ಬೇಸಿಗೆ ಹೆಚ್ಚುತ್ತಿದೆ ಪ್ರತಿ ಗ್ರಾಮಕ್ಕೂ ಕುಡಿಯುವ ನೀರು ಒದಗಿಸುವ ಕಾರ್ಯ ಶರವೇಗದಲ್ಲಿ ನಡೆಯಬೇಕು: ಶಾಸಕ ಟಿ.ರಘುಮೂರ್ತಿ

 

 

 

 

ಚಳ್ಳಕೆರೆ-11 ಬೇಸಿಗೆ ಹೆಚ್ಚುತ್ತಿದೆ ಪ್ರತಿ ಗ್ರಾಮಕ್ಕೂ ಕುಡಿಯುವ ನೀರು ಒದಗಿಸುವ ಕಾರ್ಯ ಶರವೇಗದಲ್ಲಿ ನಡೆಯಬೇಕೆಂದು ಶಾಸಕ ಟಿ.ರಘುಮೂರ್ತಿ ಹೇಳಿದರು.
ಅವರು ಸೋಮವಾರ ನಗರದ ದ ತಾಲ್ಲೂಕು ಪಂಚಾಯತಿ ಕಾರ್ಯಾಲಯದ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಪ್ರತಿ ಗ್ರಾಮದಲ್ಲಿ ಕುಡಿಯುವ ನೀರು, ಸ್ವಚ್ಚತೆಯೂ ಸೇರಿದಂತೆ ಎಲ್ಲಾ ಮೂಲ ಸೌಲಭ್ಯಗಳನ್ನು ಅಧಿಕಾರಿಗಳು ಚಾಚೂತಪ್ಪದೆ ಪಾಲಿಸಬೇಕು. ಗ್ರಾಮ ವ್ಯಾಪ್ತಿಯಲ್ಲಿ ಉದ್ಯೋಗ ಖಾತರಿ ಕಾಮಗಾರಿಗಳ ಅನುಷ್ಠಾನ ಮಾಡುವ ಮೂಲಕ ಗೂಳೆ ಹೋಗುವ ಜನರಿಗೆ ಕೆಲಸ ನೀಡಿ ಬೇಸಿಗೆ ಸಮಯದಲ್ಲಿ ಸಹಕಾರ ನೀಡಬೇಕು, ಪ್ರತಿಯೊಬ್ಬರಿಗೂ ಉದ್ಯೋಗ ಖಾತರಿ ಯೋಜನೆ ಜಾಬ್ ಕಾರ್ಡ್ ಮಾಡಿಸಿಕೊಳ್ಳುವಂತೆ ಸೂಚನೆ ನೀಡಿ, ಯಂತ್ರಗಳ ಮೂಲಕ ಕೆಲಸ ಮಾಡಿಸದೆ ಜಾಬ್ ಕಾರ್ಡ್ ಹೊಂದಿರುವ ಎಲ್ಲರಿಗೂ ಉದ್ಯೋಗ ನೀಡಿ ಎಂದರು. ಆರೋಗ್ಯ ಅಧಿಕಾರಿಗಳು ಮತ್ತೊಂದು ರೂಪಂತರಿ ವೈರಾಣು ಕಾಣಿಸಿಕೊಳ್ಳುವ ವದಂತಿ ಇದೆ ಮೊದಲೇ ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.
ಸಭೆಗೆ ಅಧಿಕಾರಿಗಳು ಖುದ್ದು ಹಾಜರಾಗಿ ಮಾಹಿತಿ ನೀಡಬೇಕು, ಎಲ್ಲಾ ದಾಖಲಾತಿಗಳನ್ನು ಪರಿಪೂರ್ಣಗೊಳಿಸಿಕೊಂಡು ಸಭೆ ಬನ್ನಿ ಎಂದು ತಾಕೀತು ಮಾಡಿದರು.
ಈ ಸಮಯದಲ್ಲಿ ತಹಶೀಲ್ದಾರ್ ಎನ್. ರಘುಮೂರ್ತಿ, ತಾಲೂಕು ಕಾರ್ಯನಿರ್ವಹಣಾಧಿಕಾರಿ ಹನುಮಂತಪ್ಪ, ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಇಂಜಿನಿಯರ್ ಮಾಂತೇಶ ಕಣ್ಣೂರು, ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಜರಿದ್ದರು.

 

 

[t4b-ticker]

You May Also Like

More From Author

+ There are no comments

Add yours