ಸರ್ಕಾರದ ಆಶಯದಂತೆ ಸಮಸ್ಯೆ ಮುಕ್ತ ಗ್ರಾಮಕ್ಕೆ ಪಣ ,ಚಳ್ಳಕೆರೆ ತಹಶೀಲ್ದಾರ್ ಎನ್.ರಘುಮೂರ್ತಿ ಕಾರ್ಯಕ್ಕೆ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ‌ ಮೆಚ್ಚುಗೆ

 

 

 

 

ಚಳ್ಳಕೆರೆ:ಸರ್ಕಾರ ಆಶಯದಂತೆ ಸಮಸ್ಯೆ ಮುಕ್ತ ಗ್ರಾಮಗಳ ಕಡೆ ಹೆಜ್ಜೆ ಹಾಕುತ್ತಿದ್ದು ಎಲ್ಲಾ ಗ್ರಾಮಗಳು ಸಹ ಸಮಸ್ಯೆ ಮುಕ್ತವಾಗಬೇಕು ಎಂದು ಜಿಲ್ಲಾಧಿಕಾರಿ ಕವಿತಾ ಎಸ್‌.ಮನ್ನಿಕೇರಿ ಹೇಳಿದರು.

ತಾಲೂಕಿನ ಗಡಿಯಲ್ಲಿರುವ  ಓಬಣ್ಣನಹಳ್ಳಿ ಗ್ರಾಮದಲ್ಲಿ‌ ಇಂದು  ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಜಿಲ್ಲಾಧಿಕಾರಿಗಳ ಗ್ರಾಮವಾಸ್ತವ್ಯ ಕಾರ್ಯಕ್ರಮ  ಉದ್ಘಾಟಿಸಿ ಮಾತನಾಡಿದರು.

 

 

ಜಿಲ್ಲಾಧಿಕಾರಿ ಕವಿತಾ ಎಸ್ ಮನಿಕೇರಿ ಮಾತನಾಡಿ ಮಾತನಾಡಿ ತಾಲೂಕಿನಲ್ಲಿ ಸರ್ಕಾರದ ಆಶಯದಂತೆ ಸಮಸ್ಯೆ ಮುಕ್ತ ಗ್ರಾಮಗಳನ್ನಾಗಿ ಮಾಡಲಾಗುತ್ತಿದ್ದೇವೆ. ಸರ್ಕಾರಿ ಅಧಿಕಾರಿಗಳು  ತುಂಬಾ ಜವಾಬ್ದಾರಿಯಿಂದ  ಇಂದಿನ ಗ್ರಾಮಗಳಿಗೆ ಭೇಟಿ ನೀಡಿ ಗ್ರಾಮಗಳ ಸಮಸ್ಯೆಯನ್ನು ಅರಿದು ಬಗೆಹರಿಸುತ್ತಿರುವುದು ಸಂತೋಷದ ವಿಚಾರವಾಗಿದೆ.   ಅದರಂತೆ ಇಂದು ಓಬಣ್ಣನಹಳ್ಳಿ ಗ್ರಾಮದಲ್ಲಿ ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ನನ್ನನ್ನು ಆಹ್ವಾನಿಸಿದ್ದರು. ಜನರು ಸಮಸ್ಯೆ ಮುಕ್ತ ಗ್ರಾಮಗಳಿದ್ದರೆ ಜನರು ಅಲೆದಾಟ ತಪ್ಪುತ್ತದೆ. ಸರ್ಕಾರದ ಆಶಯದಂತೆ ಕೆಲಸ ಮಾಡುತ್ತಿದ್ದು ಚಳ್ಳಕೆರೆ ತಹಶೀಲ್ದಾರ್ ರಘುಮೂರ್ತಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ಶಾಸಕರ ಸಚಿವರ ಸಹಕಾರ ನೀಡುತ್ತಿದ್ದು  ಎಲ್ಲಾ ಗ್ರಾಮಗಳು ಸಹ ಸಮಸ್ಯೆ ಮುಕ್ತ ಗ್ರಾಮದ ಕಡೆ ಹೆಜ್ಜೆ ಹಾಕಬೇಕಿದೆ ಎಂದರು.

ಐತಿಹಾಸಿಕ ಮುರುಘಾ ಮಠಕ್ಕೆ ಉತ್ತರಾಧಿಕಾರಿಯಾಗಿ ಬಸವಾದಿತ್ಯ ಆಯ್ಕೆ

ತಹಶೀಲ್ದಾರ ಎನ್.ರಘುಮೂರ್ತಿ  ಮಾತನಾಡಿ  ಸರ್ಕಾರ ಮತ್ತು ಸಚಿವರು. ಶಾಸಕರು ಹಾಗೂ ಜಿಲ್ಲಾಧಿಕಾರಿಗಳ ಆಶಯದಂತೆ ಈಗಾಗಲೆ ತಾಲ್ಲೂಕಿನಲ್ಲಿ 32 ಸಮಸ್ಯೆ ಮುಕ್ತ ಗ್ರಾಮಗಳನ್ನಾಗಿ ಮಾಡಿಲಾಗಿದ್ದು ಉಳಿದಂತೆ ಮುಂದಿನ ದಿನಗಳಲ್ಲಿ ಉಳಿದಂತಹ  ಗ್ರಾಮಗಳನ್ನು ಸಮಸ್ಯೆ ಮುಕ್ತ ಗ್ರಾಮಗಳನ್ನಾಗಿ ಮಾಡಲಾಗುವುದು.  ಗ್ರಾಮದಲ್ಲಿ ಪೋಡಿ ,ಪಿಂಚಣಿ, ಖಾತೆ ,ಸಂಧ್ಯಾ ಸುರಕ್ಷ , ವಿಧವಾ ವೇತನ, ವಿಕಲಚೇತನ ವೇತನ, ಗ್ರಾಮದಲ್ಲಿ ಸ್ವಚ್ಛತೆ ಚರಂಡಿ ಹಾಗೂ ನಿವೇಶನ ಸೇರಿದಂತೆ ಮೂಲಸೌಕರ್ಯಗಳನ್ನು ಪರಿಶೀಲಿಸಿ ಇತ್ಯರ್ಥಪಡಿಸಲಾಗಿದೆ. ಈಗಾಗಲೇ ಈ ಗ್ರಾಮಕ್ಕೆ ಆರೋಗ್ಯ ಸಹಾಯಕಿ , ನಿವೇಶನ .ಬಸ್ ವ್ಯವಸ್ಥೆ ಕಲ್ಪಿಸಿ ಎಂದು ಮನವಿ ಸಲ್ಲಿಸಿದ್ದು  ಬರುವ ದಿನಗಳಲ್ಲಿ ಎಲ್ಲಾ ಸಮಸ್ಯೆಗಳನ್ನು ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಈ ಕಾರ್ಯಕ್ರಮ್ಮಕ್ಕೂ  ಮುನ್ನ ಗ್ರಾಮಕ್ಕೆ ಜಿಲ್ಲಾಧಿಕಾರಿಗಳು ಆಗಮಿಸುತ್ತಿದ್ದಂತೆ ಗ್ರಾಮಸ್ಥರು ಜಿಲ್ಲಾಧಿಕಾರಿಗಳು ಹಾಗೂ ತಹಶೀಲ್ದರ್ ಎನ್.ರಘುಮೂರ್ತಿ ಯವರನ್ನು ಶೃಂಗಾರಗೊಂಡ ಜೋಡೆತ್ತಿನ ಗಾಡಿಯಲ್ಲಿ ಕುಂಭಮೇಳ ದೊಂದಿಗೆ ವಿವಿಧ ವಾದ್ಯಗಳ ಮೂಲಕ ಕಾರ್ಯಕ್ರಮದ ಸಭೆಗೆ ಕರೆತರಲಾಯಿತು. ಈ ಸಂದರ್ಭದಲ್ಲಿ ಜೆಸಿಬಿ ಯಂತ್ರದ ಮೇಲಿಂದ ಸಭೆಗೆ ಬರುವ ಜಿಲ್ಲಾಧಿಕಾರಿಗಳಿಗೆ ಹೂಮಾಲೆಯನ್ನು ಅರ್ಪಿಸಿದರು ನಂತರ ಉದ್ಘಾಟಿಸಿದರು.

[t4b-ticker]

You May Also Like

More From Author

+ There are no comments

Add yours