾಗೂ ಸರ್ವೋತ್ತಮ ಸೇವಾ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಸ್ತುತ ಸರ್ಕಾರಿ ಕೆಲಸ ಸಿಗುವುದು ಬಹಳ ಕಷ್ಟ. ಅಂತಹದರಲ್ಲಿ ನಮಗೆ ಸರ್ಕಾರಿ ಕೆಲಸ ಸಿಕ್ಕಿರುವುದು ಸೌಭಾಗ್ಯ. ಇಂಜಿನಿಯರ್ ವ್ಯಾಸಾಂಗ ಮಾಡಿದವರು ಕೂಡ ಇಂದು ಡಿ ಗ್ರೂಪ್ ಕೆಲಸ ಸಿಕ್ಕರೆ ಸಾಕು ಎಂದು ಭಯಸುತ್ತಿದ್ದಾರೆ. ಆದ್ದರಿಂದ ನಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ ನಿರ್ಭಿತಿಯಿಂದ, ನ್ಯಾಯಯುತವಾಗಿ ಕೆಲಸ ಮಾಡಬೇಕು ಎಂದು ಹೇಳಿದರು.

 

 

ಕೆಲಸದ ಒತ್ತಡವನ್ನು ಧೈರ್ಯವಾಗಿ ನಿಭಾಯಿಸಬೇಕು. ಕಡತಗಳ ಬಗ್ಗೆ ಕಾಳಜಿ ಇರಬೇಕು. ಸಾರ್ವಜನಿಕ ಸೇವೆಯನ್ನು ನ್ಯಾಯಯುತವಾಗಿ ಮಾಡಿ, ಜನರನ್ನು ಕಾಯಿಸುವುದು, ಅಲೆದಾಡಿಸುವುದನ್ನು ಮಾಡದೆ ಸಮಯಕ್ಕೆ ಸರಿಯಾಗಿ ಕೆಲಸ ಮಾಡಿಕೊಡಬೇಕು ಎಂದು ತಿಳಿಸಿ ನಿಮ್ಮ ಕೆಲಸದ ಸಮಯದಲ್ಲಿ ಯಾವುದೇ ರೀತಿಯ ಕಪ್ಪು ಚುಕ್ಕೆ ಬಾರದಂತೆ ಎಚ್ಚರವಹಿಸಿ ಕೆಲಸವನ್ನು ಮಾಡಿ ಎಂದು ಕಿವಿ ಮಾತು ಹೇಳಿದರು.

ಜಿಲ್ಲಾ ಪಂಚಾಯಿತಿ ಸಿಇಓ ಡಾ.ಕೆ.ನಂದೀನಿ ದೇವಿ ಮಾತನಾಡಿ, ಕರ್ತವ್ಯದಲ್ಲಿ ನಮ್ಮ ಜವಬ್ದಾರಿ ಸರಿಯಾಗಿ ನಿಭಾಯಿಸಬೇಕು. ಪ್ರತಿದಿನ ಕೆಲಸದಲ್ಲಿ ಒತ್ತಡ ಇರುವುದು ಸಹಜ. ಅದನ್ನು ನಿಭಾಯಿಸುವದರ ಜೊತೆಗೆ ಕುಟುಂಬದ ಸದಸ್ಯರ ಜೊತೆಗೂ ಹೆಚ್ಚಿನ ಸಮಯ ಇರಬೇಕು. ಇದಕ್ಕಾಗಿ ದೈಹಿಕವಾಗಿ ಹಾಗೂ ಮಾನಸಿಕವಾಗಿ ಸದೃಡರಾಗಿರಬೇಕು ಎಂದು ಸಲಹರ ನೀಡಿದರು.

ಎಲ್ಲಾ ಇಲಾಖೆಯಲ್ಲೂ ಉತ್ತಮ ಕೆಲಸ ಮಾಡುವ ನೌಕರರು ಇದ್ದು, ಅವರನ್ನು ಗುರುತಿಸುವ ಕೆಲಸವನ್ನುಇಲಾಖೆಯ ಮುಖ್ಯಸ್ಥರು ಮಾಡಬೇಕು. ಆಗ ಅವರಿಗೂ ಕೂಡ ಹೆಚ್ಚಿನ ಸೇವೆ ಮಾಡಲು ಉತ್ಸಾಹ ಬರಲಿದೆ ಎಂದು ಹೇಳಿದರು.

ಜಿಲ್ಲಾ ರಕ್ಷಾಣಾಧಿಕಾರಿ ಕೆ.ಪರಶುರಾಮ್ ಮಾತನಾಡಿ, ಬಹುಮಾನ ಹಾಗೂ ಶಿಕ್ಷೆ ಎರಡು ಕೂಡ ವ್ಯಕ್ತಿಯನ್ನು ಎಚ್ಚಿತ್ತು ಕೊಳ್ಳುವಂತೆ ಮತ್ತು ಉನ್ನತ ಸ್ಥಾನವನ್ನು ಅಲಂಕರಿಸುವAತೆ ಮಾಡಲಿದ್ದು, ಜನರಿಗೆ ನ್ಯಾಯ ಒದಗಿಸಿಕೊಡುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಿ ಎಂದು ತಿಳಿಸಿದರು.

ಸರ್ಕಾರಿ ನೌಕರರು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗಟ್ಟಿಗೊಳಿಸಲು ಹಾಗೂ ಜನರ ಕಷ್ಠಗಳಿಗೆ ಸ್ಪಂದಿಸಿ ಕೆಲಸ ಮಾಡಬೇಕಿದೆ ಎಂದು ಹೇಳಿದ ಅವರು, ಪ್ರಶ್ನಾತೀತರು ಎಂದು ಹೇಳುತ್ತಿದ್ದ ನೌಕರರನ್ನು ಇಂದು ಮಾಹಿತಿ ತಂತ್ರಜ್ಞಾನ, ಆರ್ ಟಿ ಐ ನಿಂದ ಪ್ರಶ್ನಿಸುವಂತಾಗಿದೆ. ಆದ್ದರಿಂದ ಸದಾ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಎಡಿಸಿ ಬಾಲಕೃಷ್ಣ, ಜಿ.ಪಂ.ಡಿಎಸ್ ರಂಗಸ್ವಾಮಿ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ಮಂಜುನಾಥ್,ಪ್ರದೀಪ್ ಕುಮಾರ್, ಲೋಕೇಶ್, ಜಗನ್ನಾಥ್, ಶಿವಕುಮಾರ್ ಸೇರಿದಂತೆ ಇತರರು ಹಾಜರಿದ್ದರು.

[t4b-ticker]

You May Also Like

More From Author

+ There are no comments

Add yours