ರೋಹಿಣಿ ಸಿಂದೂರಿ v/s ಶಿಲ್ಪಾ ನಾಗ್ ಇಬ್ಬರು ಶನಿವಾರ ರಾತ್ರಿ ಎತ್ತಂಗಡಿ. ಮೈಸೂರು ಹೈ ಡ್ರಾಮ ಅಂತ್ಯ.

 

 

 

 

ಬೆಂಗಳೂರು: ಸರ್ಕಾರ ಇಬ್ಬರು ಐಎಎಸ್ ಅಧಿಕಾರಿಗಳ ಜಗಳ ಬೀದಿಗೆ ಬಂದು ಸರ್ಕಾರ ಮುಜುಗರ ಅನುಭವಿಸಿದರ ಫಲವಾಗಿ ಕೂಡಲೇ ಇಬ್ಬರು ಆಧಿಕಾರಿಗಳಾ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮತ್ತು ಮೈಸೂರು ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್‌ ಅವರನ್ನು ಶನಿವಾರ ರಾತ್ರಿ ಎತ್ತಂಗಡಿ ಮಾಡಲಾಗಿದೆ.

 

 

ರೋಹಿಣಿ ಅವರನ್ನು ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರಾಗಿ ವರ್ಗಾವಣೆ ಮಾಡಲಾಗಿದೆ. ಈ ಹಿಂದೆ ಅವರು ಇದೇ ಹುದ್ದೆಯಲ್ಲಿದ್ದರು. ಶಿಲ್ಪಾ ನಾಗ್ ಅವರನ್ನು ಆವರನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆ ನಿರ್ದೇಶಕರಾಗಿ (ಇ– ಆಡಳಿತ) ವರ್ಗಾವಣೆ ಮಾಡಲಾಗಿದೆ.
ವಾಣಿಜ್ಯ ತೆರಿಗೆ ಇಲಾಖೆಯ (ಜಾರಿ) ಹೆಚ್ಚುವರಿ ಆಯುಕ್ತರಾಗಿದ್ದ ಡಾ. ಬಗಾದಿ ಗೌತಮ್‌ ಅವರನ್ನು ಮೈಸೂರು ಜಿಲ್ಲಾಧಿಕಾರಿಯಾಗಿ ನೇಮಿಸಲಾಗಿದೆ. ಆಹಾರ ಮತ್ತು  ನಾಗರಿಕ ಸರಬರಾಜು ನಿಗಮದ ಆಡಳಿತ ವ್ಯವಸ್ಥಾಪಕ ಲಕ್ಷ್ಮೀಕಾಂತ ರೆಡ್ಡಿ ಅವರನ್ನು ಮೈಸೂರು ಪಾಲಿಕೆ ಆಯುಕ್ತರಾಗಿ ನೇಮಿಸಲಾಗಿದೆ.

ವರ್ಗಾವಣೆಯಾದ ಇತರರು: ಪಿ. ರಾಜೇಂದ್ರ ಚೋಳನ್‌–  ಆಡಳಿತ ನಿರ್ದೇಶಕ, ಬೆಸ್ಕಾಂ ಹೆಚ್ಚುವರಿಯಾಗಿ ಬಿಬಿಎಂಪಿ ವಿಶೇಷ ಆಯುಕ್ತ (ಆರೋಗ್ಯ ಮತ್ತು ಐಟಿ) ಹುದ್ದೆ ಮತ್ತು ದಯಾನಂದ ಕೆ.ಎ–  ಬಿಬಿಎಂಪಿ ವಿಶೇಷ ಆಯುಕ್ತ ( ಆಡಳಿತ)

[t4b-ticker]

You May Also Like

More From Author

+ There are no comments

Add yours