ಸಮಾಜದಲ್ಲಿ ಬೇರು ಬಿಟ್ಟಿರುವ ಜಾತಿ ಪದ್ದತಿ ತೊಗಲಬೇಕು:ಶ್ರೀ ಡಾ.ಶಾಂತವೀರ ಮಹಾಸ್ವಾಮೀಜಿ

 

 

 

 

ವರದಿ: ಎಸ್.ವೇದಮೂರ್ತಿ
ಹೊಳಲ್ಕೆರೆ : ಸಮಾಜದಲ್ಲಿ ಬೇರು ಬಿಟ್ಟಿರುವ ಜಾತಿ ಪದ್ದತಿ ತೊಗಲಬೇಕು. ಇಲ್ಲವಾದಲ್ಲಿ ಮಾನುಕುಲ ಉಳಿಯುವುದು ಆಸಾಧ್ಯ ಎಂದು ಹೊಸದುರ್ಗ ಕುಂಚಿಟಿಗ ಮಹಾಸಂಸ್ಥಾನದ ಶ್ರೀ ಡಾ.ಶಾಂತವೀರ ಮಹಾಸ್ವಾಮಿಗಳು ಅಭಿಪ್ರಾಯ ವ್ಯಕ್ತಪಡಿಸಿದರು.

ಪಟ್ಟಣದ ಕನ್ನಡ ಭವನದ ಆವರಣದಲ್ಲಿ ಶನಿವಾರ ನಡೆದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರ ಸೇವಾ ಪದಗ್ರಹಣ ಹಾಗೂ ಕನ್ನಡ ಮಾಧ್ಯಮ ಮತ್ತು ಕನ್ನಡ ಸಾಹಿತ್ಯ ವಿಚಾರಗೋಷ್ಠಿ ಸಮಾರಂಭ ಉದ್ಘಾಟನಾ ಸಭೆಯ ಸಾನಿಧ್ಯ ವಹಿಸಿ ಮಾತನಾಡಿದರು.

ಆಧುನಿಕ ಅವಿಷ್ಕರ ಜತೆ ಮಾನವೀಯ ಸಂಬಂಧಗಳನ್ನು ಉಳಿಸಿಕೊಳ್ಳಬೇಕು. ಅತಿಯಾದ ವಿಜ್ಞಾನ ಬೆಳವಣಿಗೆ ಮನುಕುಲದ ಬದುಕಿಗೆ ಹಾಗೂ ಬೆಳವಣಿಗೆಗೆ ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ಅದರ ಮಹತ್ವದ ಅರಿವಿಲ್ಲದೆ ಅನಗತ್ಯವಾಗಿ ವಿಜ್ಞಾನವನ್ನು ಅವಿಷ್ಕರಿಸಿದಲ್ಲಿ ಭಾಷೆ, ಧರ್ಮ, ಬದುಕು ಎಲ್ಲಾವನ್ನು ಕಳೆದುಕೊಳ್ಳುವ ಕಾಲ ಸನ್ನಿತವಾಗಿದೆ ಎಂಧರು.

ಇಂದು ಎಲ್ಲಾ ಕ್ಷೇತ್ರದಲ್ಲಿ ಜಾತಿ ವ್ಯವಸ್ಥೆ ಮುಗಿಲು ಮುಟ್ಟಿದೆ. ಸೇವಾ ವಲಯಗಳು ಭ್ರಷ್ಟಾಚಾರದಲ್ಲಿ ಮುಳುಗಿವೆ. ಎಲ್ಲಾ ಕ್ಷೇತ್ರದಲ್ಲೂ ನಮ್ಮ ಸಮುದಾಯದವರು ಅಧಿಕಾರವನ್ನು ಪಡೆಯಬೇಕು ಎನ್ನುವ ಚಿಂತನೆ ಮಠ ಮಂದಿರ ಎನ್ನದೆ ಎಲ್ಲಾ ಕ್ಷೇತ್ರಕ್ಕೆ ಕಾಲಿಟ್ಟಿದೆ. ಮನುಷ್ಯ ಜಾತಿ ಸಂಕೋಲೆಯಿAದ ಹೊರ ಬಂದಾಗ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ, ಜಾತಿವಾದ ಸಿದ್ದಾಂತ ಜಾತಿಗಳ ಸಂಕರ್ಷಗಳಿಗೆ ಎಡೆಮಾಡಿಕೊಡಲಿದೆ ಎಂದರು.

ಕನ್ನಡ ಸಾಹಿತ್ಯ ಜನ ಸಾಮಾನ್ಯರ ಸಾಹಿತ್ಯ ಆಗಬೇಕು. ಯುವ ಪೀಳಿಗೆ ಇಂದು ಕನ್ನಡ ಭಾಷೆ ಸಾಹಿತ್ಯದ ಬಗ್ಗೆ ಆಸಕ್ತಿ ಇಲ್ಲ. ಕನ್ನಡ ಸಾಹಿತ್ಯವನ್ನು ಓದುವಂತೆ ಪ್ರೇರೇಪಿಸಬೇಕು. ಇಂದು ತಂತ್ರಜ್ಞಾನ ಶರವೇಗದಲ್ಲಿ ಬೆಳೆಯುತ್ತಿದೆ. ವಿಶ್ವವನ್ನು ಅಂಗೈಲಿ ನೋಡಬಹುದು. ಆದರೆ ರೈತರ ಬದುಕು ಸಂಕಷ್ಟದಲ್ಲಿದೆ. ಶ್ರಮದಾಯಕವಾಗಿದೆ. ಬೆಳೆಗಳಿಗೆ ಉತ್ತಮ ಬೆಲೆ ಸಿಗುತ್ತಿಲ್ಲ. ಈಗಲೂ ಸಹ ಕಳೆದ ೧೦-೧೫ ವರ್ಷಗಳ ಹಿಂದೆ ನೀಡುತ್ತಿದ್ದ ಬೆಲೆಗೆ ರೈತ ತೃಪ್ತಿ ಪಡುವ ಸ್ಥಿತಿ ಇದೆ. ರೈತರಿಗೆ ಲಾಭವಾಗುವಂತ ವಿಜ್ಞಾನ ಮಾತ್ರ ಇನ್ನು ಬೆಳೆದಿಲ್ಲ. ರಾಜಕೀಯ, ಧಾರ್ಮಿಕ ಕೇಂದ್ರ, ಮಠ, ಸಾಹಿತ್ಯ ಪರಿಷತ್ ಮುಂತಾದವುಗಳು ಸೇವಾ ವಲಯಗಳಾಗಿದ್ದು, ಅಲ್ಲಿ ಜನರ ಸೇವೆಯೇ ಪರಮಗುರಿಯಾಗಿರಬೇಕು. ಆದರೆ ಇಂದು ಎಲ್ಲ ಕ್ಷೇತ್ರದಲ್ಲೂ ತಮ್ಮ ಸಮುದಾಯದವರು ಅಧಿಕಾರವನ್ನು ಪಡೆಯಬೇಕು ಎನ್ನುವುದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿರು.

 

 

ಶಾಸಕ ಎಂ. ಚಂದ್ರಪ್ಪ ಮಾತನಾಡಿ, ರಾಜಕೀಯದಿಂದ ನಿವೃತ್ತಿಯಾಗಬೇಕೆಂದು ಪೂಜ್ಯರಲ್ಲಿ ಅಭಿಪ್ರಾಯ ವ್ಯಕ್ತ ಪಡಿಸಿದಾಗ ಅವರು ಇನ್ನೊಷ್ಟು ಕಾಲ ನೀವು ಅಧಿಕಾರದಲ್ಲಿ ಇರಬೇಕು. ಅದರಿಂದ ಸಾಮಾಜದ ಕಲ್ಯಾಣ ಸಾಧ್ಯ ಎಂದರು. ಅಧಿಕಾರ ಎಂಬುದು ದೈವ ಸ್ವರೂಪವಾಗಿದೆ. ಅದು ಸಿಕ್ಕಾಗ ಶಕ್ತಿ ಮೀರಿ ಕೆಲಸ ಮಾಡಬೇಕು. ಅಧಿಕಾರದ ಅವಧಿಯನ್ನು ಸಾರ್ವಜನಿಕರಿಗೆ ಧಾರೆ ಎರೆಯಬೇಕು. ಅಧಿಕಾರ ಸಿಗುವುದಕ್ಕು ಮುನ್ನ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತೇನೆ ಎಂದು ಹೇಳುವುದು ಮುಖ್ಯ ಅಲ್ಲ. ಅಧಿಕಾರ ಸಿಕ್ಕಮೇಲೆ ಯಾವ ರೀತಿ ಜನರ ಸೇವೆ ಮಾಡುತ್ತೇವೆ ಎಂಬುದು ಮುಖ್ಯ ಆಗುತ್ತೆ. ವಾಣಿ ವಿಲಾಸ ಸಾಗರದಿಂದ ೩೬೭ ಕೋಟಿ ರೂ. ವೆಚ್ಚದಲ್ಲಿ ತಾಲೂಕಿನ ಪ್ರತಿಯೊಂದು ಮನೆಗಳಿಗೂ ಶುದ್ಧ ಕುಡಿಯುವ ನೀರನ್ನು ಒದಗಿಸಲಾಗುವುದು ಎಂದು ಹೇಳಿದರು.

ಪ್ರಜಾಪ್ರೀತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾನಿಲಯದ ಸಂಚಾಲಕರಾದ ಸುಮಿತ್ರಕ್ಕೆ ಮಾತನಾಡಿ, ಶಾಂತಿ ಸಂಧೇಶ ವಿಶ್ವಕ್ಕೆ ಬೇಕು. ಇಂದು ವಿಶ್ವದಲ್ಲಿ ಆಶಾಂತಿ ಸೃಷ್ಠಿಯಾಗಿದೆ. ವಿಶ್ವದಲ್ಲಿ ಯುದ್ದಗಳು ನಡೆಯುತ್ತಿವೆ. ಬದುಕು ಎನ್ನುವುದು ಶಾಂತಿಯಿAದ ಎದುರಿಸಬೇಕು. ಅಗಾ ಸಾಮಾಜಿಕ ಮೌಲ್ಯಗಳು ಉಳಿಯಲಿವೆ ಎಂದರು.

ಜನಜಾಗೃತಿ ವೇದಿಕೆ ದಾವಣಗೆರೆ ಜಿಲ್ಲಾಧ್ಯಕ್ಷ ನಾಗರಾಜ್ ಕಾಕನೂರು, ಕನ್ನಡ ಸಾಹಿತ್ಯ ಕುರಿತು ವಿಶೇಷ ಉಪನ್ಯಾಸ ನೀಡುವ ಮೂಲಕ ಕನ್ನಡ ಮಾಧ್ಯಮ ಮತ್ತು ಕನ್ನಡ ಸಾಹಿತ್ಯ ವಿಚಾರ ಗೋಷ್ಟಿಯನ್ನು ನಡೆಸಿಕೊಟ್ಟರು.

ಕನ್ನಡ ಸಾಹಿತ್ಯ ಕುರಿತು ವಿಶೇಷ ಉಪನ್ಯಾಸ ನೀಡುವ ಮೂಲಕ ಕನ್ನಡ ಮಾಧ್ಯಮ ಮತ್ತು ಕನ್ನಡ ಸಾಹಿತ್ಯ ವಿಚಾರ ಗೋಷ್ಟಿಯನ್ನು ನಡೆಸಿಕೊಟ್ಟರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನಿಕಟ ಪೂರ್ವ ಅಧ್ಯಕ್ಷ ಲೋಕೇಶ್ ನೂತನ ಅದ್ಯಕ್ಷರಾದ ಎನ್.ಶಿವಮೂರ್ತಿ ಇವರಿಗೆ ಕನ್ನಡ ಬಾವುಟ ನೀಡುವ ಮೂಲಕ ಅಧಿಕಾರ ಹಸ್ತಾಂತರ ಮಾಡಿದರು. ಅಧಿಕಾರಿ ಸ್ವೀಕರಿಸಿ ಮಾತನಾಡಿ, ಕನ್ನಡ ಭಾಷೆ ನಾಡು ನುಡು ಜಲ ನಲ ಸಾಹಿತ್ಯ ರಕ್ಷಣೆಗೆ ಅವಿರತ ಶ್ರಮಿಸುವುದಾಗಿ ತಿಳಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಂ. ಶಿವಸ್ವಾಮಿ, ರಾಜ್ಯ ಸರಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಲೋಕೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಂ.ತಿಪ್ಪೇಸ್ವಾಮಿ, ಪುರಸಭೆ ಸದಸ್ಯರಾದ ಬಿ.ಎಸ್.ರುದ್ರಪ್ಪ, ಪಿ.ಹೆಚ್.ಮುರುಗೇಶ್, ಧರ್ಮಸ್ಥಳ ಜಿಲ್ಲಾ ಜನ ಜಾಗೃತಿ ವೇದಿಕೆ ಅಧ್ಯಕ್ಷ ಎಸ್. ಮಾರುತೇಶ್, ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ಮಂಜುನಾಥ್, ತಾಲೂಕು ವೀರಶೈವ ಲಿಂಗಾಯ್ತಿ ಮಹಾಸಭಾ ಅಧ್ಯಕ್ಷ ಬಸವರಾಜಯ್ಯ, ಕರವೇ ತಾಲೂಕು ಅಧ್ಯಕ್ಷ ಹನುಮಂತಪ್ಪ, ಲಯನ್ಸ್ ಕ್ಲಬ್ ತಾಲೂಕು ಅಧ್ಯಕ್ಷ ಮೋಹನ್ ನಾಗರಾಜ್, ಬಿಸಿಎಂ ಇಲಾಖೆ ಪ್ರದೀಪ್‌ಕುಮಾರ್, ವಕೀಲರಾದ ಎಸ್.ವೇದಮೂರ್ತಿ, ಪ್ರೌಢಶಾಲೆ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಅಣ್ಣೇಶ್, ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಜಿ.ಶಿವಣ್ಣ, ನಿವೃತ್ತ ಶಿಕ್ಷಕ ಪುಟ್ಟಣ್ಣ, ಶಿಕ್ಷಕರಾದ ವರದರಾಜ್, ರುದ್ರಪ್ಪ, ಹೆಚ್.ಬಿ.ವಿಜಯಕುಮಾರ್, ಜಾದು ಮೋಹನ್, ಮಂಜುನಾಥ, ಕಸಾಪ ಮಾಜಿ ಅಧ್ಯಕ್ಷ ನಾಗರಾಜ್ ರಾವ್, ನಿವೃತ್ತ ನೌಕರರ ಸಂಘದ ಅಧ್ಯಕ್ಷರಾದ ಎ.ಸಿ.ಗಂಗಾಧರಪ್ಪ, ಸೇರಿದಂತೆ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ ನೂರಾರು ಅಜೀವ ಸದಸ್ಯರು ಉಪಸ್ಥಿತರಿದ್ದರು

[t4b-ticker]

You May Also Like

More From Author

+ There are no comments

Add yours