ಯುವ ಜನತೆಯಲ್ಲಿ ಪರಿಸರ ಪ್ರಜ್ಙೆ ಮೂಡಿಸಿ: ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ.

 

 

 

 

ಪರಿಸರ ದಿನಾಚರಣೆಯಲ್ಲಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಸಸಿ ನೆಟ್ಟರು, ಡಿಸಿ.ಕವಿತಾಮ.ಮನ್ನಿಕೇರಿ, ಎಸ್ಪಿ ರಾಧಿಕಾಚಿತ್ರದುರ್ಗ:ನಗರನ್ನು ಹಸಿರೀಕರಣಕ್ಕೆ ಒತ್ತು ನೀಡಿ ರಸ್ತೆ ನಿರ್ಮಾಣವಾಗುತ್ತಿರುವ ಎಲ್ಲಾ ರಸ್ತೆಯ ಪಕ್ಕದಲ್ಲಿ ಗಿಡಗಳನ್ನು ಹಾಕಿ ಪೋಷಿಸಲಾಗುವುದು ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದರು.

ನಗರದ ಪಂಚಚಾರ್ಯ ಕಲ್ಯಾಣ ಮಂಟಪ್ಪ ಬಳಿ ಕರ್ನಾಟಕ ಸರ್ಕಾರದ ಇಲಾಖೆ,ಚಿತ್ರದುರ್ಗ ಪ್ರಾದೇಶಿಕ ವಲಯ 2021-22 ನೇ ಸಾಲಿನ ವನ ಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

 

 

ನಗರದಲ್ಲಿ ರಸ್ತೆ ಅಗಲೀಕರಣಕ್ಕಾಗಿ ಅನಿವಾರ್ಯವಾಗಿ ಗಿಡಗಳನ್ನು ಕಡಿಯಲಾಗುತ್ತಿದೆ. ಅದಕ್ಕಾಗಿ ರಸ್ತೆ ಮುಗಿದ ನಂತರ ಎಷ್ಟು ಗಿಡಗಳನ್ನು ಕಡಿದಿದ್ದಾರೋ ಅದಕ್ಕಿಂತ ಎರಡು ಪಟ್ಟು ಗಿಡಗಳನ್ನು ಹಾಕಿಸಲಾಗುತ್ತದೆ.

ನಗರ ಮತ್ತು ಗ್ರಾಮೀಣ ಭಾಗದಲ್ಲಿ ಎಲ್ಲಾರೂ ಮನೆಯ ಸುತ್ತಮೂತ್ತಲಿನ ಪ್ರದೇಶದಲ್ಲಿ ಗಿಡಗಳನ್ನು ನೆಡಬೇಕು. ತಮ್ಮ ಮಕ್ಕಳಿಗೆ ಪರಿಸರ ಪಾಠ ಮಾಡಬೇಕು.ಯುವ ಜನತೆಗೆ ಪರಿಸರ ಕಾಳಜಿ ಮೂಡಿಸಿ ಎಂದು ಮನವಿ ಮಾಡಿದರು.

ಜಿಲ್ಲಾಧಿಕಾರಿ.ಕವಿತಾ ಎಸ್.ಮನ್ನಿಕೇರಿ, ಎಸ್ಪಿ ರಾಧಿಕಾ,ಸಿಇಓ ನಂದಿನಿದೇವಿ,ನಗರಸಭೆ ಪೌರಯುಕ್ತ ಹನುಮಂತರಾಜ್,ವಲಯ ಅರಣ್ಯ ಅಧಿಕಾರಿಗಳಾದ ಸಂದೀಪ್ ನಾಯಕ, ಎಎಸ್ಎಫ್ ಮಂಜುನಾಥ್, ಅರಣ್ಯ ಅಧಿಕಾರಿ ರುದ್ರಮುನಿ, ನಗರಸಭೆ ಇಂಜಿನಿಯರ್ ಕಿರಣ್, ನೀರು ಸರಬರಾಜು ಇಂಜಿನಿಯರ್ ಚೇತನಾ,ನಗರಸಭೆ ಸದಸ್ಯರಾದ ಬಾಸ್ಕರ್, ಮಾಜಿ ಸದಸ್ಯರು ಇದ್ದರು.

[t4b-ticker]

You May Also Like

More From Author

+ There are no comments

Add yours