ವೃತ್ತಿಯಲ್ಲಿ ಪ್ರಾಮಾಣಿಕತೆ ಮಖ್ಯ: ಡಾ.ಹೆಚ್.ಗುಡ್ಡದೇಶ್ವರಪ್ಪ

 

 

 

 

ವೃತ್ತಿ ಮಾರ್ಗದರ್ಶನ ಮತ್ತು ವೃತ್ತಿ ಸಮಾಲೋಚನಾ ಕಾರ್ಯಕ್ರಮ
ಚಿತ್ರದುರ್ಗ,ಫೆಬ್ರವರಿ05:
ಉದ್ಯೋಗ ಯಾವುದೇ ಆಗಿದ್ದರೂ ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸಬೇಕು ಎಂದು ಸರ್ಕಾರಿ ಕಲಾ ಕಾಲೇಜು (ಸ್ವಾಯತ್ತ) ಪ್ರಾಂಶುಪಾಲರಾದ ಡಾ.ಹೆಚ್ ಗುಡ್ಡದೇಶ್ವರಪ್ಪ ಹೇಳಿದರು.
ನಗರದ ಸರ್ಕಾರಿ ಕಲಾ ಕಾಲೇಜಿನಲ್ಲಿ ಶನಿವಾರ ನೆಹರು ಯುವಕೇಂದ್ರ, ಐಕ್ಯೂಎಸಿ, ಯುವ ರೆಡ್ ಕ್ರಾಸ್ ಘಟಕ, ಸರ್ಕಾರಿ ಕಲಾ ಕಾಲೇಜು (ಸ್ವಾಯತ್ತ), ಡಾ.ಬಿಆರ್ ಅಂಬೇಡ್ಕರ್ ಆಶ್ರಯ ಭಾರತ್ ಫೌಂಡೇಶನ್, ಅಂಬೇಡ್ಕರ್ ಅಕಾಡೆಮಿ ಇವರ ಸಂಯುಕ್ತಾಶ್ರಯದಲ್ಲಿ ವೃತ್ತಿ ಮಾರ್ಗದರ್ಶನ ಮತ್ತು ವೃತ್ತಿ ಸಮಾಲೋಚನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶಿಕ್ಷಣ, ಕೃಷಿ, ಹೈನುಗಾರಿಕೆ ಸೇರಿದಂತೆ ಯಾವುದೇ ಉದ್ಯೋಗ ಆದರೂ ಗೌರವದಿಂದ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು
ಎಲ್ಲರಿಗೂ ಸರ್ಕಾರಿ ಕೆಲಸ ಸಿಗದಿದ್ದಾಗ ನೀವು ಸ್ವಯಂ ಉದ್ಯೋಗ ಮಾಡಬೇಕು. ಮತ್ತು ಬ್ಯಾಂಕಿನ ವ್ಯವಹಾರದ ಬಗ್ಗೆ ಮಾಹಿತಿ ಜ್ಞಾನ ಇರಬೇಕು. ಸಾಲ, ಬಡ್ಡಿ, ಚೆಕ್, ಡಿಡಿ, ಪಾಸ್‍ಪುಸ್ತಕ ಇತ್ಯಾದಿ ಬಗ್ಗೆ ತಿಳಿದುಕೊಳ್ಳಬೇಕು. ಬ್ಯಾಂಕ್ ಪರೀಕ್ಷೆಗೆ ಬೇರೆ ರಾಜ್ಯದವರು ಹೆಚ್ಚು ಆಯ್ಕೆಯಾಗುತ್ತಾರೆ. ನಮ್ಮ ರಾಜ್ಯದವರು ಕಡಿಮೆ ಇರುತ್ತಾರೆ. ಹಾಗಾಗಿ ವಿದ್ಯಾರ್ಥಿಗಳು ಸ್ಫರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸಿ ನಮ್ಮ ರಾಜ್ಯದವರೇ ಹೆಚ್ಚು ಬ್ಯಾಂಕಿನಲ್ಲಿ ಉದ್ಯೋಗ ಪಡೆದುಕೊಳ್ಳಲಿ ಇದರಿಂದ ವ್ಯವಹಾರಕ್ಕೆ ಅನುಕೂಲವಾಗಲಿದೆ ಎಂದು ಹೇಳಿದರು.
ಲೀಡ್ ಬ್ಯಾಂಕ್ ವ್ಯವಸ್ಥಾಪಕ ಸಿ.ಬಿ ಹಿರೇಮಠ ಮಾತನಾಡಿ, ಬ್ಯಾಂಕ್‍ಗಳಲ್ಲಿ ಹಲವಾರು ಉದ್ಯೋಗಗಳಿಗೆ ಹೋಗಲು ಅವಕಾಶವಿದೆ. ಬ್ಯಾಂಕ್‍ಗಳಲ್ಲಿ ಕೆಲಸ ಮಾಡಲು ಇಚ್ಛಿಸುವವರು ಶ್ರಮ ವಹಿಸಿ ವ್ಯಾಸಂಗ ಮಾಡಿ ಬ್ಯಾಂಕ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಉದ್ಯೋಗ ಪಡೆದುಕೊಳ್ಳಬೇಕು ಎಂದರು. ಬ್ಯಾಂಕಿನ ಮಾಹಿತಿ ಎಲ್ಲರಿಗೂ ಅತ್ಯಂತ ಅವಶ್ಯಕವಾಗಿದೆ. ಏಕೆಂದರೆ ಶಾಲಾ ಕಾಲೇಜುಗಳ ಶುಲ್ಕ, ಡಿಡಿ, ಚೆಕ್‍ಗಳ ಮೂಲಕ ನಡೆಯುತ್ತವೆ. ನೀವು ಸ್ಫರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ನೆಹರು ಯುವ ಕೇಂದ್ರ್ರದ ಜಿಲ್ಲಾ ಯುವಜನ ಅಧಿಕಾರಿ ಸುಹಾಸ್ ಎನ್. ಮಾತನಾಡಿ, ಯಾವುದೇ ವ್ಯಕ್ತಿಯಾಗಲಿ ಆತ ಜೀವನ ರೂಪಿಸಿಕೊಳ್ಳುವುದರ ಜೊತೆಗೆ ಸುಂದರವಾದ ಬದುಕನ್ನು ಕಟ್ಟಿಕೊಳ್ಳಬೇಕು. ಕನಸು ಇದ್ದೆ ಇರುತ್ತದೆ ಇದನ್ನು ಸಾಕಾರಗೊಳಿಸಲು ಶಿಕ್ಷಣ ಬಹಳ ಮುಖ್ಯವಾಗುತ್ತದೆ. ಬ್ಯಾಂಕ್‍ಗೆ ಸಂಬಂಧಿಸಿದಂತೆ ನಿಮಗೆ ಮಾಹಿತಿ ನೀಡುವುದು ಮತ್ತು ಅದರ ಪಠ್ಯಪುಸ್ತಕವನ್ನು ತಿಳಿಸುವುದು ಈ ಕಾರ್ಯಕ್ರಮ ಉದ್ದೇಶ ಎಂದು ತಿಳಿಸಿದರು.

 

 

ಇಂಡಿಯನ್ ಪೋಸ್ಟ್ ಪೇಮೆಂಟ್ ಬ್ಯಾಂಕ್ ವ್ಯವಸ್ಥಾಪಕರಾದ ಅರ್ಶ್ ಅಲಿ ಚೌಧರಿ ಮಾತನಾಡಿ, ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗೆ ಬೇಕಾಗುವ ತಯಾರಿ ಬಗ್ಗೆ ಪಿಪಿಟಿಯಲ್ಲಿ ಬ್ಯಾಂಕಿಂಗ್ ಪರೀಕ್ಷೆಯ ಸಿಲಬಸ್, ಅಂಕಗಳು, ಸಮಯ, ವಿಷಯವಾರು ಪ್ರಶ್ನೆ ಪತ್ರಿಕೆಗಳ ತಯಾರಿ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಕೆನರಾ ಬ್ಯಾಂಕ್ ಫೈನಾನ್ಸಿಯಲ್ ಕೌನ್ಸಿಲರ್ ವಿ.ತಿಪ್ಪೇಸ್ವಾಮಿ ಮಾತನಾಡಿ, ಉದ್ಯೋಗ ಸ್ವಯಂ ಉದ್ಯೋಗದ ಬಗ್ಗೆ ಮಾಹಿತಿ ನೀಡುವುದರ ಮೂಲಕ ನೀವು ಪದವಿಯನ್ನು ಪಡೆದು ಹಲವಾರು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ ಉದ್ಯೋಗ ಪಡೆಯಲು ಸಾಧ್ಯವಾಗದಿದ್ದಾಗ ಸ್ವಯಂ ಉದ್ಯೋಗಿಗಳಾಗಿ ಹೈನುಗಾರಿಕೆ, ಕುರಿ ಸಾಕಾಣಿಕೆ, ಬಿಸ್ಕೆಟ್, ಹಪ್ಪಳ ಇತ್ಯಾದಿಗಳನ್ನು ಮಾಡಿ ನೀವು ಉದ್ಯೋಗ ಪಡೆದು ಬೇರೆಯವರಿಗೂ ಕೆಲಸ ಕೊಡಬಹುದು ಎಂದು ತಿಳಿಸಿದರು.
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ವ್ಯವಸ್ಥಾಪಕ ರವಿಕುಮಾರ್ ಮಾತನಾಡಿ, ಬ್ಯಾಂಕಿಗೆ ಸಂಬಂಧ ಪಟ್ಟಂತೆ ವಿಪುಲವಾದಂತಹ ಅವಕಾಶಗಳು ಇಂದಿನ ಯುವಜನಾಂಗಕ್ಕೆ ಲಭ್ಯವಿದೆ. ಯುವಕರು ಬ್ಯಾಂಕಿಂಗ್ ಪರೀಕ್ಷೆಗಳನ್ನು ಎದುರಿಸುವ ನಿಟ್ಟಿನಲ್ಲಿ ಶ್ರಮವಹಿಸಬೇಕು, ಕನ್ನಡದಲ್ಲಿ ಬ್ಯಾಂಕಿಂಗ್ ಪರೀಕ್ಷೆಗಳನ್ನು ಬರೆಯಲು ಅವಕಾಶ ನೀಡಲಾಗಿದೆ ಎಂದರು.
ಪಂಜಾಬ್ ನ್ಯಾಷನ್ ಬ್ಯಾಂಕ್ ಸಹಾಯಕ ವ್ಯವಸ್ಥಾಪಕರಾದ ಪ್ರಸಾದ್ ಬಿ ಮಾತನಾಡಿ ಇಂದಿನ ಯುವಸಮೂಹ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಹೆಚ್ಚಿನ ತಯಾರಿ ನಡೆಸಬೇಕು. ಬ್ಯಾಂಕಿಂಗ್ ಪರೀಕ್ಷೆಗಳ ಬಗ್ಗೆ ಆಳವಾದ ಅಧ್ಯಯನ ನಡೆಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸರ್ಕಾರಿ ಕಲಾ ಕಾಲೇಜಿನ ಎನ್‍ಸಿಸಿ ಅಧಿಕಾರಿ ಡಾ.ಲೇಪಾಕ್ಷಿ ಎಸ್.ಆರ್, ಸರ್ಕಾರಿ ಕಲಾ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಹೆಚ್.ಬಸವರಾಜ್, ಭಾರತೀಯ ರೆಡ್‍ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆಯ ಕಾರ್ಯದರ್ಶಿ ಮಹಜರ್ ಉಲ್ಲಾ ಎನ್. ಡಾ.ಬಿ.ಆರ್ ಅಂಬೇಡ್ಕರ್ ಆಶ್ರಯ ಭಾರತ ಫೌಂಡೇಶನ್‍ನ ಅಧ್ಯಕ್ಷ ವೆಂಕಟೇಶ ಉಪಸ್ಥಿತರಿದ್ದರು.

[t4b-ticker]

You May Also Like

More From Author

+ There are no comments

Add yours