ಸಮನ್ವಯ ಸಂತ ಕನ್ನಡದ ಕಬೀರ್ ಪದ್ಮಶ್ರೀ ಇಬ್ರಾಹಿಂ ಸುತಾರ್:ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ

 

 

 

 

ವಿವಿಧ ಧರ್ಮಗಳ ಸಾರ ಅರಿತು ಆಚರಿಸಿದ ವಿಶ್ವಧರ್ಮಿ, ಸಮಕಾಲೀನ ಸರ್ವಧರ್ಮಗಳ ಸಮನ್ವಯ ಸಂತ ಕನ್ನಡದ ಕಬೀರ್ ಪದ್ಮಶ್ರೀ ಇಬ್ರಾಹಿಂ ಸುತಾರ್ ಅವರ ಅಂತಿಮ ದರ್ಶನ ಪಡೆದು ಅಂತಿಮ ನಮನ ಸಲ್ಲಿಸಿದ ಭೋವಿಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ

 

 

ವಚನ ಸಾಹಿತ್ಯವನ್ನು ತಮ್ಮ ವಿಶಿಷ್ಟ ಕಥಾ ಶೈಲಿಯಲ್ಲಿ ಜನಸಾಮಾನ್ಯರಿಗೆ ಅರ್ಥೈಸುತ್ತಿದ್ದ, ತಮ್ಮ ಪ್ರತಿ ಪ್ರಚನಗಳಲ್ಲಿ ಶರಣರ ವಿಚಾರಗಳಿಲ್ಲದೆ ಎಂದೂ ತಮ್ಮ ಪ್ರವಚನವನ್ನು ಪೂರ್ಣಗೊಳಿಸದ, ಶರಣರ ವಚನಗಳನ್ನು ಕಣ್ಣಿಗೆ ಕಟ್ಟುವಂತೆ ಜನರಿಗೆ ತಲುಪಿಸುತ್ತಿದ್ದ,
ಭಜನೆಗಳನ್ನೂ ಸಂವಾದ ಮೂಲಕ ಜನರ ಮನಸ್ಸಿನಲ್ಲಿರುವ ಪ್ರಶ್ನೆಗಳಿಗೆ ಉತ್ತರ ನೀಡುತ್ತಿದ್ದ, ಇಡೀ ಬದುಕನ್ನೇ ಭಾವೈಕ್ಯತೆಯ ಉಸಿರನ್ನಾಗಿಸಿಕೊಂಡ, ದೇಶದೆಲ್ಲೆಡೆ ಭಾವೈಕ್ಯತೆಯ ಬೀಜ ಬಿತ್ತಿದ್ದ, ಸಾಮರಸ್ಯವನ್ನೇ ತನ್ನ ಜೀವನ್ನವನ್ನಾಗಿ ಮಾಡಿಕೊಂಡಿದ್ದ ಸರ್ವಧರ್ಮಗಳ ಸತ್ವ-ಸಾರ ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡಿದ್ದ ವಿಶ್ವಧರ್ಮಿ ಪದ್ಮಶ್ರೀ ಪುರಸ್ಕೃತ ಇಬ್ರಾಹಿಂ ಸುತಾರ ಆಗಿದ್ದರು.

‘ಕನ್ನಡದ ಕಬೀರ’ರೆಂದೇ ಖ್ಯಾತಿ ಪಡೆದಿದ್ದ ಪ್ರವಚನಕಾರ ಇಬ್ರಾಹಿಂ ಸುತಾರ ಅವರ ನಿಧನ ಆಘಾತಕಾರಿ. ಅವರ ಅಗಲುವಿಕೆ ಧರ್ಮವಂತರಿಗೆ, ಭಾವೈಕ್ಯ ಭಾವಜೀವಿಗಳಿಗೆ ತುಂಬಲಾರದ ನಷ್ಟವಾಗಿದೆ. ಅವರ ದಿವ್ಯಾತ್ಮಕ್ಕೆ ಚಿರಶಾಂತಿ ದೊರಕಲಿ, ಅವರ ಕುಟುಂಬವರ್ಗ ಹಾಗೂ ಅಪಾರ ಅಭಿಮಾನಿ ಬಳಗಕ್ಕೆ ದುಃಖ ಭರಿಸುವ ಶಕ್ತಿ ಭಗವಂತ ನೀಡಲೆಂದು ಪ್ರಾರ್ಥಿಸುತ್ತೇವೆ.

[t4b-ticker]

You May Also Like

More From Author

+ There are no comments

Add yours