ಶುದ್ದ ಕುಡಿಯುವ ನೀರಿನಿಂದ ಅನೇಕ ಕಾಯಿಲೆಗಳು ದೂರ: ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ

 

 

 

 

ಚಿತ್ರದುರ್ಗ: ಎಲ್ಲಾ ಸಾಮಾನ್ಯ ಜನರಿಗೆ ಶುದ್ದ ಕುಡಿಯುವ ನೀರು ನೀಡುವ ದೃಷ್ಟಿಯಿಂದ ಅಗತ್ಯ ಇರುವ ಕಡೆಗಳಲ್ಲಿ ಶುದ್ದ ಕುಡಿಯುವ ನೀರಿನ ಘಟಕ ನಿರ್ಮಾಣ ಮಾಡುತ್ತಿದ್ದೇವೆ ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದರು.

ನಗರದ ಜೆಎಂಐಟಿ ಸರ್ಕಲ್ ನಲ್ಲಿ 2019-2020 ಸಾಲಿನ 14 ನೇ ಹಣಕಾಸು ಯೋಜನೆಯಲ್ಲಿ 12 ನೇ ವಾರ್ಡ್ ವ್ಯಾಪ್ತಿಯಲ್ಲಿ 12 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಶುದ್ದ ಕುಡಿಯುವ ನೀರಿನ ಘಟಕವನ್ನು ಉದ್ಘಾಟಿಸಿ ಮಾತನಾಡಿದರು.

 

 

ಸಾರ್ವಜನಿಕರು ಆರೋಗ್ಯ ಉತ್ತಮವಾಗಿರಲು ಶುದ್ದ ಕುಡಿಯುವ ನೀರು ಅಗತ್ಯವಾಗಿ ಬೇಕಾಗಿದೆ. ಪ್ರಸ್ತುತ ದಿನಗಳಲ್ಲಿ ನೀರಿನ ಮೂಲಕ ಅನೇಕ ರೋಗಗಳು ಹರಡುತ್ತಿರುವುದು ಕಂಡು ಸರ್ಕಾರದಿಂದ ಗ್ರಾಮೀಣ ಮತ್ತು ನಗರದಲ್ಲಿ ಶುದ್ದ ಕುಡಿಯುವ ನೀರಿನ ಘಟಕ ಸ್ಥಾಪಿಸಲಾಗಿದೆ. ಕುಡಿಯುವ ನೀರು ಶುದ್ದವಾಗಿದ್ದರೆ ಎಷ್ಟೋ ಖಾಯಿಲೆಗಳಿಂದ ಮುಕ್ತಿ ಪಡೆಯಬಹುದು ಎಂದರು.

ನಗಸಭೆಯಿಂದ ಶುದ್ದ ನೀರಿನ ಘಟಕದ ನಿರ್ವಹಣೆ ಸರಿಯಾದ ರೀತಿಯಲ್ಲಿ ಆಗಬೇಕು. ರಿಯಾಯಿತಿ ದರದಲ್ಲಿ ಶುದ್ದನೀರು ನೀಡಬೇಕು. ಪ್ರತಿ ತಿಂಗಳು ನೀರಿನ ಘಟಕದ ಮಿಷನರಿಯನ್ನು ಪರಿಶೀಲಿಸುತ್ತಿರಬೇಕು. ನೀರಿನ ಟ್ಯಾಂಕನ್ನು ಸ್ವಚ್ಚವಾಗಿ ಇಟ್ಟುಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ನಗರಸಭೆ ಉಪಾಧ್ಯಕ್ಷೆ ಅನುರಾಧ ರವಿಕುಮಾರ್, ನಗರಸಭೆ ಸದಸ್ಯರಾದ ಕೆ.ಬಿ.ಸುರೇಶ್,ವೆಂಕಟೇಶ್, ರಮೇಶ್,ಹರೀಶ್, ಜಯಣ್ಣ, ಮುಖಂಡರಾದ ಪರಮೇಶ್, ರವಿಕುಮಾರ್, ನಗರಸಭೆ ಇಂಜಿನಿಯರ್ ಕಿರಣ್ ಇದ್ದರು.

[t4b-ticker]

You May Also Like

More From Author

+ There are no comments

Add yours