ಸಂಕಷ್ಟದಲ್ಲಿ ಇದ್ದವರಿಗೆ ಸಹಾಯ ಮಾಡಿದರೆ ದೇವರು ಎಂದು ಕೈ ಬಿಡಲ್ಲ: ತಹಶೀಲ್ದಾರ್ ಎನ್.ರಘುಮೂರ್ತಿ

 

 

 

 

ಚಳ್ಳಕೆರೆ:  ಸಮಾಜದಲ್ಲಿ ಸಂಕಷ್ಟದಲ್ಲಿರುವಂತಹ  ವ್ಯಕ್ತಿಗಳಿಗೆ ನೆರವಾದಲ್ಲಿ  ಭಗವಂತನು ಅಂತಹ ವ್ಯಕ್ತಿಗಳನ್ನು ಎಂದಿಗೂ ಸಹ  ಕೈ ಬಿಡುವುದಿಲ್ಲ ಎಂದು ಎನ್. ರಘುಮೂರ್ತಿ ಹೇಳಿದರು.

ದಿನಾಂಕ 14 4 20 22ರಂದು ಮಹಾವೀರ ಜಯಂತಿ ಆಚರಣೆಯ ಸಂಬಂಧ ಚಳ್ಳಕೆರೆ ತಾಲೂಕಿನ ಜೈನ ಸಮಾಜದವರು ಸಾರ್ವಜನಿಕ ಆಸ್ಪತ್ರೆಯ ಬಡರೋಗಿಗಳಿಗೆ ಬ್ರೆಡ್, ಹಾಲು ಮತ್ತು ಹಣ್ಣು ವಿತರಿಸುವ ಸಮಾರಂಭದಲ್ಲಿ ಮಾತನಾಡಿ ಡಿವಿಜಿಯವರು ಹೇಳಿದ ಹಾಗೆ ಹುಲ್ಲಾಗು ಬೆಟ್ಟದಡಿ ಮನೆಗೆ ಮಲ್ಲಿಗೆಯಾಗು ಕಲ್ಲಾಗು ಕಷ್ಟಗಳ ಮಳೆ ವಿಧಿ ಸುರಿಯೆ ಕಲ್ಲು ಸಕ್ಕರೆಯಾಗು ದೀನದುರ್ಬಲರಿಂಗೆ ಎಲ್ಲರೊಳಗೊಂದಾಗು ಮಂಕುತಿಮ್ಮ ಎಂಬ ಸಂದೇಶ ಇವತ್ತಿನ ಸಮಾಜಕ್ಕೆ ಸ್ಪೂರ್ತಿ ಮತ್ತು ದಾರಿದೀಪವಾಗಿದೆ. ಸಮಾಜಮುಖಿ ಕೆಲಸಗಳಲ್ಲಿ ನಮ್ಮನ್ನು ನಾವು ತೊಡಗಿಸಿಕೊಂಡಲ್ಲಿ ಪರಮಾತ್ಮನ ಅನುಗ್ರಹ ನಾವ್ ಎಲ್ಲಿದೆಯೋ ಅಲ್ಲಿಗೆ ದೊರೆಯುತ್ತದೆ. ಜೈನ ಸಮಾಜ ಸಮುದಾಯದವರು ಮಾಡುತ್ತಿರುವಂತಹ ಈ ಮಹತ್ಕಾರ್ಯ  ಕಾರ್ಯವಾಗಿದೆ ಎಂದರು.

 

 

ಸಮಾಜದಲ್ಲಿ ಅದೆಷ್ಟೋ ಜನ ಅನ್ನ ಬಟ್ಟೆ ಸೂರು ಇಲ್ಲದೆ ಬದುಕುತ್ತಿದ್ದಾರೆ. ಇವರಿಗೆ ಅವಶ್ಯಕ ನೆರವನ್ನು ಒದಗಿಸಿ ಸಾರ್ಥಕತೆಯನ್ನು ಚಳ್ಳಕೆರೆ ತಾಲೂಕಿನ ಜನ ಹೊಂದೋಣ ಹಾಗೆಯೇ ಹೆಚ್ಚು ಹೆಚ್ಚು ಸಂಘ-ಸಂಸ್ಥೆಗಳು ಮತ್ತು ಸಮುದಾಯದ ಜನ ಇಂತಹ ಉತ್ತಮ ಕಾರ್ಯಗಳಿಗೆ ಭಾಗಿಯಾಗಿ ಎಂದು ಕಿವಿ ಮಾತು ಹೇಳಿದರು.

ಈ ಸಮಾರಂಭದಲ್ಲಿ ಆಸ್ಪತ್ರೆಯ ವೈದ್ಯಾಧಿಕಾರಿಗಳಾದ ತಿಪ್ಪೇಸ್ವಾಮಿ ಜೈನ ಸಮುದಾಯದ ಅಧ್ಯಕ್ಷರಾದ ಭರತ್ ರಾಜು ದರ್ಶನ್ ಮುತ್ತರಾಜು ನವೀನ್ ರತ್ನರಾಜು ರಾಘವೇಂದ್ರ ಹಿತೇಶ್ ಉತ್ತಮ್ ಮತ್ತು ಗೌರಿಪುರ ಪಾರ್ಶ್ವನಾಥ ಜೈನ್ ಉಪಸ್ಥಿತರಿದ್ದರು

[t4b-ticker]

You May Also Like

More From Author

+ There are no comments

Add yours