ಮುಸ್ಲೀಂ ಸಮುದಾಯದ  ಮತ ಬೇಡ ಅಂದ ಬಿಜೆಪಿ ಶಾಸಕ

 

 

 

 

ದಕ್ಷಿಣ ಕನ್ನಡ:  ನಮಗೆ ಮುಸ್ಲೀಂ ಸಮುದಾಯದ  ಮತ ಬೇಡ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಬಿಜೆಪಿ ಶಾಸಕ ಹರೀಶ್ ಪೂಂಜಾ ವಿವಾದಾತ್ಮಕ ಹೇಳಿಕೆ ಸಿಡಿಸಿದ್ದಾರೆ.

 

 

ರಾಜ್ಯದಲ್ಲಿ ಧರ್ಮಧಾರಿತ ಹಿಜಾಬ್, ಹಲಾಲ್, ಮುಸ್ಲೀಂ ವ್ಯಾಪಾರಿಗೆ ನಿರ್ಬಂಧ ಆಜಾನ್ ವಿವಾದಗಳ ಬೆನ್ನಲ್ಲೇ ಹರೀಶ್ ಈ ವಿವಾದಾತ್ಮದ ಹೇಳಿಕೆ ನೀಡಿದ್ದಾರೆ.
ಧಾರ್ಮಿಕ ಸಭೆಯಲ್ಲಿ ಮಾತನಾಡಿದ ಅವರು ಚುನಾವಣೆಯಲ್ಲಿ ನಮಗೆ ಮುಸ್ಲೀಂ ಮತಗಳು ಬೇಡ. ಈ ವಿಷಯವನ್ನು ತಾಕತ್ತಿನಿಂದ ಹೇಳುತ್ತೇನೆ. ನಮಗೆ ಹಿಂದೂಗಳ ವೋಟ್ ಸಾಕು ಎಂದು ಹೇಳಿದ್ದಾರೆ.
ಮುಸ್ಲೀಂರ ಮತವಿಲ್ಲದೆ ಗೆಲ್ಲುತ್ತೇನೆ. ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣವಾಗಬೇಕು. ದತ್ತಪೀಠದಲ್ಲಿ ದತ್ತಾತ್ರೇಯರ ಪೀಠ ನಿರ್ಮಾಣವಾಗಬೇಕು. ಹೀಗಾಗಿ ತಮಗೆ ಹಿಂದೂಗಳ ವೋಟ್ ಸಾಕು ಎಂದು ತಿಳಿಸಿದ್ದಾರೆ.

[t4b-ticker]

You May Also Like

More From Author

+ There are no comments

Add yours