ವರದಿ: ಎಸ್.ವೇದಮೂರ್ತಿ
೧೯ಹೆಚ್.ಎಲ್.ಕೆ.೧
ಹೊಳಲ್ಕೆರೆ : ತಾಲೂಕಿನ ಬೋರೆನಹಳ್ಳಿ ನರ್ಸಿಂಗ್ ವಿದ್ಯಾರ್ಥಿನಿ ಮೇಘಶ್ರೀ ಮಿಸಿಂಗ್ ಆಗಿದ್ದು, ಮೇಘಶ್ರೀ ಪತ್ತೆಗಾಗಿ ತಾಯಿ ಜಯ್ಯಮ್ಮ ಹೊಳಲ್ಕೆರೆ ತಾಲೂಕು ಚಿತ್ರಹಳ್ಳಿ ಪೊಲೀಸ್ ದೂರು ದಾಖಲು ಮಾಡಿದ್ದಾರೆ.
ಹೊಳಲ್ಕೆರೆ ತಾಲೂಕಿನ ಬೋರೆನಹಳ್ಳಿಯ ವಾಸಿಯಾಗಿದ್ದ ನರಸಿಂಹಪ್ಪ ಇವರ ಮಗಳಾಗಿದ್ದ ನÀರ್ಸಿಂಗ್ ಪದವಿಧರೆ ಮೇಘ ಶ್ರೀ ಮಂಗಳವಾರ ಬೆಳಿಗ್ಗೆ ಮನೆಯಿಂದ ಹೊರಗೆ ಹೊದವಳು ಇದ್ದಕ್ಕಿದ್ದತೆ ನಾಪತ್ತೆಯಾಗಿದ್ದಾಳೆ. ಮೇಘ ಶ್ರೀ ಪತ್ತೆಗಾಗಿ ಎಲ್ಲೇಡೆ ಪೋಷಕರು ತಲಾಸ್ ನಡೆಸಿದ್ದರೂ ನಾಪತ್ತೆಯಾಗಿದ್ದವಳು ಪತ್ತೆಯಾಗಿಲ್ಲ. ಹಾಗಾಗಿ ಮೇಘ ಶ್ರೀ ತಾಯಿ ಜಯಮ್ಮ ಮಗಳನ್ನು ಪತ್ತೆ ಮಾಡಿಕೊಡಬೇಕೆಂದು ಹೊಳಲ್ಕೆರೆ ತಾಲೂಕಿನ ಚಿತ್ರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು. ಪೊಲೀಸ್ ಮೇಘ ಶ್ರೀ ಚಹರೆ ಬಿಡುಗಡೆ ಮಾಡಿದ್ದು, ಸಾದಾರಣ ಮೈಕಟ್ಟು, ದುಂಡು ಮುಖ, ಎಣ್ಣೆಗೆಂಪು, ೫.೭ ಅಡಿ ಎತ್ತರ, ಕನ್ನಡ ಹಾಗೂ ತೆಲಗು ಬಾಷೆಯನ್ನು ಮಾತನಾಡುತ್ತಾಳೆಂದು ಪ್ರಕಟಣೆಯಲ್ಲಿ ತಿಳಿಸಿದೆ.
+ There are no comments
Add yours