ವಿವಿ ಸಾಗರ ಇತಿಹಾಸ ಮರುಕಳಿಸಲು ಭದ್ರ ಡ್ಯಾಂ ವ್ಯಾಪ್ತಿಯ ಎಲ್ಲಾ ಜನಪ್ರತಿನಿಧಿಗಳು ಸಹಕರಿಸಲು ಮನವಿ: ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ

 

 

 

 

 

ಚಿತ್ರದುರ್ಗ: ಮೈಸೂರು ಮಹಾರಾಜರು ಕಟ್ಟಿದ ವಿವಿ ಸಾಗರದ ಇತಿಹಾಸ ಮರು ಕಳಿಸಲು ದಾವಣಗೆರೆ ಭಾಗದ ಚುನಾಯಿತ ಜನಪ್ರತಿನಿಧಿಗಳು, ರೈತ ಬಾಂದವರು ,ಕಾಡಾ ಅಧ್ಯಕ್ಷರು ಮತ್ತು ಸದಸ್ಯರು ಸಹಕಾರ ನೀಡಬೇಕು ಎಂದು ಚಿತ್ರದುರ್ಗ ಜಿಲ್ಲೆಯ ಜನರ ಪರವಾಗಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಮನವಿ ಮಾಡಿದ್ದಾರೆ.

 

 

ಮೈಸೂರು ಮಹಾರಾಜರ ಕಾಲದಲ್ಲಿ ಅವರ ದೂರದೃಷ್ಟಿ ಮತ್ತು ಬಡವರ ಮೇಲಿನ ಕಾಳಜಿಯಿಂದ ವಾಣಿ ವಿಲಾಸ ಸಾಗರ ಡ್ಯಾಂ ಕಟ್ಟಿಸಿದ್ದಾರೆ. 80-90 ವರ್ಷಗಳ ಕೆಳಗೆ ಕೋಡಿ ಬಿದ್ದಿದ್ದು ಆ ಸಮಯದಲ್ಲಿ ನೋಡಿದ ವ್ಯಕ್ತಿಗಳು ಒಬ್ಬರು ಇಲ್ಲವಾಗಿದ್ದಾರೆ. ಅಂತಹ ಇತಿಹಾಸ ಮರು ಕಳಿಸಲು ದಾವಣಗೆರೆ ಜಿಲ್ಲೆಯ ಭದ್ರ ವ್ಯಾಪ್ತಿಯ ಎಲ್ಲಾ ಜನ ಪ್ರತಿನಿಧಿಗಳು ಸಹಕಾರ ನೀಡಿದರೆ 5 ಅಡಿ ನೀರಿನಿಂದ ಜಿಲ್ಲೆಯ ರೈತರಿಗೆ ಸಂಭ್ರಮ ಜೊತೆಗೆ ಇತಿಹಾಸ ನಿರ್ಮಾಣವಾಗಲಿದೆ ‌ ಎಂದು ಮನವಿ ಮಾಡಿದ್ದೇನೆ ಎಂದರು.

ಕಳೆದ 3 ತಿಂಗಳಿಂದ 1200 ಕ್ಯೂಸೆಕ್ಸ್ ನೀರು ಹೊರಗಡೆ ಹೋಗುತ್ತಿದೆ. ನೀರಿನ ಮಟ್ಟ ಕಡಿಮೆ ಸಹ ಆಗಿಲ್ಲ. ಬೇಸಿಗೆಯಲ್ಲಿ ಸಹ ನೀರಿನ ಹಾಹಾಕಾರವಾಗುವುದಿಲ್ಲ.ಹಾಗಾಗಿ ನಮಗೆ 5 ಅಡಿ ನೀರು ಹರಿಸಿದರೆ ಕೋಡಿ ಬೀಳುತ್ತದೆ. ಹೊಳಲ್ಕೆರೆ, ಹೊಸದುರ್ಗ, ಚಿತ್ರದುರ್ಗ, ಮೊಳಕಾಲ್ಮುರು, ಚಿಕ್ಕನಾಯಕನಹಳ್ಳಿ, ಪಾವಗಡ, ಶಿರಾ ಭಾಗದ ರೈತರು ಬೆಳೆ ಹಾಳಾದರು ಸಹಾ ಅಂತರ್ಜಲ ಹೆಚ್ಚಿರುವುದರಿಂದ ಸಂತೋಷದಲ್ಲಿ ಇದ್ದಾರೆ.

ಕಡೂರು ಶಾಸಕರು ನೀರು ಹರಿಸಬಾರದು ಎಂದು ಹೇಳಿದ್ದಾರೆ ಎಂದು ಕೇಳಿದ್ದೇನೆ. ಆದರೆ ದಯಮಾಡಿ ಆ ರೀತಿ ಮಾಡದೇ ನೀರು ಹರಿಸಬೇಕು. ಕೇವಲ 5 ಅಡಿ ಹರಿಸಿದರೆ ಸಾಕು. ಹೀಗೆ 125 ಅಡಿ ನೀರು ಯಾವಾಗ ತುಂಬುತ್ತದೆಯೋ ಯಾರು ಕಂಡಿಲ್ಲ. ದೊಡ್ಡತನ ತೋರಿ ನೀರು ಹರಿಸಿ ಮತ್ತು ಭದ್ರಾ ಡ್ಯಾಂ ನ ಭಾಗದಲ್ಲಿ ಬರುವ ಎಲ್ಲಾರೂ ಸಹಕಾರ ನೀಡಬೇಕು ಎಂದು ಮನವಿ ಮಾಡಿದ್ದಾರೆ……

[t4b-ticker]

You May Also Like

More From Author

+ There are no comments

Add yours