ಬ್ರಿಟಿಷರನ್ನು  ತೊಲಗಿಸಲು ಹುಟ್ಟಿದ ಬಲಿಷ್ಠ ಮತ್ತು ನಿಸ್ವಾರ್ಥ ಸಂಘಟನೆ ಭಾರತ ಸೇವಾದಳ: ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ

 

 

 

 

ಚಿತ್ರದುರ್ಗ:ಬ್ರಿಟಿಷರನ್ನು  ತೊಲಗಿಸಲು ಹುಟ್ಟಿದ ಬಲಿಷ್ಠ  ಮತ್ತು ನಿಸ್ವಾರ್ಥ ಸಂಘಟನೆ ಭಾರತ ಸೇವಾದಳವಾಗಿದೆ ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದರು.

 

 

ಭಾರತ ಸೇವಾದಳ ಜಿಲ್ಲಾ ಸಮಿತಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ  ಚಿತ್ರದುರ್ಗದ   ಜಿಲ್ಲಾ ಭಾರತ  ಸೇವಾದಳದ  ನೂತನ ತರಬೇತಿ ಕೇಂದ್ರದ ಕಟ್ಟಡವನ್ನು  ಉದ್ಘಾಟಿಸಿ  ಮಾತನಾಡಿದರು.
ಮಕ್ಕಳಲ್ಲಿ ರಾಷ್ಟ್ರೀಯ ಭಾವೈಕ್ಯತೆಯ ಸಂದೇಶವನ್ನು ತುಂಬಿ ಅವರನ್ನು ಭಾರತದ ಆದರ್ಶ ನಾಗರಿಕರನ್ನಾಗಿ ಪರಿವರ್ತಿಸಲು ಭಾರತ ಸೇವಾದಳ ಶ್ರಮಿಸುತ್ತದೆ. ವಿದ್ಯಾರ್ಥಿಗಳಿಗೆ ತರಬೇತಿ, ಶಿಕ್ಷಣ, ಸೇವೆ, ರಾಷ್ಟ್ರೀಯತೆ, ಸಾರ್ವಜನಿಕ ರಕ್ಷಣೆ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿಗೆ ಪೂರಕವಾಗುವ ಕಾರ್ಯಕ್ರಮಗಳು ಸೇವಾದಳದ ಮೂಲಕ‌ನಡೆಯುತ್ತದೆ. ಈ ಎಲ್ಲಾವನ್ನು ಸಮರ್ಪಕವಾಗಿ ಜಾರಿಯಾಗಲು ಪ್ರತಿಯೊಬ್ಬರು ಶ್ರಮಿಸಬೇಕು ಎಂದರು.
ಭಾರತ ಸೇವಾದಳದಿಂದ ಒಗ್ಗಟ್ಟು ಪ್ರದರ್ಶನ ಸಾಧ್ಯ,  ಜನರಲ್ಲಿ  ದೇಶಭಕ್ತಿಗಾಗಿ  ಕಟ್ಟಿದ ಸಂಘಟನೆಯಾಗಿದೆ. ರಾಜಕೀಯದಲ್ಲಿ ಕಾಣದೇ ಅಚ್ಚುಕಟ್ಟಾಗಿ ನಡೆಯುತ್ತಿದೆ. ಪ್ರತಿ ಶಾಲಾ, ಕಾಲೇಜುಗಳಲ್ಲಿ ಒಗ್ಗಟ್ಟು ಮೊಳಗಿಸಲು ದೇಶದ ಬಗ್ಗೆ ಇತಿಹಾಸವನ್ನು ತಿಳಿಸುವ ಕೆಲಸ ಸಂಘಟನೆಯಿಂದ ಆಗಬೇಕಿದೆ ಎಂದರು. ಸಿಎಂ ಬೊಮ್ಮಾಯಿ ಅಧಿಕಾರಕ್ಕೆ ಬಂದಾಗ ಕಾಲೇಜುಗಳಲ್ಲಿ ಭಾರತ ಸೇವಾದಳ ಪ್ರಾರಂಭಿಸಿರುವುದು ಒಳ್ಳೆಯ ತಿರ್ಮಾನವಾಗಿದೆ.
ಮುಂದಿನ ದಿನದಲ್ಲಿ ಎರಡನೇ ಹಂತದ ಕಟ್ಟಡ ನಿರ್ಮಾಣ ಮಾಡಲು  ಶಾಸಕರ ಅನುದಾನದಲ್ಲಿ 5 ಲಕ್ಷ ಅನುದಾನ ನೀಡುತ್ತೇನೆ ಎಂದು ಭರವಸೆ ನೀಡಿದರು.
ಭಾರತ ಸೇವಾದಳ ಪ್ರಸ್ತುತ ದಿನಗಳಲ್ಲಿ ಕಣ್ಮರೆಯಾಗುತ್ತಿದೆ. ರಾಷ್ಟ್ರದ ಹಿತಾಸಕ್ತಿಗಾಗಿ ಸಂಘಟನೆಗಳು ಅವಶ್ಯಕತೆ ಇದೆ. ಹೆಚ್ಚು ಜನರ ಹತ್ತಿರ ಮತ್ತು ಎಲ್ಲಾ ಕಡೆಗಳಲ್ಲಿ ಭಾರತ ಸೇವಾದಳ ಕೆಲಸ ಮಾಡಬೇಕು ಎಂದು ಹೇಳಿದರು.
ಭಾರತ ಸೇವಾದಳದ ಜಿಲ್ಲಾ ಅಧ್ಯಕ್ಷರಾದ ಬಿ.ಸಂಜೀವಮೂರ್ತಿ ಮಾತನಾಡಿ  ಮೊದಲು ಭಾರತ ಸೇವಾದಳದ ಸ್ವಂತ ಕಟ್ಟಡ ಇರಲಿಲ್ಲ. ಜಿಲ್ಲಾಧಿಕಾರಿ ಮೂಲಕ ಜಾಗ ಪಡೆದು  ಕಟ್ಟಡ ನಿರ್ಮಿಸಿದ್ದೇವೆ. ಸರ್ಕಾರದಿಂದ 20 ಲಕ್ಷ, ರಾಜ್ಯ ಸಭಾ ಸದಸ್ಯರಾಗಿದ್ದ ಹನುಮಂತಪ್ಪ ಅವರು 10 ಲಕ್ಷ ಹಣದಲ್ಲಿ ಮುಂಭಾಗದ ಕಟ್ಟಡ ನಿರ್ಮಿಸಿದ್ದೇವು ಅದರಿಂದ ಬಂದಂತಹ ಬಾಡಿಗೆ ಮತ್ತು ದಾನಿಗಳು , ಪಧಾಧಿಕಾರಿಗಳ ಹಣ ನೀಡಿದ್ದರಿಂದ ಒಟ್ಟು 41 ಲಕ್ಷ ವೆಚ್ಚದಲ್ಲಿ ನೂತನ ತರಬೇತಿ ಕಟ್ಟಡ ಪೂರ್ಣಗೊಳಿಸಲು ಸಾಧ್ಯವಾಯಿತು ಎಂದರು.ಈ ದೊಡ್ಡ ಹಾಲ್ ನಿರ್ಮಾಣ ಮತ್ತು ಮುಂಭಾಗದ ಅಂಗಡಿ ಬಾಡಿಗೆ ಸೇರಿಸಿ  ಮೇಲೆ ಒಂದು ಕಟ್ಟಡ ಕಟ್ಟಲು ಶ್ರಮಿಸುತ್ತೇವೆ. ನೂತನ ಕಟ್ಟಡದಲ್ಲಿ  ಚಿಕ್ಕ ಕಾರ್ಯಕ್ರಮ ಮಾಡಲು ಸಹ ಅವಕಾಶ ಮಾಡಿಕೊಡಲು ನಿರ್ಧರಿಸುತ್ತೇವೆ ಎಂದು ತಿಳಿಸಿದರು. ಶಾಸಕರು ಚಿತ್ರದುರ್ಗ ಮಾದರಿ ನಗರ ಮಾಡಿದ್ದು ಅವರು ಮನಸ್ಸು ಮಾಡಿದರೆ ಮತ್ತೊಂದು ಹಂತದ ಕಟ್ಟಡಕ್ಕೆ ಹಣ ನೀಡುತ್ತಾರೆ ಎಂದರು.
ಭಾರತ ಸೇವಾದಳದ ರಾಜ್ಯ ದಳಪತಿಗಳಾದ  ಚಂದ್ರಶೇಖರ್ ಮಾತನಾಡಿ ಭಾರತ ಸೇವಾದಳ ಪ್ರತಿ ಹಳ್ಳಿಯಲ್ಲಿ ಹೋರಟ ಮಾಡಿದೆ. ಭಾರತೀಯ ಸಂವಿಧಾನದಲ್ಲಿ  ಭಾರತ ಸೇವಾದಳಕ್ಕೆ ವಿಶೇಷ ತಿದ್ದುಪಡಿ ತಂದು ಬಾವುಟ ಹಾರಿಸಲು ಅವಕಾಶ ಕಲ್ಪಿಸಲಾಗಿದೆ. ಯಾವುದೇ ರಾಜಕೀಯ ಪಕ್ಷಗಳಿಗೆ ಭಾರತ ಸೇವಾದಳ ಸೀಮಿತವಲ್ಲ. ಎಲ್ಲಾ ಸಂಘಗಳ‌ ನಿರ್ಮಾತೃ  ಸೇವಾದಳವಾಗಿದೆ. ರಾಷ್ಟ್ರದ ದೇಶದ ಏಕತೆಗಾಗಿ ಸೇವಾದಳ ಸಾಕಷ್ಟು ಪ್ರಯತ್ನ ಮಾಡುತ್ತಿದೆ ಎಂದು ತಿಳಿಸಿದರು.
ನಗರಸಭೆ ಅಧ್ಯಕ್ಷೆ ತಿಪ್ಪಮ್ಮ ವೆಂಕಟೇಶ್, ಅಪರ ಜಿಲ್ಲಾಧಿಕಾರಿ ಬಾಲಕೃಷ್ಣ, ನಗರಸಭೆ ಸದಸ್ಯರಾದ  ಶ್ರೀದೇವಿ ಚಕ್ರವರ್ತಿ, ರಾಜ್ಯ ಅಧ್ಯಕ್ಷರಾದ ಬಿ.ಸಿ.ವೆಂಕಟೇಶ್, ರಾಜ್ಯ  ಪ್ರಧಾನ ಕಾರ್ಯದರ್ಶಿ ಎಂ.ಕೆ.ಕಮಲ್  ಕುಮಾರ್, ಜಿಲ್ಲಾ ಉಪಾಧ್ಯಕ್ಷ ಎಂ.ಸಿ.ದೇವದಾಸ್, ಕಾರ್ಯದರ್ಶಿ ಶಿವಕುಮಾರ್, ಜಿಲ್ಲಾ ಸಂಘಟಕ ಬಸವರಾಜ್, ಕೋಶಧ್ಯಕ್ಷ ನಿರಂಜನ್ ಮೂರ್ತಿ ಮತ್ತು ಅರುಣ್ ಕುಮಾರ್ ನಿರೂಪಿಸಿದರು‌.
[t4b-ticker]

You May Also Like

More From Author

+ There are no comments

Add yours