ವಾಣಿವಿಲಾಸ ಸಾಗರಕ್ಕೆ ಮೀಸಲಿಟ್ಟ 5ಟಿಎಂಸಿಯನ್ನು 2 ,ಟಿಎಂಸಿಗೆ ಇಳಿಸಿದ್ದು ಸಿದ್ದರಾಮಯ್ಯ ಸರ್ಕಾರ.

 

 

 

 

ಹಿರಿಯೂರು: 2008 ರಲ್ಲಿ ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ವಾಣಿವಿಲಾಸ ಜಲಾಶಯಕ್ಕೆ ತಾತ್ಕಾಲಿಕವಾಗಿ ಮೀಸಲಿಟ್ಟಿದ್ದ 5 ಟಿಎಂಸಿ ಅಡಿ ನೀರನ್ನು 2013 ರಲ್ಲಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ನೇತೃತ್ವದ ಸರ್ಕಾರ 2 ಟಿಎಂಸಿ ಅಡಿಗೆ ಇಳಿಸುವ ಮೂಲಕ ಹಿರಿಯೂರು ತಾಲ್ಲೂಕಿನ ಜನತೆಗೆ ದ್ರೋಹ ಬಗೆದಿದ್ದಾರೆ’ ಎಂದು ವಾಣಿವಿಲಾಸ ಹೋರಾಟ ಸಮಿತಿ ಮುಖಂಡರು ಆರೋಪಿಸಿದರು.

ಗುರುವಾರ ನಗರದಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರನಕಟ್ಟೆ ಶಿವಕುಮಾರ್, ‘ರಾಜಕೀಯ ಪಕ್ಷಗಳು ಪ್ರಸ್ತಾಪಿಸುವ ಬೇರೆ ವಿಚಾರಗಳಿಗೆ ತಾವು ಹೋಗುವುದಿಲ್ಲ. ಆದರೆ ಹಿರಿಯೂರಿನಲ್ಲಿ ಏ. 5 ರಂದು ನಡೆದ ಜಗಜೀವನರಾಂ ಜಯಂತಿಯಲ್ಲಿ ಸಿದ್ದರಾಮಯ್ಯನವರು ಭದ್ರಾ ಮೇಲ್ದಂಡೆ ಮೂಲಕ ನೀರು ಕೊಟ್ಟಿದ್ದು ಕಾಂಗ್ರೆಸ್ ಪಕ್ಷ. ಚಳ್ಳಕೆರೆಗೆ 12,500 ಕೋಟಿ ವೆಚ್ಚದಲ್ಲಿ ತುಂಗಭದ್ರಾ ಹಿನ್ನೀರು ಹರಿಸಿದ್ದು

ತಾವು ಎಂದು ಹೇಳಿದ್ದಾರೆ. ಚಳ್ಳಕೆರೆ ತಾಲ್ಲೂಕಿಗೆ ನೀರು ಬಂದಿದೆಯೋ ಇಲ್ಲವೋ ಗೊತ್ತಿಲ್ಲ. ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿಯಂತೂ ಇನ್ನೂ ಮುಗಿದಿಲ್ಲ. ರೈತ ಮುಖಂಡರ ಒತ್ತಾಯ, ಜಿಲ್ಲೆಯ ಸಂಸದರು, ಶಾಸಕರ ಪ್ರಯತ್ನದ ಫಲವಾಗಿ ಭದ್ರಾ ಜಲಾಶಯದಿಂದ ತಾತ್ಕಾಲಿಕವಾಗಿ ವಾಣಿವಿಲಾಸಕ್ಕೆ ನೀರು ಹರಿದು ಬಂದಿದೆ. ಇದನ್ನು ವಿರೋಧಪಕ್ಷದ ನಾಯಕರು ನೆನಪಿನಲ್ಲಿಡಬೇಕು’ ಎಂದು ಒತ್ತಾಯಿಸಿದರು.

 

 

‘ಜಲಾಶಯದ ಅಚ್ಚುಕಟ್ಟಿನಲ್ಲಿ 25 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ತೋಟಗಳಿವೆ. ವರ್ಷಕ್ಕೆ ಕನಿಷ್ಟ ಮೂರು ನೀರು ಕೊಟ್ಟರೂ 3.75 ಟಿಎಂಸಿ ಅಡಿ ನೀರು ಬೇಕಿದೆ. ಚಳ್ಳಕೆರೆ, ಚಿತ್ರದುರ್ಗ, ಹೊಳಲ್ಕೆರೆ, ಕುದಾಪುರ, ಹಿರಿಯೂರು ತಾಲ್ಲೂಕಿನ ಹಳ್ಳಿಗಳಿಗೆ ನೀರು ಕೊಡಬೇಕೆಂದರೆ ಕನಿಷ್ಟ 8 ಟಿಎಂಸಿ ಅಡಿ ನೀರು ಅಗತ್ಯವಿದೆ. ಆದರೆ ಸಿಎಂ ಆಗಿದ್ದ ಸಿದ್ದರಾಮಯ್ಯನವರು ನಮಗೆ ಕರುಣಿಸಿದ್ದು ಕೇವಲ 2ಟಿಎಂಸಿ ಅಡಿ. ಇಷ್ಟು ನೀರು ವರ್ಷಕ್ಕೆ ಹಾವಿಯಾಗಿ ಹೋಗುತ್ತದೆ. 2018 ರ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಸೋಲಿಗೆ ಇದೂ ಕಾರಣ ಎಂಬುದನ್ನು ಮರೆಯಬಾರದು. ಈಗಲೂ ಇಲ್ಲಿನ ರೈತರು

ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ಆಗಿರುವ ಅನ್ಯಾಯವನ್ನು ಮರೆತಿಲ್ಲ’ ಎಂದು ಶಿವಕುಮಾರ್ ಎಚ್ಚರಿಸಿದರು.

ಎಚ್.ಆರ್. ತಿಮ್ಮಯ್ಯ, ಆಲೂರು ಸಿದ್ದರಾಮಣ್ಣ, ಬಟ್ಟೂರು ಸುರೇಶ್, ಬಿ.ರಾಜಶೇಖರ್ ಹಾಜರಿದ್ದರು.

[t4b-ticker]

You May Also Like

More From Author

+ There are no comments

Add yours