ರಾಜ್ಯದ್ಯಾಂತ ಕೋವಿಡ್ ಅರ್ಭಟಕ್ಕೆ ಯಾವ ಜಿಲ್ಲೆಯಲ್ಲಿ ಎಷ್ಟು ಸೋಂಕು, ಎಷ್ಟು ಸಾವು ನೋಡಿ.

 

 

 

 

ಬೆಂಗಳೂರು: ಕರ್ನಾಟಕದಲ್ಲಿ ಭಾನುವಾರ ಒಟ್ಟು 34,047 ಮಂದಿಯಲ್ಲಿ ಕೊರೊನಾ ವೈರಸ್ ಸೋಂಕು (Coronavirus Infection) ದೃಢಪಟ್ಟಿದೆ.

13 ಮಂದಿ ಸಾವನ್ನಪ್ಪಿದ್ದಾರೆ, 5902 ಜನರು ಚೇತರಿಸಿಕೊಂಡಿದ್ದಾರೆ. ರಾಜ್ಯದಲ್ಲಿ ಪ್ರಸ್ತುತ 1,97,982 ಸಕ್ರಿಯ (Active Cases) ಪ್ರಕರಣಗಳಿದ್ದು, ಪಾಸಿಟಿವಿಟಿ ಪ್ರಮಾಣ ಶೇ 19.29 ಇದೆ. ಸೋಂಕಿನಿಂದ ಮೃತಪಡುವವರ ಪ್ರಮಾಣ ಶೇ 0.03 ಇದೆ. ರಾಜ್ಯದಲ್ಲಿ ಈವರೆಗೆ ಕೊವಿಡ್​ನಿಂದ 38,431 ಜನರು ಸಾವನ್ನಪ್ಪಿದ್ದಾರೆ. ಈವರೆಗೆ ಒಟ್ಟು 32,20,087 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, 29,83,645 ಜನರು ಚೇತರಿಸಿಕೊಂಡಿದ್ದಾರೆ.

 

 

ಬೆಂಗಳೂರು ನಗರದಲ್ಲಿ 21,071 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, ಐವರು ಸಾವನ್ನಪ್ಪಿದ್ದಾರೆ. 3978 ಜನರು ಚೇತರಿಸಿಕೊಂಡಿದ್ದಾರೆ. ನಗರದಲ್ಲಿ ಪ್ರಸ್ತುತ 1,46,200 ಸಕ್ರಿಯ ಪ್ರಕರಣಗಳಿದ್ದು, ಈವರೆಗೆ ಒಟ್ಟು 14,16,807 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, 12,54,153 ಜನರು ಚೇತರಿಸಿಕೊಂಡಿದ್ದಾರೆ. ಈವರೆಗೆ ಒಟ್ಟು 16,453 ಮಂದಿ ಸಾವನ್ನಪ್ಪಿದ್ದಾರೆ.

ಯಾವ ಜಿಲ್ಲೆಯಲ್ಲಿ ಎಷ್ಟು ಮಂದಿಗೆ ಸೋಂಕು?
ಬಾಗಲಕೋಟೆ 136, ಬಳ್ಳಾರಿ 566, ಬೆಳಗಾವಿ 468, ಬೆಂಗಳೂರು ಗ್ರಾಮಾಂತರ 722, ಬೀದರ್ 178, ಚಾಮರಾಜನಗರ 146, ಚಿಕ್ಕಬಳ್ಳಾಪುರ 287, ಚಿಕ್ಕಮಗಳೂರು 135, ಚಿತ್ರದುರ್ಗ 184, ದಕ್ಷಿಣ ಕನ್ನಡ 782, ದಾವಣಗೆರೆ 244, ಧಾರವಾಡ 634, ಗದಗ 117, ಹಾಸನ 1171, ಹಾವೇರಿ 55, ಕಲಬುರಗಿ 562, ಕೊಡಗು 148, ಕೋಲಾರ 552, ಕೊಪ್ಪಳ 80, ಮಂಡ್ಯ 709, ಮೈಸೂರು 1892, ರಾಯಚೂರು 143, ರಾಮನಗರ 231, ಶಿವಮೊಗ್ಗ 287, ತುಮಕೂರು 1373, ಉಡುಪಿ 591, ಉತ್ತರ ಕನ್ನಡ 447, ವಿಜಯಪುರ 103, ಯಾದಗಿರಿ 33.

ಯಾವ ಜಿಲ್ಲೆಯಲ್ಲಿ ಎಷ್ಟು ಮಂದಿ ಸಾವು?
ಬೆಂಗಳೂರು ನಗರ 5, ದಕ್ಷಿಣ ಕನ್ನಡ 2, ಹಾಸನ, ಕಲಬುರಗಿ, ಮಂಡ್ಯ, ಮೈಸೂರು, ರಾಮನಗರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ.

[t4b-ticker]

You May Also Like

More From Author

+ There are no comments

Add yours